ಶಂಕರ್‌ ಅವರ ಮಲ್ಟಿ ಡೈರೆಕ್ಟರ್‌ ಮಲ್ಟಿ ಸ್ಟೋರೀಸ್‌ ಕಾನ್ಸೆಪ್ಟ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 21

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)
ನಾನು ಹೇಳಿದ ಪ್ರಾಜೆಕ್ಟ್, ಸ್ಟಾರ್ಸ್ ಗಳಿಲ್ಲದೇ, ಬರೀ ಆಕ್ಟರ್ಸ್ ಗಳೇ ಇದ್ದಿದ್ರಿಂದ, ನಾವು ಮಾಡಿದ್ದ ಎರಡು ಮೂರು ಸಿನಿಮಾಗಳ ಬಜೆಟ್ ಬರ್ಡನ್ ಆಗುವಂತದ್ದಾಗಿರ್ಲಿಲ್ಲ. ಸೋ ಹಂಗಾಗಿ ಏನು ಮಾಡಿದ್ವಿ, ಈ ತರ ಸಣ್ಣ ಸಣ್ಣ ಕಥೆಗಳನ್ನ ಸೆಲೆಕ್ಟ್ ಮಾಡ್ಕೊಂಡು, ಅಪ್ಕಮಿಂಗ್ ಆರು ಜನ ಅಸೋಸಿಯೇಟ್ ಡೈರೆಕ್ಟರ್ಸ್ ಗಳನ್ನ ಸೆಲೆಕ್ಟ್ ಮಾಡೋಣ. ಒಬ್ಬೊಬ್ಬರೂ ಮೂರು ಮೂರು ಕಥೆಗಳನ್ನ ರಡಿ ಮಾಡ್ಕೊಂಡು, ನಮಗೆ ತಂದ್ಕೊಡ್ಬೇಕು. ಅದನ್ನ ನುರಿತವರು, ದಿಗ್ಗಜರು ಅಂತ ಅನಿಸ್ಕೊಂಡಿರುವಂಥ ಮೂರು ಜನ ಡೈರಕ್ಟರ್ ಗಳನ್ನ, ಯಾವುದಾದ್ರೂ ಸೆಕೆಂಡ್ ಸಂಡೆ ಮೀಟ್ ಮಾಡಿ, ಈ ಸಿನಿಮಾಗಳ ಲೈನ್ ಹೇಳೋದು. ಅವ್ರು ಏನು ಕರೆಕ್ಷನ್ ಹೇಳ್ತಾರೆ ಅದನ್ನ ಮಾಡ್ಕೊಳೊದು. “ಹೀಗೇ ಎರಡೆರಡು ತಿಂಗಳಿಗೆ ಒಂದೊಂದು ಸಿನಿಮಾ ಮಾಡೊದು” ಅಂತ ಯೋಚನೆ ಮಾಡ್ಕೊಂಡು, ಶುರು ಮಾಡಿದ್ವಿ. ಒಂದು ಸಿನಿಮಾದ ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ನಡಿತಾ ಇರುವಾಗ, ಅಷ್ಟರಲ್ಲಿ ‘ಮಾಲ್ಗುಡಿ ಡೇಸ್ ‘ ಬಂತು.


ಮುಂ

ದುವರೆಯುವುದು…

12 views