ಲಂಡನ್ನಿಂದ ಬಂದ ಶಂಕರ್‌ ಬದಲಾಗಿದ್ದು ಯಾಕೆ?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 46

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಪರಮ್: ಇಷ್ಟು ಗ್ರೇಟ್ ಮೆಮೊರೀಸ್, ಶಂಕರ್ ಅವ್ರ ಲಾಸ್ಟ್ ಡೇಸ್ ಆ ದರ್ಘಟನೆ ಬಗ್ಗೆ ಹೇಳಿ…


ರಮೇಶ್ ಭಟ್: ಇಲ್ಲ ಲಾಸ್ಟ್ ಡೇಸಲ್ಲಿ ಅವ್ನು ಸಿಕ್ಕಾಪಟ್ಟೆ ಬ್ಯುಸಿ ಆಗ್ಬಿಟ್ಟಿದ್ದ. ಈ ಮಾಲ್ಗುಡಿ ಡೇಸ್ ಆದ್ಮೇಲೆ, ಸ್ವಾಮಿ ಆಂಡ್ ಫ್ರೆಂಡ್ಸ್ ನ ಒಂದು ಫಿಲ್ಮ್ ಫಾರ್ಮಾಟ್ ಗೆ ಕಟ್ ಮಾಡಿ, ರಡಿ ಮಾಡಿದ್ರು. ಲಂಡನ್ನಲ್ಲಿ ಅದಕ್ಕೆ ಬೆಸ್ಟ್ ಡೈರೆಕ್ಟರ್ ಅಂತ ಅವಾರ್ಡ್ ಬಂತು. ಅದಕ್ಕೆ ಲಂಡನ್ನಿಗೆ ಹೊದ್ರು. ಲಂಡನ್ನಿಂದ ಬರೋ ಹೊತ್ತಿಗೆ ಅವ್ರಲ್ಲಿ ಬಹಳಷ್ಟು ಮಾರ್ಪಾಡಾಗಿ ಬಿಟ್ಟಿತ್ತು.


ಲಂಡನ್ ನೋಡಿದ್ಮೇಲೆ ಅಲ್ಲಿಯ ಟ್ರೇನ್, ಅಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್, ಅಲ್ಲಿಯ ಮ್ಯೂಸಿಯಮ್, ಅಲ್ಲಿ ಹಿಸ್ಟಾರಿಕ್ ಪ್ಲೇಸ್ ಗಳು. “ನಾವು ನಮ್ಮ ಊರನ್ನ ಯಾಕೆ ಹಿಗೆಲ್ಲ ಮಾಡ್ಬಾರ್ದು?” ಅಂತ ಬಂದೋರು, ನಮಗೆಲ್ಲ ಹೇಳಿದ್ರು “ಏಯ್ ಈ ಮರ ಸುತ್ಕೊಂಡು, ಕರಾಟೆ ಕಿಂಗ್ ಅಂತೆಲ್ಲ, ನಮ್ಮ ಮಕ್ಳು ದೊಡ್ಡವ್ರಾದ್ಮೇಲೆ ನಗ್ತಾರಷ್ಟೆ, ನಾವು ಬೇರೆ ಏನಾದ್ರೂ ಮಾಡ್ಬೇಕು, ಜನಕ್ಕೆ ಅನುಕೂಲ ಆಗೊದು” ಇನ್ನೊಂದು, ಮತ್ತೊಂದು ಹಾಗೆಲ್ಲಾ ಅನ್ಸಿ ಬಿಡ್ತು ಅವರಿಗೆ.ಮುಂದುವರೆಯುವುದು…

24 views