ರಾಜೇಶ್‌ ಕೃಷ್ಣ ಅವರು ಖರೀದಿಸಿದ ಮನೆ ಯಾರದ್ದು?

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-20
ಶಾಸ್ತ್ರಿ ಅವರು ನಾಲ್ಕು ಕೋಣೆಯ ದೊಡ್ಡ ಮನೆಯನ್ನೇ ಅವರು ಕಟ್ಟಿಸಿದ್ದರು. ಸಾಲ ತೀರಿಸಲು ನಾನು ಆ ಮನೆ ಮಾರಿದೆ ರಾಜೇಶ್‌ ಕೃಷ್ಣ ಆ ಮನೆಯನ್ನು ತೆಗೆದುಕೊಂಡರು. ಬಹಳ ಖುಷಿಯಿಂದ ಕೊಟ್ಟೆ. ಆ ಮನೆಯಲ್ಲಿ ಸ್ಟುಡಿಯೊ ಮಾಡಿದ್ರು ಶಾಸ್ತ್ರಿ. ಅದು ಪೂರ್ಣಗೊಂಡಿರಲಿಲ್ಲ. ರಾಜೇಶ್‌ ಅವರಿಗೆ ಶಾಸ್ತ್ರಿ ಅವರು ಅಣ್ಣನ ರೀತಿಯಲ್ಲಿಯೇ. ಅಷ್ಟು ಪ್ರೀತಿ ಇದೆ. ನನ್ನ ಅಣ್ಣ ಕೊಟ್ಟ ಮನೆ ಇದು ಎಂದು ಅವರು ಬಹಳ ಪ್ರೀತಿಯಿಂದ ತೆಗೆದುಕೊಂಡರು. ರಾಜೇಶ್‌ ಅವರು ಆ ಮನೆಯಲ್ಲಿ ಸ್ಟುಡಿಯೊವನ್ನು ಮಾಡಿದ್ದಾರೆ. ನಿನ್ನ ಅಣ್ಣ ಕೊಟ್ಟಿರುವ ಮನೆಯಿದು ಚೆನ್ನಾಗಿ ನೊಡಿಕೊ ಎಂದು ರಾಜೇಶ್‌ಗೆ ಅವರ ಅಮ್ಮನು ಹೇಳಿದ್ರು.


ರಾಜೇಶ್‌ಗೆ ಕೆಲವು ಸಮಸ್ಯೆಗಳಾದಾಗ ಅವರಿಗೆ ಯಾವ ವಾಹಿನಿಯವರು ತೊಂದರೆ ಕೊಡದಂತೆ ಪೂರ್ತಿ ದಿನ ಅವರ ಮನೆಯಲ್ಲಿಯೇ ಇದ್ದು ಶಾಸ್ತ್ರಿ ಕಾದಿದ್ದರು. ಒಬ್ಬರನ್ನು ಒಳಗೆ ಬಿಟ್ಟಿರಲಿಲ್ಲ. ಮನುಷ್ಯರ ಭಾವನೆಗಳ ಜೊತೆ ಆಟವಾಡುತ್ತೀರಾ ಅವನ ಕಷ್ಟ ಅವನಿಗೆ ನಿಮಗ್ಯಾಕೆ ಅವೆಲ್ಲ ಹೋಗಿ ಎಂದು ಬಂದವರನ್ನು ಬೈದು ಕಳುಹಿಸಿದ್ರು.ಮುಂದುವರೆಯುವುದು...

22 views