ರಾಜಕುಮಾರ್‌ ಮತ್ತು ಅವರ ಕುಟುಂಬಲ್ಲಿ ತಮ್ಮ ವರದಪ್ಪನವರ ಪಾತ್ರ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 41


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ವರದಪ್ಪ ಮತ್ತು ರಾಜ್‌ಕುಮಾರ್‌ ಅವರು ರಾಮ ಲಕ್ಷ್ಮರಿದ್ದಂತೆ ಇದ್ದರು. ಒಡಹುಟ್ಟಿದವರನ್ನೆಲ್ಲ ರಾಜ್‌ಕುಮಾರ್‌ ಅವರು ತುಂಬಾ ಪ್ರೀತಿ ಮಾಡುತ್ತಿದ್ದರು. ಸಹೋದರಿ ಶಾರದಮ್ಮ ತೀರಿ ಹೋದಾಗ ರಾಜ್‌ಕುಮಾರ್‌ ಅತ್ತು, ಅತ್ತು ಸುಸ್ತಾಗಿ ಹೋಗಿದ್ದರು. ವರದಪ್ಪ ಜೀವಕ್ಕೆ ಜೀವ ಆಗಿದ್ದ. ರಾಜ್‌ಕುಮಾರ್‌ ಮತ್ತು ಅವರ ಮಕ್ಕಳ ಕೆರಿಯರ್‌ನಲ್ಲಿ ವರದಪ್ಪ ಬಹಳ ಮುಖ್ಯ ಪಾತ್ರ ವಹಿಸಿದ್ದ. ಹಾಗಾಗಿ ಅವರ ಕುಟುಂಬದ ಬಹು ಮುಖ್ಯವಾದ ವ್ಯಕ್ತಿಯಾಗಿದ್ದ ಆತ.


ತಮ್ಮನನ್ನು ಕಂಡರೆ ರಾಜ್‌ಕುಮಾರ್‌ ಅವರಿಗೆ ಅತೀವವಾದ ಪ್ರೀತಿ. ವರದಪ್ಪ ನಾಲ್ಕು ಹೆಣ್ಣು ಮಕ್ಕಳನ್ನು ಸದಾಶಿವ ನಗರದ ಸೇಂಟ್‌ ಮೇರಿಸ್‌ ಕಾನ್ವೆಂಟ್‌ಗೆ ಸೇರಿಸಿದ. ಅಲ್ಲಿಯೇ ಹತ್ತಿರದಲ್ಲಿ ಚಿಕ್ಕ ಬಾಡಿಗೆ ಮನೆ ಮಾಡಿಕೊಂಡಿದ್ದ. ರಾಜ್‌ಕುಮಾರ್‌ ಅವರನ್ನು ಬಿಟ್ಟ ಮೇಲೆ ಅವರಿಗೆ ಬೇರೆ ಆದಾಯವೇ ಇರಲಿಲ್ಲ. ಆದರೆ, ದುಡ್ಡಿಗೆ ಕೊರತೆಯಿರಲಿಲ್ಲ. ಅವನ ಬಳಿಯೇ ಬೇಕಾದಷ್ಟು ದುಡ್ಡು ಇತ್ತು. ರಾಜ್‌ಕುಮಾರ್‌ ಅವರು ಶೂಟಿಂಗ್‌ ಬಂದಾಗಲೆಲ್ಲ ಅವನ ಮನೆಗೆ ಹೋಗಿ ಉಳಿದುಕೊಳ್ಳುತ್ತಿದ್ದರು.
ಮುಂದುವರೆಯುವುದು...

25 views