
ವಜ್ರೇಶ್ವರಿ ಕಂಬೈನ್ಸ್ ಪ್ರಾರಂಭವಾಗಲು ಕಾರಣ
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 119
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ಪಾರ್ವತಮ್ಮ ಅವರು ತ್ರಿಮೂರ್ತಿಗಳು ಎಂಬ ಸಿನಿಮಾ ಮಾಡಿದ್ರು. ಸಿನಿಮಾ ಚೆನ್ನಾಗಿಯೇ ಓಡಿತು. ಆದರೆ, ತೃಪ್ತಿತರುವಷ್ಟು ಹಣ ವಾಪಸ್ ಬರಲಿಲ್ಲ. ಉತ್ತರ ಕರ್ನಾಟಕದಲ್ಲಿ 65 ಸಾವಿರಕ್ಕೆ ಸಿನಿಮಾವನ್ನು ಕೊಟ್ಟಿದ್ದರು. ಸಿನಿಮಾ ಚೆನ್ನಾಗಿಯೇ ಅಲ್ಲಿ ಓಡಿತ್ತು. ಕೆ.ಎಚ್. ನಾಗಾರಾಜ್ ಎಂಬುವರು ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ 30 ಥಿಯೇಟರ್ಗಳನ್ನು ಕಂಟ್ರೋಲ್ ಮಾಡುತ್ತಿದ್ರು. ಅವರು ಥಿಯೇಟರ್ಗಳನ್ನು ಬೋಗ್ಯಕ್ಕೆ ತೆಗೆದುಕೊಂಡಿದ್ರು.
ಒಮ್ಮೆ ನಾಗ್ರಾಜ್ ಅವರು ಪಾರ್ವತಮ್ಮ ಅವರ ಬಳಿ ಮಾತನಾಡುತ್ತ ಎರಡು ಜಿಲ್ಲೆಗಳಿಂದಲೇ ನನಗೆ ಇಷ್ಟೊಂದು ದುಡ್ಡು ಬರುತ್ತಿದೆ. ಹಾಗೆ ನಿಮಗೆ ಬಾಂಬೆ ಕರ್ನಾಟಕ ಪ್ರದೇಶದಲ್ಲಿಯೂ ಅಷ್ಟೇ ಬಂದಿರಬೇಕಲ್ವಾ ಎಂದರು. ಆಗ ಪಾರ್ವತಮ್ಮನವರು. ಇಲ್ಲ, ನಾನು 65 ಸಾವಿರಕ್ಕೆ ಮಾರಿಬಿಟ್ಟಿದ್ದೇನೆ ಎಂದು ಹೇಳಿದ್ರು. ಅದಕ್ಕೆ ನಾಗ್ರಾಜ್ ಅವರು ನೀವೇಕೆ ಮಾರಿ ಬಿಡುವ ಕೆಲಸ ಮಾಡಿದ್ರಿ. ನೀವೇ ಒಂದು ಡಿಸ್ಟ್ರಿಬ್ಯೂಷನ್ ಕನ್ಸಟೆನ್ಸಿ ಪ್ರಾರಂಭಿಸಿ. ಆಗ ನಿಮಗೆ ಎಷ್ಟು ದುಡ್ಡು ಬರುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು. ಆಗ ಚಂದ್ರಿಕಾ ಮೂವೀಸನ್ನು ನಾಗರಾಜ್ ಅವರ ಮುಂದಾಳತ್ವದಲ್ಲಿಯೇ ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದರು. ಅವರ ತಂಗಿ ಮಗನನ್ನು ಇನ್ಚಾರ್ಜ್ ಮಾಡಿದ್ರು. ಒಂದೊಂದು ಪಿಕ್ಚರ್–5 ಲಕ್ಷ ಮಾಡಿರುವುದು ಗೊತ್ತಾಯಿತು. ಉತ್ತರ ಕರ್ನಾಟದಲ್ಲಿ ಇರುವಷ್ಟು ಕನ್ನಡ ಅಭಿಮಾನ ದಕ್ಷಿಣ ಕರ್ನಾಟಕದಲ್ಲಿ ಇಲ್ಲ. ಅಲ್ಲಿ ಕನ್ನಡ ಸಿನಿಮಾಗಳು ಚೆನ್ನಾಗಿ ಓಡುತ್ತವೆ.
ನಾವೇ ಡಿಸ್ಟ್ರಿಬ್ಯೂಷನ್ ಕಂಪನಿಯನ್ನು ಏಕೆ ಆರಂಭಿಸಬಾರದು ಎಂಬ ಯೋಚನೆ ಬಂದಾಗಲೇ ಪ್ರಾರಂಭವಾಗಿದ್ದು, ವಜ್ರೇಶ್ವರಿ ಕಂಬೈನ್ಸ್. ಹುಬ್ಬಳ್ಳಿ ಪ್ರದೇಶಗಳಲ್ಲಿ ಥಿಯೇಟರ್ಗಳನ್ನು ಭೋಗ್ಯಕ್ಕೆ ತೆಗೆದುಕೊಳ್ಳಲು ಪ್ರಾರಂಭಿಸಿದರು. ಒಂದು ಸಿನಿಮಾಕ್ಕೆ ಕೊಡುತ್ತಿದ್ದ ಶೇ 10–15 ಕಮಿಷನ್ನಮಗೆ ಉಳಿಯಿತು. ಒಂದಕ್ಕೆ ಎರಡು ದುಡ್ಡು ಬರಲು ಪ್ರಾರಂಭವಾಯ್ತು. 80 ಸಿನಿಮಾಗಳನ್ನು ಪಾರ್ವತಮ್ಮ ಮಾಡಿದ್ದಾರೆ ಎಂದಾದರೆ, ಅದರಿಂದ ಬರುತ್ತಿದ್ದ ಆದಾಯವೇ ಅದಕ್ಕೆ ಕಾರಣ. ವಜ್ರೇಶ್ವರಿ ಕಂಬೈನ್ಸ್ ಹುಟ್ಟುಹಾಕಿದ್ದೆ ಚಂದ್ರಿಕಾ ಮೂವೀಸ್.
ಮುಂದುವರೆಯುವುದು...