ರಾಜಕುಮಾರ್‌ ಹೋದ ಮೇಲೆ ನಾವು ಮಾಡಿದ ಕೆಲಸಗಳು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 121


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ನನ್ನ ಜೊತೆಗಾರರು ಯಾರು ಇಲ್ಲ ಎಲ್ಲರನ್ನೂ ಕಳೆದುಕೊಂಡು ಬಿಟ್ಟಿದ್ದೇನೆ. ರಾಜ್‌ಕುಮಾರ್‌ ಹೋದ ಮೇಲೆ ನಾವು ಚಿತ್ರಗಳನ್ನೇ ಮಾಡಿಲ್ಲ. ಅದೇ ಸಮಯಕ್ಕೆ ಆದರ್ಶ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗೆ ಪ್ರಿನ್ಸಿಪಲ್‌ ಆದೆ. ನಾನು ನೀಡಿದ ವಿದ್ಯಾ ಜ್ಞಾನದಿಂದ ಹಲವರು ಜೀವನ ಕಲ್ಪಿಸಿಕೊಂಡಿದ್ದಾರೆ ಎಂದಾದರೆ, ಅದಕ್ಕಿಂತ ಬೇರೆ ಜೀವನ ಸಾರ್ಥಕತೆ ಇಲ್ಲ. ನಾಟಕಕ್ಕೆ ಬಣ್ಣ ಹಚ್ಚಿದವನು ನಾಟಕದಲ್ಲಿಯೇ ಸಾಯುತ್ತಾನೆ ಎನ್ನುತ್ತಾರೆ. ಬಣ್ಣದ ಮೋಹ ಎಂದಿಗೂ ಹೋಗುವುದಿಲ್ಲ. ಹಾಗೆಯೇ ನನಗೆ ಸಿನಿಮಾ ಮೋಹ ಎಂದಿಗೂ ಹೋಗುವುದಿಲ್ಲ. ಸಿನಿಮಾ ಬಿಟ್ಟು ಡಾಕ್ಯುಮೆಂಟರಿ, ಧಾರಾವಾಹಿಗಳನ್ನು ಶುರು ಮಾಡಿದೆ.ಮುಂದುವರೆಯುವುದು...

15 views