ಶಂಕರ್‌ ಎನರ್ಜಿಗೆ ಕಾಣವಾಗಿದ್ದ ಆ ತಿಂಡಿ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 103

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ಪರಮ್: ಯಾವುದಾದ್ರೂ ಅನ್ಫಾರ್ಗೆಟೆಬಲ್ ಮೂವ್ಮೆಂಟ್?


ಬದರಿನಾಥ್: ಆತರ ಬಹಳ ಕಷ್ಟ ರೀ, ಯಾಕಂದ್ರೆ ಎವ್ರಿ ಡೇ ಸಮ್ಥಿಂಗ್ ವಿಲ್ ಹಾಪನ್. ಪ್ರತೀದಿನ ಏನೋ ಒಂದು ಇನ್ಸಿಡೆಂಟ್ ಆಗ್ಲೇ ಬೇಕು. ಶಂಕರ್ ತುಂಬಾ ವರ್ಕೋಹಾಲಿಕ್, ಅವ್ರ ತರ ಮನುಷ್ಯ ಸಿಗೋದು ತುಂಬಾ ಕಷ್ಟ. ಎಷ್ಟೋ ಸಲ ನಾನೇ ಕೇಳಿದ್ದೀನಿ, “ಸುಸ್ತಾಗಲ್ವೇನ್ರೀ ನಿಮ್ಗೆ? ಬೆಳಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹನ್ನೆರಡು ಗಂಟೆ ತನಕ ಕಂಟಿನ್ಯೂಸ್ ಕೆಲ್ಸ ಮಾಡ್ತೀರ” ಅಂತ. ಅಚ್ಚುಕಟ್ಟಾಗಿ ಕೂತ್ಕೊಂಡು ತಿಂದಿದ್ದು ಬಹಳ ಕಡಿಮೆ, ಆ ಬಿಸ್ಕೆಟ್ಟು ಮತ್ತೆ ಟೀ ಯಲ್ಲೇ ಎನರ್ಜಿ. ಎಲ್ಲಿಂದ ದೇವರು ಅವ್ರಿಗೆ ಆತರ ಎನರ್ಜಿ ಕೊಟ್ರೋ ಗೊತ್ತಿಲ್ಲ. ಆಂಡ್ ಮೈಂಡ್ ಈಸ್ ವೆರಿ ಟ್ರಿಕ್ಕೀ.


ಮತ್ತೆ ಕೂತಿದ್ಕಡೆ ಏನಾದ್ರೂ ಬರಿತಾ ಇದ್ರು. ಅಪ್ಪನಿಗೆ ದಿಸ್ ಈಸ್ ಫಾರ್ ಯುವರ್ ಅಪ್ಡೇಟ್ ಅಂತ ಬರಿತಿದ್ರು. ಮಿಸ್ಟರ್ ಎನ್. ಅಂತ ಕರಿತಿದ್ರು. ಶಾರ್ಟ್ ಫಾರ್ಮ್. ನಾನು ಲ್ಯಾಬ್ ಗೆ ಹೋಗುವಾಗ ನಿಮ್ಮಪ್ಪನಿಗೆ ಕೊಟ್ಬಿಡೋ ಅಂತ ಕೊಡ್ತಿದ್ರು. ಎಲ್ಲಾ ಏಕವಚನದ ಫ್ರೆಂಡ್ಸೇ. ಬಟ್ ಸರ್ಟನ್ಲೀ ಡೈರೆಕ್ಟರ್ ಅಂತ ಬಂದಾಗ ಸರ್ ಅನ್ತಿದ್ವಿ. ಆಚೆ ಕಡೆ ಬಂದ್ರೆ ಫ್ರೆಂಡ್ಸ್, ಅದು ಬೇರೆ. ರಮೇಶ ಭಟ್, ಸೋಮು, ಕಾಶಿ ಎಲ್ಲರೂ ಹಾಗೇ ಗುಡ್ ಫ್ರೆಂಡ್ಸೇ. ಅದೇ ಹೇಳಿದ್ನಲ್ಲ, ರಮೇಶ್ ಭಟ್ ಅಸೋಸಿಯೇಟ್ ಡೈರೆಕ್ಟರ್, ನಾನು ಪ್ರೊಡ್ಯೂಸರ್ ಮಗ ನಾವು ಬೇರೆ ಬೇರೆ ಅಂತ ಇರ್ಲೇ ಇಲ್ಲ. ಎಲ್ಲಾ ಸೇಮ್, ಆಸ್ ಫ್ರೆಂಡ್ಸ್ ಫಾರ್ ಪ್ರಾಜೆಕ್ಟ್ ಅಷ್ಟೇ. ಅದು ಬಿಟ್ರೆ ನೋ ಚೇಂಜ್.ಮುಂದುವರೆಯುವುದು…

35 views