ಲಾಕ್‌ ಡೌನ್‌ ನಲ್ಲಿ ಹೀರೋ ಆದ ಮಿಮಿಕ್ರಿ ದಯಾನಂದ

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 57
ಲಾಕ್‌ಡೌನ್‌ ವೇಳೆ ನಾನು ಸಿನಿಮಾ ಶೂಟಿಂಗ್‌ಗೆಂದು ಚಿಕ್ಕಮಗಳೂರಿನಿಂದ ಮರಕರಗೆ ಹೋದೆ. ಅಲ್ಲಿ ಶೂಟಿಂಗ್‌ ಮಾಡುವ ವೇಳೆ ಚೀನಾದಿಂದ ಕೊರೊನಾ ಸೋಂಕು ಹರಡಿದೆ. ಕೊಡಗಿನ ಇಬ್ಬರಿಗೆ ಸೋಂಕು ತಗುಲಿದೆ. ಅಲ್ಲಿ ಶೂಟಿಂಗ್‌ ಇದ್ರೆ ಆಮೇಲೆ ಮಾಡಿ ಎಂದ್ರು. ಕೇರಳದ ದೇವಸ್ಥಾನದ ಶಾಟ್‌ ಇದೆ ಅಂದೆ. ಅದನ್ನು ತೆಗೆದುಕೊಂಡು ಬನ್ನಿ ಎಂದ್ರು. ನಾನು ಕೇರಳ ಗಡಿ ವಿರಾಜಪೇಟೆಗೆ ಹೋದೆ. ಅಲ್ಲಿ ನನ್ನ ತಾಯಿಯ ಮನೆ ಇದೆ. ವ್ಯವಸ್ಥಿತವಾಗಿ ಐದು ಕೋಣೆಯ ಸ್ವಂತ ಮನೆ ಅದು. ಕ್ಯಾಮೆರಾ ಮೆನ್‌, ಯೂನಿಟ್‌ ಅವರೆಲ್ಲ ಅಲ್ಲಿಗೆ ಬಂದ್ರು. ಖ್ಯಾತ ಬರಹಗಾರರಿಬ್ಬರು, ನಿರ್ದೇಶಕರೂ ಇದ್ರು. ಲಾಕ್‌ಡೌನ್‌ ಇದ್ದಿದ್ದರಿಂದ ಆರ್ಟಿಸ್ಟ್‌ಗಳು ಬರಲು ಆಗಲಿಲ್ಲ. ಮೇಕಪ್‌ಮೆನ್‌, ಕಾಸ್ಟ್ಯೂಮ್‌ ಡಿಸೈನರ್‌ ಇರಲಿಲ್ಲ. ನಾನು ಅಲ್ಲೇ ಕಥೆ ಬದಲಾಯಿಸಿದೆ. ಅದೇ ಊರಲ್ಲಿ ಹೀರೊಯಿನ್‌ ಸಿಕ್ಕಿದ್ರು. 3 ದಿನ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ರು.


ಇಡೀ ಸಿನಿಮಾದಲ್ಲಿ ನಾನ್ನೊಬ್ಬನೇ ನಟಿಸುವ ಹಾಗೆ ಕಥೆ ಬದಲಾಯ್ತು. ಬೇರೆ ಕ್ಯಾರೆಕ್ಟರ್‌ಗಳ ಡೈಲಾಗ್‌ ಬರೆದೆ. ಅದೆಲ್ಲ ಆಡಿಯೊದಲ್ಲಿ ಬರುತ್ತದೆ. ನಾನ್ನೊಬ್ಬನೇ ನಟಿಸಿದ್ದೇನೆ. ಪಿಕ್ಚರ್‌ ರೆಡಿ ಆಯ್ತು. ಸಿನಿಮಾ ರೆಡಿ ಆದ ಮೇಲೂ ನಾವು ಒಂದು ತಿಂಗಳು ಸುಮ್ನೆ ಕೂರಬೇಕಾಯಿತು. ಇದುವರೆಗೂ ಸಿನಿಮಾ ಅನೌನ್ಸ್‌ ಮಾಡಿಲ್ಲ. ಮೊದಲ ಬಾರಿಗೆ ಇಲ್ಲಿ ಮಾತನಾಡುತ್ತಿದ್ದೇನೆ. ‘ಅನಿರೀಕ್ಷಿತ’ ಸಿನಿಮಾದ ಹೆಸರು. ಮೊದಲ ಬಾರಿಗೆ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ.


ನಿರ್ದೇಶನ, ಕಥೆ, ಮೇಕಪ್ ಎಲ್ಲವೂ ನನ್ನದೇ. ಅಡುಗೆಯವರು ಇಲ್ಲದ ಕಾರಣ, ಹದಿನೆಂಟು ಜನಕ್ಕೆ ನಾನೇ ಅಡುಗೆ ಮಾಡಿದೆ. ಅಮ್ಮನ ಮನೆಯಲ್ಲಿ ಯಾವುದೇ ಕೊರತೆಯಾಗಲಿಲ್ಲ. ಕೊನೆಯಲ್ಲಿ ಹೋಗಬೇಕಾದ್ರೆ, ಕೆಲವೊಬ್ರು ಕಾಲಿಗೆ ನಮಸ್ಕಾರ ಮಾಡಿ ಅತ್ತು ಬಿಟ್ರು. ಸಂತೋಷವಾಗಿ ಎಲ್ಲ ಹೋದ್ರು. ಲಾಕ್‌ಡೌನ್‌ ಯಾಕೆ ಮುಗೀತು ಅನಿಸುತ್ತಿದೆ. ಅಷ್ಟು ಚೆನ್ನಾಗಿದ್ವಿ ಇಲ್ಲಿ ಅನ್ನುತ್ತಿದ್ರು. ಕನ್ನಡ ತಾಯಿ ನಮಗೆ ಯಾವುದರಲ್ಲಿಯೂ ಕೊರತೆ ಮಾಡಿಲ್ಲ.ಮುಂದುವರೆಯುವುದು...

25 views