ಶಂಕರ್‌ ಅವರಿಗಿದ್ದ ಧಾರಾಳತನ ಅದ್ಭುತ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 106

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ನಮ್ಮ ಮನೆಯಲ್ಲಿ ವೆರಾಂಡದಲ್ಲಿ ಕೂತ್ಕೊಂಡು ನನ್ನ ತಮ್ಮ ‘ನ್ಯಾಷ್ನಲ್ ಜಿಯಾಗ್ರಫಿ’ ಬುಕ್ ಓದ್ತಾ ಇದ್ದ, ಶಂಕರ್ ಬಂದು ಕೇಳಿದ್ರು “ ಏನೋ ಓದ್ತಾ ಇದ್ಯಾ?” ಅವ್ನು “ನ್ಯಾಷ್ನಲ್ ಜಿಯಾಗ್ರಫಿ” ಅಂದ. “ಇಷ್ಟನೇನೋ?” ಅಂತ ಕೇಳಿದ್ರು. ಹೌದು ಅಂದ. ಕೊಡೋ ಇಲ್ಲಿ ಅಂತ ಅದನ್ನ ಇಸ್ಕೊಂಡು, ಅದ್ರ ಹಿಂದ್ಗಡೆ ಟೇರ್ ಎಂಡ್ ಪೇಜ್ ಹರ್ದು, ಒನ್ ಯಿಯರ್ ಸಬ್ಸಕ್ರಿಪ್ಷನ್ ಬರ್ಕೊಟ್ಬಿಟ್ರು. ಜಸ್ಟ್ ಲೈಕ್ ದಟ್. ನಾನು ಕೇಳ್ದೆ “ ಯಾಕೆ ಇದು” ಅಂತ. ಆಗ ಅವ್ರು “ಚಿಕ್ಕ ಹುಡುಗ ಓದ್ಲೀ” ಅಂತಂದ್ರು. ಆ ತರದ್ದು ದಾರಾಳ ಮನಸ್ಸು ಅವ್ರದ್ದು. ಅಬ್ಬಾ! ಅಮೇಜಿಂಗ್ ಮ್ಯಾನ್.


ಪರಮ್: ದುಡ್ಡಿಗೆ ಜಾಸ್ತಿ ತಲೆ ಕೆಡಿಸಿಕೊಳ್ತಾ ಇರ್ಲಿಲ್ಲ?


ಬದರಿನಾಥ್: ಯಾವತ್ತೂ ತಲೆ ಕೆಡಿಸಿಕೊಳ್ತಾ ಇರ್ಲಿಲ್ಲ. ನಾನು ಎಷ್ಟೋ ಸಲ ನೋಡಿದ್ದೀನಿ, ನಾನೇ ಕೇಳಿದ್ದೀನಿ ಅವ್ರ ಹತ್ರ, ಸೆಟ್ಟಲ್ಲಿ ಯಾರ್ಯಾರೋ ಬೇರೆ ಕಡೆ ಕೆಲ್ಸ ಮಾಡೋ ಹುಡುಗ್ರು ಬರೋರು, “ ಅಣ್ಣಾ ಕಷ್ಟ ಇದ್ಯಣ್ಣ ಮನೇಲಿ” ಅಂದ ಕೂಡ್ಲೇ, ಅಷ್ಟೇನೇನೋ ಅಂತ ಜೇಬಿಗೆ ಕೈ ಹಾಕಿ ತೆಗೆದು ಕೊಡ್ತಾ ಇದ್ರು. ಎಷ್ಟು ಕೊಟ್ರು, ಏನೂ ಯಾರಿಗೂ ಗೊತ್ತಾಗ್ತನೇ ಇರ್ತಿರ್ಲಿಲ್ಲ. ಆ ತರ ಧಾರಾಳ ಮನುಷ್ಯನ ನಾನು ನೋಡ್ಲೇ ಇಲ್ಲ. ಲೆಕ್ಕವೇ ಇಲ್ಲ ಆ ತರ ಕೊಟ್ಟಿದಾರೆ ಸುಮಾರು ಜನಕ್ಕೆ.


