ವಿಜಯ ಪ್ರಕಾಶ್‌ ಕನ್ನಡದಲ್ಲಿ ಹಾಡಲು ಕಾರಣ ಶಾಸ್ತ್ರಿ

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-10
‘ಚೀನಿ ಕಮ್‌’ನಲ್ಲಿ ವಿಜಯ್‌ಪ್ರಕಾಶ್‌ ಹಾಡಿದ್ದನ್ನು ಕೇಳಿ ಬಹಳ ಖುಷಿ ಪಟ್ಟಿದ ಶಾಸ್ತ್ರಿ ಅವರು, ಅವರಿಗೆ ಕರೆ ಮಾಡಿ ಪ್ರೋತ್ಸಾಹದ ಮಾತುಗಳನ್ನಾಡಿದ್ದರು. ಗಾಳಿಪಟ ಸಿನಿಮಾದ ಹಾಡೊಂದನ್ನು ಯಾರ ಬಳಿ ಹಾಡಿಸುವುದು ಎಂದು ಹರಿಕೃಷ್ಣ, ಶಾಸ್ತ್ರಿ ಅವರನ್ನು ಕೇಳಿದರು. ಆಗ, ಶಾಸ್ತ್ರಿ ಅವರು ವಿಜಯ್‌ಪ್ರಕಾಶ್‌ಅವರ ಹೆಸರು ಹೇಳಿದರು. ತಾನು ಒಬ್ಬ ಗಾಯಕನಾಗಿ ಹೀಗೆ ಇನ್ನೊಬ್ಬರನ್ನು ಪ್ರೋತ್ಸಾಹಿಸಲು ದೊಡ್ಡ ಮನಸಿರಬೇಕು. ಅವರಲ್ಲಿದ್ದ ದೈವಾಂಶ ಗುಣವದು.


ಹರಿಕೃಷ್ಣ ಮತ್ತು ಶಾಸ್ತ್ರಿ ಒಳ್ಳೆಯ ಸ್ನೇಹಿತರು. ಹರಿಕೃಷ್ಣನಿಗೆ ಹಾಡುಗಳ ಕುರಿತು ಯಾವುದಾದರೂ ಸಂಶಯ ಇದ್ದರೆ, ಅದನ್ನು ಶಾಸ್ತ್ರಿ ಅವರ ಬಳಿ ಬಂದು ಕೇಳುತ್ತಿದ್ದ. ನಾನು, ಶಾಸ್ತ್ರಿ, ಹರಿಕೃಷ್ಣ ಮತ್ತು ಧರ್ಮ ಅವರು ಹಲವು ವರ್ಷ ರವಿಚಂದ್ರನ್‌ಬಳಿ ಕೆಲಸ ಮಾಡಿದ್ವಿ. ಹರಿಕೃಷ್ಣ ಅವರಿಗೆ ಈ ಹಾಡು ಖಂಡಿತ ಹಿಟ್‌ಆಗುತ್ತದೆ. ಇದು ಬೇಡ ಅಷ್ಟು ಚೆನ್ನಾಗಿಲ್ಲ ಎಂದು ನೇರವಾಗಿ ಹೇಳುತ್ತಿದ್ದರು. ಇದೇ ಕಾರಣಕ್ಕೆ ಹರಿಕೃಷ್ಣ ಸಲಹೆ ಕೇಳುತ್ತಿದ್ದುದು. ಜೊತೆ ಜೊತೆಯಲ್ಲಿ ಸಿನಿಮಾ ಹಾಡು ಮತ್ತು ‘ಓ ಗುಣವಂತ’ ಭರ್ಜರಿ ಹಿಟ್‌ಆಗುತ್ತದೆ ಎಂದು ಮೊದಲೇ ಹೇಳಿದ್ರು. ಹರಿಕೃಷ್ಣ ಕೂಡ ಬಹಳ ಪ್ರತಿಭಾವಂತ. ‌ಮುಂದುವರೆಯುವುದು...

13 views