
ವಿಷ್ಣುಗಿದ್ದ ಕಲಾವಿದರ ಬಗೆಗಿನ ಕಾಳಜಿ
ಮಿಮಿಕ್ರಿ ದಯಾನಂದ ಲೈಫ್ಸ್ಟೋರಿ ಭಾಗ 85

ಒಂದು ಪಿಕ್ಚರ್ದು ಡಬ್ಬಿಂಗ್ ಮಾಡಬೇಕಿತ್ತು. ನಾನು ಸಿರಿವಂತ ಸಿನಿಮಾದಲ್ಲಿ ಆಗ ಆ್ಯಕ್ಟ್ ಮಾಡುತ್ತಿದ್ದೆ. ವಿಷ್ಣುವರ್ಧನ್ ಅವರು ಆ ಸಿನಿಮಾದ ಪೇಮೆಂಟ್ ಬಂತಾ ಎಂದ್ರು. ಇಲ್ಲ ಸರ್ ಎಂದೆ. ಅದಕ್ಕವರು ನೀವು ಆ ಸಿನಿಮಾಕ್ಕೆ ಡಬ್ಬಿಂಗ್ ಮಾಡಬಾರದು. ನಾನು ಪ್ರೊಡ್ಯೂಸರ್ ಮೇಲಿನ ಕೋಪಕ್ಕೆ ಹೇಳುತ್ತಿಲ್ಲ. ಕಲಾವಿದನಿಗೆ ಬಿಸಿಲಲ್ಲಿ ನಿಂತು ಕಷ್ಟಪಟ್ಟಿರುವ ಹಣ ಬರಬೇಕು. ಎಲ್ಲ ಕಲಾವಿದರ ದುಡ್ಡು ಬರುವವರೆಗೂ ನಾನು ಆ ಸಿನಿಮಾಕ್ಕೆ ಡಬ್ಬಿಂಗ್ ಮಾಡುವುದಿಲ್ಲ. ಕಷ್ಟ ಇರುತ್ತೆ ಎಲ್ಲರಿಗೂ. ಆ ದುಡ್ಡು ಬರುತ್ತೆ. ನಾನು ಏರ್ಪಾಡು ಮಾಡುತ್ತೇನೆ. ಎಲ್ಲರೂ ದುಡ್ಡು ತೆಗೆದುಕೊಂಡು ಕೆಲಸ ಮಾಡಿ. ನಂತರ ಅವರು ಪೇಮೆಂಟ್ ತೆಗೆದುಕೊಳ್ಳದೇ, ನಮಗೆಲ್ಲ ಸಂಭಾವನೆ ಕೊಡಿಸಿದ್ರು.
ಇಂತಹ ಮಾತು, ಕಥೆಗಳಿಂದಲೇ ವಿಷ್ಣುವರ್ಧನ್ ಇಂದಿಗೂ ಜೀವಂತವಾಗಿದ್ದಾರೆ. ಎಲ್ಲ ಕಲಾವಿದನಿಗೂ ಒಂದೇ ರೀತಿಯ ಗೌರವ ಸಿಗಬೇಕು ಎಂದು ಅವರು ಬಯಸುತ್ತಿದ್ರು. ಯಾರು ಸುಮ್ನೆ ಗ್ರೇಟ್ ಅನಿಸಿಕೊಳ್ಳಲು ಸಾಧ್ಯವಿಲ್ಲ.
ಮುಂದುವರೆಯುವುದು...