
ರಾಜ್ಕುಮಾರ್ ಮತ್ತು ಆ ದುಬಾರಿ ವಾಚ್
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 117
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ದುಬೈನಲ್ಲಿ ‘ಮ್ಯೂಸಿಕಲ್ ನೈಟ್ಸ್’ ನಡೆಸಿಕೊಡುವಂತೆ ಬಿ.ಆರ್. ಶೆಟ್ಟಿ ಕೇಳಿದರು. ಒಪ್ಪಿಕೊಂಡು ಹೋದೆವು. ಅಲ್ಲಿಂದ ಕಾರ್ಯಕ್ರಮ ಮುಗಿಸಿ ಬರುವ ವೇಳೆ ಏರ್ಪೋರ್ಟ್ನಲ್ಲಿ ಬಿ.ಆರ್. ಶೆಟ್ಟಿ ಅವರು ನಿಮ್ಮ ಕೈ ತೋರಿಸಿ ಎಂದು ರಾಜ್ಕುಮಾರ್ ಅವರನ್ನು ಕೇಳಿದರು. ಇವರು ಕೈ ತೋರಿಸಿದಾಗ ‘ಒಮೆಗಾ’ ವಾಚ್ ಕಟ್ಟಿದರು. ಆಗ ಅದಕ್ಕೆ ಒಂದೂವರೆ ಲಕ್ಷ. ರಾಜ್ಕುಮಾರ್ ಕಟ್ಟಿಸಿಕೊಂಡು, ತುಂಬಾ ಚೆನ್ನಾಗಿದೆ ಎಂದು ವಂದನೆ ಅರ್ಪಿಸಿದರು. ಅಲ್ಲಿಂದ ಬಂದ ಮೇಲೆ ರಾಜ್ಕುಮಾರ್ ಅವರು, ಅವರ ಅಳಿಯ ಗೋವಿಂದರಾಜ್ ಅವರನನ್ನು ಕರೆದು, ತಗೋ ಕಂದ ಈ ವಾಚ್ ನೀನು ಇಟ್ಕೊ. ಇಷ್ಟು ದುಬಾರಿ ವಾಚ್ ನನಗ್ಯಾಕೆ. ನಾನು ವಾಚ್ ಕಟ್ಟುವುದಿಲ್ಲ ಎಂದರು.
ಮುಂದುವರೆಯುವುದು...