ವಿಷ್ಣುವರ್ಧನ್‌ ಕೂಡ ಮಿಮಿಕ್ರಿ ಮಾಡುತ್ತಿದ್ರು

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 82
ಕಲಾವಿದ ಎಂದಿಗೂ ಎತ್ತರದ ಸ್ಥಾನದಲ್ಲಿರಬೇಕು ಎಂದು ವಿಷ್ಣುವರ್ಧನ್‌ ಬಯಸುತ್ತಿದ್ರು. ಚೆನ್ನಾಗಿ ರೆಡಿ ಆಗಬೇಕು. ಚೆನ್ನಾಗಿ ತಿನ್ನಬೇಕು ಎಂದು ಅವರು ಹೇಳುತ್ತಿದ್ರು. ವಿಷ್ಣು ಸರ್‌ ಬಳಿ ಕಲಿಯುವುದು ಬಹಳ ಇತ್ತು. ಒಮ್ಮೆ ಒಂದು ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪ್ಲಾಸ್ಟಿಕ್‌ ಹೂವು ಹಾಕಿದ್ರು. ಅದನ್ನು ನೋಡಿದ ಅವರು, ನಾನು ನಟಿಸುವುದಿಲ್ಲ. ದೇವರಿಗೆ ನಾವು ಏನು ಕೊಡುತ್ತೀವೋ ಅದನ್ನೇ ಅವನು ನಮಗೆ ವಾಪಸ್‌ ಕೊಡುತ್ತಾನೆ ಎಂದು ಹೇಳಿ, ಇಡೀ ದೇವಸ್ಥಾನಕ್ಕೆ ವರ್ಜಿನಲ್‌ ಹೂವು ಹಾಕಿಸಿದ್ರು. ಬೇಕಾದ್ರೆ ನನ್ನ ಪೇಮೆಂಟ್‌ನಲ್ಲಿ ಕಟ್‌ ಮಾಡಿಕೊಳ್ಳಿ ಎಂದಿದ್ರು. ವಿಷ್ಣುವರ್ಧನ್‌ ಕೂಡ ಮಿಮಿಕ್ರಿ ಕಲಾವಿದ. ಅವರು ಹಲವರ ರೀತಿ ಅನುಕರಣೆ ಮಾಡುತ್ತಿದ್ರು. ಪ್ರಭಾಕರ್‌ ಕೂಡ ಮಿಮಿಕ್ರಿ ಕಲಾವಿದ. ಜೇಸುದಾಸ್‌ ಕೂಡ ಹಾಡಿನ ಮೂಲಕ ಬೇರೆಯವರನ್ನು ಚೆನ್ನಾಗಿ ಅನುಕರಿಸುತ್ತಾರೆ. ವಿಷ್ಣುವರ್ಧನ್‌ ಅವರು ದೊರೆ ಭಗವಾನ್‌, ಶ್ರೀನಾಥ್‌, ಆರತಿ, ನಿರ್ದೇಶಕ ಸಾಯಿ ಪ್ರಕಾಶ್‌ ಅವರನ್ನು ಬಹಳ ಚೆನ್ನಾಗಿ ಅನುಕರಿಸುತ್ತಿದ್ರು
ಮುಂದುವರೆಯುವುದು...


18 views