ರಾಜ್‌ ಕುಮಾರ್‌ ಅವರು ಇಷ್ಟಪಡುತ್ತಿದ್ದ ವಿಲನ್‌ಗಳು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 76


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ
ತೂಗುದೀಪ ಶ್ರೀನಿವಾಸ್‌ ಒಂದು ರೀತಿಯ ಮೃದುವಾದ ವಿಲನ್‌. ಸಾಹುಕಾರ, ಒಡೆತನ, ಯಜಮಾನಿಕೆ ಇರುವ ವಿಲನ್ ಪಾತ್ರ ಇದ್ದಾಗ, ವಜ್ರಮುನಿ ಅವರನ್ನು ಕರೆಸುವಂತೆ ಸಲಹೆ. ಕೊಡುತ್ತಿದ್ದರು. ರಾಜ್‌ಕುಮಾರ್‌ ಅವರು ಎಂದಿಗೂ ಒತ್ತಾಯ ಮಾಡುತ್ತಿರಲಿಲ್ಲ. ಸಾಧ್ಯವಾದರೆ ಅವರಿಗೆ ಆ ಪಾತ್ರವನ್ನು ಕೊಡಿ ಎಂದು ಸಲಹೆ ನೀಡುತ್ತಿದ್ದರು. ರಾಜ್‌ಕುಮಾರ್‌ ಅವರ ಆಯ್ಕೆ ಸರಿಯಾಗಿಯೇ ಇರುತ್ತಿದ್ದರಿಂದ ನಾವು ಒಪ್ಪಿಕೊಳ್ಳುತ್ತಿದ್ದೆವು. ವಜ್ರಮುನಿ ನಟನೆ ಅದ್ಭತ. ‘ಪ್ರಚಂಡ ರಾವಣ’ ನಾಟಕದಲ್ಲಿ ಅವರ ಅಭಿನಯವನ್ನು ಕಂಡರೆ ರಾವಣನೇ ವೇದಿಕೆ ಮೇಲೆ ಬಂದ ಹಾಗೆ ಅಗುತ್ತಿತ್ತು. ನಿಜ ಜೀವನದಲ್ಲಿ ಅವರು ತದ್ವಿರುದ್ಧ ಗುಣದವರು.
ಮುಂದುವರೆಯುವುದು...

17 views