ವೇದಿಕೆ ಮೇಲೆ ಅಶ್ಲೀಲ ಪದಗಳನ್ನ ನಾನು ಯಾಕೆ ಬಳಸಲ್ಲ?

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 26
ವೇದಿಕೆ ಮೇಲೆ ಅಶ್ಲೀಲ ಮತ್ತು ಕೆಟ್ಟ ಪದಗಳನ್ನು ಬಳಸಬಾರದು ಎಂಬ ಸಿದ್ಧಾಂತಕ್ಕೆ ನಾನು ಬದ್ಧನಾಗಿದ್ದೇನೆ. ರಾಜ್‌ಕುಮಾರ್‌ ಅವರು ಕೆಟ್ಟ ಪದವನ್ನು ಎಂದಿಗೂ ಬಳಸುತ್ತಿರಲಿಲ್ಲ. ಅವರೆಲ್ಲ ನಮಗೆ ಉದಾಹರಣೆಯಂತಿದ್ರು. ಅವರು 24 ಗಂಟೆ ಮತ್ತು 364 ದಿವಸಗಳ ಕಲಾವಿದ. ಅವರಿಗೊಂದು ಇರುವೆ ಕಚ್ಚಿದರೂ, ‘ನೋಡಿ, ಪಾಪ ಅದಕ್ಕೇನೊ ಕಷ್ಟ’ ಎಂದು ಇರುವೆಯನ್ನು ಪಕ್ಕಕ್ಕೆ ಇಡುತ್ತಿದ್ದರು. ಹಾಗೆ ಮಾಡುವುದನ್ನು ನಾನೇ ಶೂಟಿಂಗ್‌ ವೇಳೆ ನೋಡಿದ್ದೇನೆ. ಅವರು ಮನೆಯಲ್ಲಿಯೂ ಹಾಗೆಯೇ ಮಾಡುತ್ತಾರಾ ಎಂಬುದು ನನಗೆ ಗೊತ್ತಿಲ್ಲ. ಆದರೆ, ನಾಲ್ಕು ಜನರ ಮುಂದೆ ಅವರು ಇರುವೆಯನ್ನು ಸಾಯಿಸುತ್ತಿರಲಿಲ್ಲ. ಅವರಿಂದ ಕಲಿತ ಒಳ್ಳೆಯ ಸಿದ್ಧಾಂತವದು. ಒಬ್ಬರಿಗೊಬ್ರು ಅಣ್ಣ, ಅಪ್ಪಾಜಿ ಎಂದು ಮಾತನಾಡಿಸಲು ರಾಜ್‌ಕುಮಾರ್‌ ಅವರೇ ಕಾರಣ.


ಮುಂದುವರೆಯುವುದು...

20 views