“ರಮೇಶ್ ಭಟ್ ಅವರು ಕಂಡ ಶಂಕರ್ ನಾಗ್”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 14

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಶಂಕರ್‌ ನಾಗ್‌ ಎಂಬ ಗೆಳೆಯನ ಭೇಟಿ ಆದದ್ದು ಹೀಗೆ

ಪರಮ್: ನಮಸ್ಕಾರ ಸರ್, ಇದು ನನ್ನ ಸೌಭಾಗ್ಯ ಪರ್ಸನಲ್ ಆಗಿ ಯಾಕಂದ್ರೆ ಬಹಳ ಹಿರಿಯ ಕಲಾವಿದ, ಹಾಗೂ ನಿರ್ದೇಶಕ ಕೂಡ ತಾವು. ಮೊದಲನೆಯದಾಗಿ ರಂಗಭೂಮಿಯಿಂದ ಶಂಕರ್ ನಾಗ್ ಅವ್ರ ಒಡನಾಟ ಸಿಕ್ತು, ಅಂತ ನಾನು ಅನ್ಕೊತೀನಿ. ಸೋ ನಿಮ್ಮಿಬ್ಬರ ಗೆಳೆತನ, ಒಡನಾಟ, ಭಾಂದವ್ಯ ಹೇಗೆ ಪ್ರಾರಂಭ ಆಯ್ತು ಸರ್?


ರಮೇಶ್ ಭಟ್: ರಂಗಭೂಮಿನೇ ಬೆಸುಗೆ ಹಾಕಿದ್ದು. ಬೆಂಗಳೂರಲ್ಲೇ ನನ್ನ ವಾಸ ಅಂತ ಶಂಕರ್ ನಾಗ್ ಅವ್ರು ಡಿಸೈಡ್ ಮಾಡಿದ್ಮೇಲೆ, ಈ ರಂಗಭೂಮಿ ಚಟುವಟಿಕೆಗಳು ಹೇಗಿರುತ್ತೆ? ನಾನು ಅದನ್ನ ಶುರು ಮಾಡ್ಬೇಕು ಅಂತ ತಡಕಾಡ್ಕೊಂಡಿದ್ರು. ನಮ್ಮ ಕ್ಯಾಮೆರಾಮ್ಯಾನ್ ಗೌರಿಶಂಕರ್, ನಮ್ಮ ರಕ್ಷಿತಾ ಅವ್ರ ತಂದೆಯವರು ನನ್ನ ಸ್ನೇಹಿತರು. ಸಿನಿಮಾದಲ್ಲಿ ಕೆಲಸ ಮಾಡುವಾಗ್ಲೂ ಪರಿಚಯ. ಅದಕ್ಕಿಂತ ಮುಂಚಿನಿಂದಲೂ ಪರಿಚಯ. ಯಾಕಂದ್ರೆ ನಾನು ಗಾಂಧಿ ಬಜಾರ್, ನ್ಯಾಷ್ನಲ್ ಕಾಲೇಜ್ ಆಪೊಸಿಟಲ್ಲಿ, ಒಂದು ಶಾಪ್ ಇಟ್ಕೊಂಡಿದ್ದೆ. ಅವ್ರ ಮನೆ ಆಪೊಸಿಟ್ ಅಲ್ಲೇ ಇದ್ದದ್ದು. ಹಾಗಾಗಿ ಬಂದು ಹೋಗಿ ಮಾಡ್ತಿದ್ರು. ಗೌರಿಶಂಕರ್ ನನ್ನ ನಾಟಕಗಳನ್ನು ನೊಡ್ದವ್ರು. ಹಾಗೂ ನನ್ನ ಜೊತೆ ಸಿನಿಮಾಗಳಲ್ಲೂ ಕೆಲ್ಸ ಮಾಡ್ದವ್ರು. ಹಾಗಾಗಿ ಗೌರಿಶಂಕರ್ ಅವ್ರು ಶಂಕರ್ ಗೆ “ಒಬ್ಬ ಹುಡುಗ ಇದ್ದಾನೆ ರಮೇಶ ಅಂತ, ಅವ್ನ ಸೇರಿಸ್ಕೋ ನಿನಗೆ ಅನುಕೂಲ ಆಗುತ್ತೆ” ಅಂತ ಹೇಳಿದ್ದಾರೆ. ಸೋ ಶಂಕರ್ ನನ್ನನ್ನ ಹುಡುಕಾಡಿದ್ದಾರೆ, ಆಮೇಲೆ ನಾನು ಸಿಕ್ದೆ. ಹಾಗೆ ನಮ್ಮ ಮೊದಲನೇ ನಾಟಕ ಶುರು ಮಾಡಿದ್ವಿ. ಒಂದು ತಂಡ ಕಟ್ಟಿದ್ವಿ. ಒಂದು ಪ್ರೆಸ್ ಮೀಟ್ ಮಾಡಿ, ‘ಸಂಕೇತ್’ ಹುಟ್ಕೋತು.