ಮತ್ತೆ ನಮ್ಮ ಮಾಲ್ಗುಡಿಯಲ್ಲಿ ಕೆಲ್ಸ ಮಾಡಿದ್ದ ಸುಮಾರು ಜನ, ಹೊರಗಡೆ ಕಾರು ಓಡಿಸ್ತಾ ಇದ್ದವ್ರು ಅಥವಾ ಬೆರೆ ಏನೋ ಮಾಡ್ತಿದ್ದವ್ರು ಏಳೆಂಟು ಜನ ಹುಡುಗ್ರನ್ನ ಕರ್ಕೊಂಡು ಬಂದು ಯೂನಿಯನ್ಗೆ ಸೇರ್ಸಿದ್ರು, ಅವಾಗ ಯೂನಿಯನ್ ಬಹಳ ಸ್ಟ್ರಿಕ್ಟಾಗಿತ್ತು. ಅವ್ರೆಲ್ಲಾ ಇವತ್ತಿಗೂ ಬಂದು ಹೇಳ್ತಾರೆ.” ನೀವು ಪ್ರೊಡಕ್ಷನ್ ಶುರು ಮಾಡಿದ್ರೆ ನಿಮ್ಹತ್ರನೇ ಬರ್ತೀವಿ, ನಿಮ್ಮ ರುಣ ಯಾವತ್ತೂ ಮರಿಯಕ್ಕೇ ಆಗಲ್ಲ, ನಮಿಗೆ ಲೈಫ್ ಮಾಡ್ಕೊಟ್ರಿ.” ಅಂತ. ದಾಸ್ ಅಂತ ಒಬ್ಬ ಡ್ರೈವರ್ ಕಾರು ಓಡ್ಸಕೊಂಡು ಬನಶಂಕರಿಯಲ್ಲೇ ಮನೆ ಎಲ್ಲಾ ಮಾಡ್ಕೊಂಡಿದ್ದಾನೆ. ಅವ್ನು ಫಸ್ಟ್ ಅಂಬಾಸಿಡರ್ ಕಾರು ತಗೊಂಡಾಗ, ಅದಕ್ಕೆ ಲೋನ್ ನಮ್ಮಪ್ಪನೇ ಕೊಟ್ಟಿದ್ದು. ಹದಿನಾಲ್ಕು ಸಾವಿರ ರೂಪಾಯಿ ಆಗ ಸೆಕೆಂಡ್ ಹ್ಯಾಂಡ್ ಕಾರಿಗೆ. ಅದಿಕ್ಕೆ ನಮ್ಮಪ್ಪ ಹತ್ತು ಸಾವಿರ ರೂಪಾಯಿ ಫಂಡ್ ಮಾಡಿ “ ತಗೊ ದಾಸ್ ನೀನು ಓಡ್ಸು” ಅಂತ. ಎಲ್ಲಿಂದನೋ ಬಂದವ್ನು, ಚೆನ್ನಾಗಿ ಗಾಡಿ ಓಡಿಸ್ತಾ ಇದ್ದ. ಅದಕ್ಕೆ ನಮ್ಮಪ್ಪ ಸಪೋರ್ಟ್ ಮಾಡಿದ್ರು.


ಆವಾಗೆಲ್ಲಾ ಟ್ರಸ್ಟ್ ಹಾಗಿತ್ತು. ಅವಾಗ ಹುಡುಗ್ರೂ ಅಷ್ಟೇ, ಈ ಟೈಮಿಂಗ್, ಆ ಟೈಮಿಂಗ್ ಅದೆಲ್ಲಾ ಇಲ್ಲ. ರಾತ್ರಿ ಎಷ್ಟೋ ಸಲ ಎಬ್ಸಿ “ಬನ್ರಯ್ಯ ಹೋಗ್ಬೇಕು” ಅಂದ್ರೆ “ ರೆಡಿ ಸಾರ್ ಅನ್ತಿದ್ರು. ಯಾರೂ ಕೂಡ ಬೇಜಾರು ಮಾಡ್ಕೊತಾನೇ ಇರ್ಲಿಲ್ಲ. ಒನ್ ಲಾರ್ಜ್ ಗುಡ್ ಫ್ಯಾಮಿಲಿ ಅದು, ಅದಂತೂ ಖಂಡಿತ ಮರಿಯಕ್ಕೇ ಆಗೋದಿಲ್ಲ. ಆಲ್ ಅವರ್ ಲೈಫ್, ವೀ ವಿಲ್ ಕ್ಯಾರಿ ದೋಸ್ ಮೆಮೊರೀಸ್. ಸಮ್ಥಿಂಗ್ ಇಂಪಾಸಿಬಲ್ ಟು ಫಾರ್ಗೆಟ್. ಅದು 3 ಯಿಯರ್ಸ್ ಹೇಗೆ ಹೋಯ್ತೂ ಅಂತ ಗೊತ್ತೇ ಆಗಿಲ್ಲ. ಆಂಡ್ ನೈಸ್ ಥಿಂಗ್ ಆಫ್ಟರ್ 33 ಯಿಯರ್ಸ್ ನೀವು ಬಂದು ಕೇಳ್ತಾ ಇದ್ದೀರ, ಆಂಡ್ ಐ ಆಮ್ ಗೋಯಿಂಗ್ ಬ್ಯಾಕ್ ಟು ದೋಸ್ ಡೇಸ್. ಐ ಡೋಂಟ್ ನೋ ಇನ್ ಹೌ ಮೆನಿ ಪ್ರಾಜೆಕ್ಟ್ಸ್ ಪೀಪಲ್ ವಿಲ್ ಥಿಂಕ್ ಬ್ಯಾಕ್ ಲೈಕ್ ದಿಸ್. ನಮಿಗೆ ಆ ಅದ್ರಷ್ಟ ಇದೆ. ಅದು ಕಂಪ್ಲೀಟ್ ಟೀಮ್ ಎಫರ್ಟ್ಸ್. ಯಾರ್ದೋ ಒಬ್ರದ್ದು ಅಂತ ಖಂಡಿತ ಹೇಳಕ್ಕಾಗಲ್ಲ.ಮುಂದುವರೆಯುವುದು…

24 views