ವಜ್ರಮುನಿಯವರ ವ್ಯಕ್ತತ್ವ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 77


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ
ವಜ್ರಮುನಿ ಅವರು ಬಸವನಗುಡಿ ಗೃಹ ನಿರ್ಮಾಣ ಸಂಘದ ಅಧ್ಯಕ್ಷರಾಗಿದ್ರು. ಆ ಸಂದರ್ಭದಲ್ಲಿ ಬಡ ಕಲಾವಿದರನ್ನೆಲ್ಲ ಕರೆದು ಸೈಟ್‌ ಕೊಟ್ಟರು. ಆಗ ಪದ್ಮನಾಭ ನಗರ ಕಾಡಾಗಿತ್ತು. ಅದನ್ನು ಲೇಔಟ್‌ ಮಾಡಿ, ನೂರಾರು ಸೈಟ್‌ಗಳನ್ನು ಹಂಚಿದ್ರು. ದುಡ್ಡು ಕೊಡಲು ಸಾಧ್ಯವಾಗದವರಿಗೆ ಕಂತಿನಲ್ಲಿ, ಸಾಧ್ಯವಾದಾಗ ಹಣ ಕೊಡಿ ಎನ್ನುತ್ತಿದ್ರು. ಅಂತಹ ದಯಾಳು ಗುಣ ಅವರಲ್ಲಿತ್ತು.


60x40 ಸೈಟನ್ನು ನನಗೆ ಮತ್ತೆ ದೊರೆಯವರಿಗೆ ತಲಾ 30 ಸಾವಿರಕ್ಕೆ ಕೊಟ್ಟರು. 64, 64 ನಂಬರ್ ಸೈಟದು ನನಗೆ ಈಗಲೂ ನೆನಪಿದೆ. ದೊರೆಯವರ ಶ್ರೀಮತಿಗೆ ಸೈಟನ್ನು ತೋರಿಸಿದ್ವಿ. ಈ ಕಾಡಿನಲ್ಲಿ ಯಾರು ಬಂದು ಇರ್ತಾರೆ. ಯಾವನ್ನಾದ್ರೂ ಕಳ್ಳ ಬಂದು ಸಾಯಿಸಿಬಿಟ್ರೆ ಏನು ಮಾಡುವುದು ಅಂದ್ರು. ಆಗ ಹಾಗಿತ್ತು ಆ ಜಾಗ. ಎರಡು ಕಿ.ಮೀ ಅಂತರದಲ್ಲಿ ಒಂದು ಮನೆ ಇರಲಿಲ್ಲ. ನಾನು 3.30 ಲಕ್ಷಕ್ಕೆ ಸೈಟ್‌ ಮಾರಿದೆ. ದೊರೆ ಸೈಟ್‌ ಕೊಳ್ಳಲು ಒಂದೂವರೆ ವರ್ಷ ಯಾರೂ ಬಂದಿರಲಿಲ್ಲ ನಂತರ 6 ಲಕ್ಷಕ್ಕೆ ಅವರ ಸೈಟ್‌ ತೆಗೆದುಕೊಂಡ್ರು.
ಮುಂದುವರೆಯುವುದು...

29 views