ಯಾರೂ ಒಪ್ಪದ ಸಾಂಗ್ಲೀಯಾನ ಕತೆಯನ್ನ ಶಂಕರ್‌ ಒಪ್ಪಲು ಕಾರಣ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 82

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ಪರಮ್: ನೀವು ಸಾಗ್ಲೀಯಾನ ಮತ್ತೆ ಸಿ.ಬಿ.ಐ. ಶಂಕರ್ ಅಲ್ಲಿ ಮಾಡಿದ್ರಿ, ಆದ್ರೆ ಅದ್ರಲ್ಲಿ ಅವ್ರು ಡೈರಕ್ಟರ್ ಅಲ್ಲ ಬರೀ ಆಕ್ಟರ್. ಆಕ್ಟರ್ ಆಗಿ ಸೆಟ್ ಅಲ್ಲಿ ಹೇಗಿರ್ತಿದ್ರು ಸರ್, ಅಂದ್ರೆ ಅಲ್ಲಿ ಡೈರೆಕ್ಟರ್ ತನ ತೋರಿಸ್ತಿದ್ರಾ?


ಅವಿನಾಶ್: ಇಲ್ಲ ಶಂಕರ್ ಹಾಗೇನೂ ಮಾಡ್ತಿರ್ಲಿಲ್ಲ, ಅಫ್ಕೋರ್ಸ್ ಸಜೆಷನ್ ಎಲ್ಲಾ ಕೊಡ್ತಿದ್ರು. ಅಂದ್ರೆ ತಾವೇ ಓವರ್ ಟೇಕ್ ಮಾಡಿದ್ದನ್ನ ಯಾವತ್ತೂ ನೋಡ್ಲಿಲ್ಲ ನಾನು. ‘ಸಾಂಗ್ಲೀಯಾನ ಮತ್ತೆ ಸಿ.ಬಿ.ಐ. ಶಂಕರ್ ಮಾಡಿದ್ದು ‘ನಂಜುಂಡಪ್ಪ’ಅಂತಡೈರೆಕ್ಟರ್. ಅವ್ರು ಕಾರ್ಡಿಯಕ್ ಅರೆಸ್ಟ್ ಆಗಿ ಹೋಗ್ಬಿಟ್ರು. ಅವ್ರ ಮೊದಲನೇ ಸಿನಿಮಾ ಕತೆ ಮಾಡ್ದಾಗ ಯಾರೂ ಒಪ್ಪಿರ್ಲಿಲ್ಲ, ಯಾಕಂದ್ರೆ ಅವ್ರಿಗೆ ಕತೆ ಹೇಳಕ್ಕೆ ಬರ್ತಿರ್ಲಿಲ್ಲ. ಕತೆ ಕೇಳಿದ್ರೆ ಆಕ್ಟರ್ “ ಏನಯ್ಯ ಹೇಳ್ತೀಯ ಹೋಗಯ್ಯ” ಅನ್ನೋಲೆವೆಲ್ ಗೆ ಇದ್ರು. ಶಂಕರ್ ನಾಗ್ ಗೆ ಸಾಂಗ್ಲೀಯಾನ ಕತೆ ಹೇಳ್ದಾಗ “ಆಯ್ತು ಕಣೋ ಮಾಡ್ತಿನಿ”ಅಂದಿದ್ದಾರೆ. ಹಾಗೆ ಸಾಂಗ್ಲೀಯಾನ ಹಿಟ್ ಆಯ್ತು, ಸಿ.ಬಿ.ಐ.ಶಂಕರ್ ಕೂಡ ಹಿಟ್ ಆಯ್ತು. ಸಾಂಗ್ಲೀಯಾನ ಪಾರ್ಟ್ 2 ಹಿಟ್ ಆಯ್ತು. ಮೂರು ಹಿಟ್ ಕೊಟ್ಬಿಟ್ರು ನಂಜುಂಡಪ್ಪ ಅವ್ರು.ಮುಂದುವರೆಯುವುದು…

14 views