ರಾಜಕಾರಣಿಗಿಂತಲೂ ಕಲಾವಿದ ದೊಡ್ಡವನು ಅಂದಿದ್ದು ಯಾರು?

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 81ಏಕದಂತ ಸಿನಿಮಾದ ಚಿತ್ರೀಕರಣ ಗೋವಾದಲ್ಲಿತ್ತು. ಅಲ್ಲಿ ಚಿತ್ರೀಕರಣ ಮುಗಿದ ನಂತರ ನಾನು, ವಿಷ್ಣುವರ್ಧನ್‌ ಮತ್ತು ಅವರ ಪಿ.ಎ ವಿಮಾನದಲ್ಲಿ ವಾಪಸ್‌ ಬಂದೆವು. ಗೋವಾ ಏರ್‌ಪೋರ್ಟ್‌ನಲ್ಲಿ ಬೊಮನ್‌ ಇರಾನಿ ಅವರು ಸಿಕ್ಕಿದ್ರು. ಅವರು ವಿಷ್ಣುವರ್ಧನ್‌ ಅವರನ್ನು ನೋಡಿದ ತಕ್ಷಣವೇ ತಮ್ಮ ಸೀಟಿನಿಂದ ಎದ್ದು ಓಡಿ ಬಂದು ನಮಸ್ಕಾರ ಮಾಡಿದ್ರು. ನಿಮ್ಮನ್ನು ನೋಡಿ ಬಹಳ ಸಂತೋಷವಾಯ್ತು. ನೀವೊಬ್ಬ ಅದ್ಭತ ‘ಲಿವಿಂಗ್‌ ಲೆಜೆಂಡ್‌’ ಎಂದು ಹೇಳಿದ್ರು. ಬೊಮ್ಮನ್‌ ಇರಾನಿ ಅವರೂ ಅದ್ಭುತವಾದ ಕಲಾವಿದ, ಉತ್ತಮ ಗಾಯಕ.


ಏಕದಂತ ಸಿನಿಮಾದಲ್ಲಿ ನನಗೆ ದೊಡ್ಡ ಪಾತ್ರ ಕೊಟ್ರು. ಇವತ್ತಿಗೂ ಉತ್ತರ ಕರ್ನಾಟಕದ ಕಡೆಗೆ ಹೋದ್ರೆ ಡೈಮಂಡ್ ಡ್ಯಾನಿ ಎಂದೇ ಕರೆಯುತ್ತಾರೆ. ಒಮ್ಮೆ ಉತ್ತರ ಕರ್ನಾಟಕದ ಕಡೆ ಹೋಗುವಾಗ ದೊಡ್ಡ ರಾಜಕಾರಣಿಯೂ ಇನ್ನೊಂದು ಕಾರಿನಲ್ಲಿದ್ರು. ಆ ರಾಜಕಾರಣಿ ಸಿಕ್ಕಾಪಟ್ಟೆ ದೊಡ್ಡ ವ್ಯಕ್ತಿ. ದುಡ್ಡಿರುವವರು. ಹಳ್ಳ ಇದ್ದ ಕಾರಣ ನಮ್ಮಿಬ್ಬರ ಕಾರನ್ನು ರಸ್ತೆ ಮಧ್ಯೆ ನಿಲ್ಲಿಸಿದೆವು. ಜನ ಎಲ್ಲ ಬಂದ್ರು. ನನ್ನನ್ನು ನೋಡಿದವರೇ, ಮಿಮಿಕ್ರಿ ದಯಾನಂದ್‌, ಡೈಮಂಡ್‌ ಡ್ಯಾನಿ ಎಂದು ಕೂಗಲು ಆರಂಭಿಸಿದ್ರು. ಆಗ ಆ ರಾಜಕಾರಣಿ ನೋಡಿ ಸರ್‌, ಇದೇ ನೀವು ಸಂಪಾದನೇ ಮಾಡಿರುವುದು. ಯಾವುದೋ ರಾಜಕಾರಣಿಗಿಂತ ಕಲಾವಿದ ದೊಡ್ಡವನು ಎಂದು ಆ ದೊಡ್ಡ ವ್ಯಕ್ತಿ ಹೇಳಿದ್ರು.ಮುಂದುವರೆಯುವುದು...

18 views