ರವಿಚಂದ್ರನ್‌,ಮುಖ್ಯಮಂತ್ರಿ ಚಂದ್ರು ಅವರು ಕಷ್ಟಕಾಲದಲ್ಲಿ ನನ್ನ ಉಳಿಸಿದ್ರು

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ-23ಬ್ಯಾಂಕ್ ಜನಾರ್ಧನ್: ಈ ಮಧ್ಯದಲ್ಲಿ ನಂಗೆ ಈ ಜಂಜಾಟದಲ್ಲಿ ಹಾರ್ಟ್ ಪ್ರಾಬ್ಲಮ್ ಆಗೋಯ್ತು. ಅವಾಗ್ಲೂ ನನ್ನ ಹತ್ರ ದುಡ್ಡು ಇರ್ಲಿಲ್ಲ. ಹಾಸ್ಪೆಟಲಲ್ಲಿ ಅಡ್ಮಿಟ್ ಆಗಿದ್ದೆ. ತಿಪಟೂರಲ್ಲಿ ಜಗ್ಗೇಶ್ ಹಾಗೂ ನಂದು ವಂಷಕ್ಕೊಬ್ಬ ಸಿನಿಮಾದ ಶೂಟಿಂಗ್ ನಡಿತಾ ಇತ್ತು. ನಾನು ಹಾಗೂ ಮುಖ್ಯಮಂತ್ರಿ ಚಂದ್ರು ಒಂದು ರೂಮಲ್ಲಿ ಇದ್ವಿ. ಶೂಟಿಂಗ್ ನಡಿತಾ ಇದ್ದಾಗ ಯಾಕೋ ಸ್ವಲ್ಪ ಎದೆ ನೋವು ಕಾಣ ಸ್ಕೊಳ್ತು. ಮತ್ತೆ ರೂಮಿಗೆ ಬಂದಾಗ ಮಲ್ಗಕ್ಕೇ ಆಗ್ತಾ ಇಲ್ಲ. ಎದೆ ನೋವು ಶುರುವಾಯ್ತು. ಆಮೇಲೆ ನಾನು ತಿಪಟೂರಲ್ಲಿ ಒಂದು ಡಾಕ್ಟರ್‍ಗೆ ತೋರ್ಸಿದೆ. “ಇಲ್ಲಿ ಆಗಲ್ಲ. ನೀವು ಸ್ವಲ್ಪ ಅರ್ಜೆಂಟ್ ಹಾರ್ಟ್ ಹಾಸ್ಪೆಟಲ್ ಮಹಾವೀರ್ ಜೈನ್‍ಗೆ ತೋರ್ಸಿ” ಅಂದ್ರು. ಅಂತದ್ರಲ್ಲೂ ಕೂಡ ಶೆಡ್ಯೂಲ್ ಮುಗಿಸ್ಕೊಂಡೆ. ಆ ಎದೆ ನೋವು ಇದ್ದಾಗ್ಲೂ ಕೂಡ ಆ ಪಿಚ್ಚರ್ ಮುಗಿಸ್ಕೊಂಡೆ. ಆ ಪಿಚ್ಚರ್ ಮುಗಿಸಿ ಇಲ್ಲಿ ಬಂದು ಡಬ್ಬಿಂಗೂ ಮಾಡ್ದೆ.


ನಂತರ ಮಧ್ಯಾಹ್ನ ಮೂರು ಗಂಟೆಗೆ ಹೋಗಿ ಮಹಾವೀರ್ ಜೈನ್ ಹಾಸ್ಪೆಟಲ್‍ಗೆ ಹೋಗಿ ಸೇರ್ಕೊಂಡೆ. ಅಲ್ಲಿ “ಹಾರ್ಟ್ ಪ್ರಾಬ್ಲಮ್ ಇದೆ. ಬೇಗ ಅಡ್ಮಿಟ್ ಆಗ್ಬೇಕು” ಅಂದ್ರು. ಅಡ್ಮಿಟ್ ಆದೆ. ದುಡ್ಡು ಇರ್ಲಿಲ್ಲ. ನನ್ನ ಹತ್ರ ಏನೂ ದುಡ್ಡು ಇರ್ಲಿಲ್ಲ. ರವಿಚಂದ್ರನ್ ಅವರಿಗೆ ಫೋನ್ ಮಾಡ್ದೆ. “ಏನು?” ಅಂದ್ರು. “ಹೀಗಾಗಿದೆ ಸಾರ್” ಅಂದೆ. ಅವಾಗ ಎಲ್ಲಾ ಹೀರೋಗಳು ಪರಿಚಯ ಆಗಿದ್ರು. “ಎಷ್ಟು ಬೇಕು?” ಅಂದ್ರು. ನಾನು ಕೇಳ್ದಷ್ಟು ಕೊಡ್ತಾ ಇದ್ರೋ ಏನೋ ಗೊತ್ತಿಲ್ಲ. “ಎಷ್ಟಾದ್ರೂ ಕಳಿಸ್ಕೊಡಿ ಸಾರ್” ಅಂತ ಹೇಳ್ದೆ. ಇಪ್ಪತ್ತೈದು ಸಾವಿರ ರೂಪಾಯಿ ಕಳಿಸ್ಕೊಟ್ರು. ಆಮೇಲೆ ಮುಖ್ಯಮಂತ್ರಿ ಚಂದ್ರು ಅವರು ಇಪ್ಪತ್ತು ಸಾವಿರ ರೂಪಾಯಿ ಕಳಿಸಿ ಕೊಟ್ರು. ಹಾರ್ಟ್ ಆಪರೇಶನ್ ಮಾಡಿಸ್ದೆ. ಅದಾದ್ಮೇಲೆ ಮತ್ತೆ ನಮ್ಮ ಜೀವನ ಯಥಾ ಸ್ಥಿತಿಗೆ ಬಂತು. ಪಿಚ್ಚರ್‍ಗಳು ಸ್ಟಾರ್ಟ್ ಆಯ್ತು. ಇವತ್ತಿನ ವರೆಗೂ ಪಿಚ್ಚರಲ್ಲಿ ಪಾರ್ಟ್ ಮಾಡ್ತಾ ಇದ್ದೀನಿ.ಮುಂದುವರೆಯುವುದು…

400 views