ಶಂಕರ್‌ ನಾಟಕಕ್ಕೆ ಹಾಕಿದ್ದ ಸೆಟ್‌ನ ನೋಡಿ ಬೇರೆ ರಂಗತಂಡಗಳೆಲ್ಲ ಹೊಟ್ಟೆ ಉರ್ಕೊಂಡಿದ್ವು

ಗಿರೀಶ್ ಕಾರ್ನಾಡ್ ಅವ್ರ ‘ಅಂಜು ಮಲ್ಲಿಗೆ’ಮೊದಲನೇ ನಾಟಕ ಸಂಕೇತ್ ತಂಡದ್ದು. ಆ ನಾಟಕದಲ್ಲಿ ಅನಂತ್ ನಾಗ್ ಪಾರ್ಟ್ ಮಾಡ್ತಾರೆ ಅಂತ ಆಯ್ತು. ಸರಿ ನಾನು ಒಂದು ಸಣ್ಣ ಪಾತ್ರ ಮಾಡ್ದೆ. “ಸರಿ ಅನಂತ್ ನ ನಂಬೊದು ಹೇಗೆ? ಒಂದು ನಾಲ್ಕು ದಿನ ಬರ್ತಾರೆ, ಆಮೇಲೆ ಆಗಲ್ಲ ಅಂತಾರೆ, ನೀನು ಒಂದು ಸ್ಟಾಂಡ್ ಬೈ ನೋಡ್ಕೊಂಡಿರು. ಆ ಪಾತ್ರನ” ಅಂತ ಹೇಳ್ತಿದ್ರು ಶಂಕರ್. ನಾಟಕ ಸಕ್ಸಸ್ ಫುಲ್ ಆಯ್ತು, ಒಂದು ಅದ್ಭುತವಾದ ಸ್ಟೇರ್ ಕೇಸ್ ಇರುವಂತಹ ಸೆಟ್ ಹಾಕಿದ್ವಿ. ಹವ್ಯಾಸಿ ನಾಟಕ ತಂಡಗಳು, ಅಷ್ಟೊಂದು ದುಡ್ಡು ಹಾಕಿ ಆಮೇಲೆ ವಾಪಸ್ ತಗೊಳೋದು ತುಂಬಾ ಕಷ್ಟದ ಕೆಲಸ. ಒಂದು ಲಕ್ಷ, ಎರಡು ಲಕ್ಷ ಎಲ್ಲಾ, ಅದೂ ಆಗ 1978 ರಲ್ಲಿ ನಾನು ಹೇಳ್ತಿರೋದು. ಅದೊಂದು ಸೆನ್ಶೇಶನಲ್ ನ್ಯೂಸ್ ಆಯ್ತು, ಹವ್ಯಾಸಿ ರಂಗತಂಡಗಳಲ್ಲೆಲ್ಲಾ. ಸರಿ ಸುಮಾರು ಅಪ್ರಿಸಿಯೇಷನ್ ಸಿಕ್ತು. ಇನ್ನು ಕೆಲವು ಜನ “ಇವ್ರು ಬಾಂಬೆಯಿಂದ ಬಂದು ಇಷ್ಟೊಂದು ಹಣ ಖರ್ಚು ಮಾಡಿ, ಬೇರೆ ಯಾರೂ ನಾಟಕ ಮಾಡದ ಹಾಗೆ ಮಾಡಿದ್ರು” ಅಂತ ಹೇಳ್ತಿದ್ರು. ಅದನ್ನ ಆಕ್ರೋಶ ಅಂತ ಕರೆಯೊದಾ? ಹೊಟ್ಟೆಉರಿ ಅಂತ ಕರೆಯೊದಾ? ಅಥವಾ ಅಪ್ರಿಸಿಯೇಷನ್? ಯಾವ ರೀತಿ ಮಾಡ್ಬೇಕು ಅಂತ ಗೊತ್ತಾಗದೆ, ಹಾಗೆ ಹೇಳ್ತಿದ್ರಾ ಗೊತ್ತಿಲ್ಲ. ಯಾಕಂದ್ರೆ ನನಗೂ ಕೆಲವರು “ನೀನೂ ಅವ್ರ ಜೊತೆ ಸೇರ್ಕೊಂಡಿದ್ದೀಯ.” ಅಂತ ಅಸಮಾಧಾನ ಮಾಡ್ತಿದ್ರು.ಮುಂದುವರೆಯುವುದು…

6 views