ರಮೇಶ್ ಭಟ್-ಅನಂತನಾಗ್ ಸೂಚಿಸಿದ ಆಗೊಂಬೆ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 24

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)
ಆಮೇಲೆ ಹೇಗೆ ಮಾಡೊದು? ಎಲ್ಲಿ ಮಾಡೋದು? ಅಂತ ಒಂಥರಾ ಸರ್ಕಸ್ಸೆ ಶುರುವಾಯ್ತು. ಕಷ್ಟಾಂತಂದ್ರೆ ಎಲ್ಲಿ ಮಾಡೊದು ಅಂತ ಜಾಗನೇ ಸಿಗ್ಲಿಲ್ಲ. ಯಾಕಂದ್ರೆ ಫಸ್ಟ್ ಅಪಿಯರೆನ್ಸಲ್ಲೇ ಫಿಫ್ಟಿ ಪರ್ಸೆಂಟ್ ಮಾರ್ಕ್ಸ್ ಬರುತ್ತೆ. ಇವಾಗ ಯಾವುದೋ ಒಂದು ಪಾತ್ರ, ಆ ಪಾತ್ರದ ತರ ನಾನು ಕಾಣಿಸ್ಬಿಟ್ರೆ ಫಿಫ್ಟಿ ಪರ್ಸೆಂಟ್ ಓಕೆ. ಇನ್ನೊಂದು ಹತ್ತು, ಹದಿನೈದು ಪರ್ಸೆಂಟು ಅಭಿನಯ ಮಾಡಿದ್ರೆ ಫಸ್ಟ್ ಕ್ಲಾಸ್. ಕಣ್ಣಿಗೆ ಕಾಣ್ಸಿದ ತಕ್ಷಣ, ಒಕೆ ಅನ್ನಿಸ್ಬೇಕು. ಅದಕ್ಕೆ ಸರಿಯಾಗಿ ಒಳ್ಳೆಯ ಬರಹ ಆಗಿದ್ರೆ, ಅದು ಪಾಸ್ ಆಗುತ್ತೆ. ಸೋ ಲೊಕೇಶನ್ ವಿಷಯದಲ್ಲೂ ಅಷ್ಟೇ, ಪ್ರಾಪರ್ಟೀಸ್ ಎಲ್ಲಿಡ್ತೀವಿ? ಆ ಜಾಗ ಅಲ್ಲಿ? ಆಂಬಿಯನ್ಸ್ ಹೇಗೆ ಕೂರ್ಸೊದು? ಆ ಜಾಗಕ್ಕೆ ಅದೆಲ್ಲಾ ಬೇಕು. ಯಾಕಂದ್ರೆ ಸ್ವಾತಂತ್ರ ಪೂರ್ವದ್ದು ಕತೆಗಳು ಎಲ್ಲ. ನೀವು ನೋಡಿದ್ರೆ ಗೊತ್ತಾಗುತ್ತೆ ಮಧ್ಯ ಮಧ್ಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿಗಳು, ಫ್ರೀಡಮ್ ಫೈಟರ್ಸ್ ಕಾಣಿಸ್ತನೇ ಇರುತ್ತೆ. ಅದೆಲ್ಲವನ್ನ ಕ್ರಿಯೇಟ್ ಮಾಡಿದ್ದಾನೆ. ಅದು ಶಂಕರ್ ಕ್ರಿಯೇಟಿವಿಟಿ. ಯಾರೋ ಮನೆ ಜಗಲಿಯಲ್ಲಿ ಕೂತ್ಕೊಂಡು ಮಾತಾಡ್ತಿದ್ರೆ, ಫ್ರೀಡಮ್ ಫೈಟರ್ಸ್ ಯಾಕೆ ಹೋಗ್ತಿರ್ಬೇಕು? ಜಗಲಿಯಲ್ಲಿ ಕೂತ್ಕೊಂಡು ಮಾತಾಡ್ತಿರೋ ಸಬ್ಜೆಕ್ಟಿಗೂ, ಅವ್ರು ಹೋಗ್ತಾ ಇರೋದಕ್ಕೂ ಸಂಬಂದ ಇಲ್ಲ. ಬಟ್ ಅದು ಆ ಟೈಮನ್ನ ರೆಪ್ರೆಸೆಂಟ್ ಮಾಡುತ್ತೆ, ಆ ಪೀರಿಯೇಡನ್ನ ರೆಪ್ರೆಸೆಂಟ್ ಮಾಡುತ್ತೆ. ಸೋ ಅದೆಲ್ಲಾ ಶಂಕರ್ ಕ್ರಿಯೇಶನ್.


ಹಂಗಾಗಿ ಅದಕ್ಕೆ ಸರಿಯಾದ ಜಾಗ ಬೇಕು, ಸುಮಾರು ಕಡೆ ಹುಡ್ಕಿದ್ವಿ.ಅನಂತ್ ನಾಗ್ ಅವ್ರು ಆಗುಂಬೆಗೆ ಯಾವುದೋ ಶೂಟಿಂಗ್ ಗೆ ಹೋಗಿದ್ರು, ಅವ್ರ ಕಾರು ಅಲ್ಲೆಲ್ಲೋ ಆಕ್ಸಿಡೆಂಟ್ ಆಗಿತ್ತು, ಅಲ್ಲೆಲ್ಲೋ ಘಾಟಿಯಲ್ಲಿ. ಅದು ಜ್ಙಾಪಕ ಬಂತು, ಅನಂತ್ ಅವ್ರಿಗೆ. ‘ಒಂದ್ಸಲ ಆಗುಂಬೆ ನೋಡ್ರಿ” ಅಂದ್ರು. ಆಗುಂಬೆ ನೋಡಿದ್ವಿ ಇಷ್ಟ ಆಯ್ತು. ಯಾಕಂದ್ರೆ ಹೈವೇ ಬಲಗಡೆಗೆ ಒಂದು ಊರು ಕೇರಿ. ಒಂದು ಸಣ್ಣ ನದಿ ತರ ಇದೆ. ಅದಕ್ಕೆ ಆ ಕಡೆ ತೋಡು ಅಂತಾರೆ. ನದಿಯ ಹಾಗೆ ಫೋರ್ಸ್ ಇರಲ್ಲ ಆರಡಿ, ಏಳಡಿ ಇರುತ್ತೆ ಒಂದಡಿ ಆಳದಲ್ಲಿ ಹರಿಯುತ್ತೆ. ಅದೆಲ್ಲ ತುಂಬ ಆಪ್ಟ್ ಆಗಿತ್ತು ನಮಗೆ. ಆಮೇಲೆ ಎಲ್ಲ ಹಂಚಿನ ರೂಫ್ ಇತ್ತು. ಆರ್ಕಿಟೆಕ್ಚರೂ ಹೊಂದ್ಕೋಬೇಕಲ್ಲ ಅದಕ್ಕೆ. ಹಂಗಾಗಿ ಅದನ್ನ ಸೆಲೆಕ್ಟ್ ಮಾಡಿದ್ವಿ.ಮುಂದುವರಯುವುದು…

19 views