ರಾಜ್‌ ಕುಮಾರ್‌ ಅವರ ಆಸ್ಥಾನ ಕಲಾವಿದರುಗಳು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 79


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿರಾಜ್‌ಕುಮಾರ್‌ ಅವರು ಪ್ರತಿಭೆ, ಗುಣಗಳನ್ನು ಗುರುತಿಸಿ ಅವಕಾಶ ಕೊಡುವಂತೆ ಹೇಳುತ್ತಿದ್ದರೇ ಹೊರತು, ಯಾವುದೇ ಕಲಾವಿದನಿಗೆ ಸಹಾಯ ಮಾಡಿ ಎಂದು ಅನುಕಂಪದಲ್ಲಿ ಹೇಳುತ್ತಿರಲಿಲ್ಲ. ವಜ್ರಮುನಿ, ಲೀಲಾವತಿ, ನರಸಿಂಹರಾಜು, ಬಾಲಣ್ಣ, ತೂಗುದೀಪ ಅವರೆಲ್ಲ ಅದ್ಭುತ ನಟರು. ಇವರ ಕಲೆಗಳನ್ನು ಗುರುತಿಸಿ, ಅವರನ್ನು ತಮ್ಮ ಸಮೀಪಕ್ಕೆ ರಾಜ್‌ಕುಮಾರ್‌ ಆಲಂಗಿಸಿಕೊಳ್ಳುತ್ತಿದ್ದರು. ಇದು ಅವರ ದೊಡ್ಡ ಗುಣ.


ರಾಜ್‌ಕುಮಾರ್‌ ಅವರು ಒಳ್ಳೆಯ ಕಲಾವಿದನಾದ್ದರಿಂದ ಇನ್ನೊಬ್ಬರಲ್ಲಿರುವ ಕಲೆಯ ಪ್ರತಿಭೆಯನ್ನು ಗುರುತಿಸುವ ಶಕ್ತಿ ಅವರಲ್ಲಿತ್ತು. ರಾಜ್‌ಕುಮಾರ್‌ ಅವರ ಸಿನಿಮಾ ಯಶಸ್ಸಿಗೆ ಈ ಎಲ್ಲ ಕಲಾವಿದರು ಕಾರಣ.ಮುಂದುವರೆಯುವುದು...

19 views