ಶಂಕರ್‌ ಕಟ್ಟಿದ್ದ ಮಾಲ್ಗುಡಿ ಟೀಂ ಏನಾಯ್ತು?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 58

(ಮಾಲ್ಗುಡಿ ಡೇಸ್ ಕಾಸ್ಟ್ಯೂಮ್ ಮುಖ್ಯಸ್ಥೆ, ಸುಂದರಶ್ರೀ ಅವರ ನೆನಪುಗಳು)


ಪರಮ್: ಆ ಇಡೀ ಟೀಮ್ ಮತ್ತೆ ಸೇರಿ ಕೆಲ್ಸ ಮಾಡಿದ್ರಾ?


ಸುಂದರಶ್ರೀ: ಇಲ್ಲ 1989 ರಲ್ಲಿ ಅವರ ‘ಕಂಟ್ರೀ ಕ್ಲಬ್’ ಶುರುವಾಯ್ತು. ಆಮೇಲೆ ಅವ್ರು ಅದ್ರಲ್ಲೇ ಬ್ಯುಸಿ ಆಗಿದ್ರು. 1990 ಹೋಗೇ ಬಿಟ್ರಲ್ಲ ಶಂಕರ್.


ಪರಮ್: ಆಗ ನಿಮ್ಮ ಒಡನಾಟಗಳು ಕಟ್ ಆಗಿತ್ತಾ?


ಸುಂದರಶ್ರೀ: ಇಲ್ಲಪ್ಪ. ಅವರ ಜೊತೆ ಒಡನಾಟ ಯಾವತ್ತೂ ಕಟ್ ಆಗ್ಲೇ ಇಲ್ಲ. ನಾವು ಬರೊದು ಹೋಗೋದು ಎಲ್ಲಾ ಇತ್ತು. ಮತ್ತೆ 1989 ರಲ್ಲಿ ನಾಗಮಂಡಲ ನಾಟಕ ಮಾಡಿದ್ವಿ. ನನ್ನ ಮಗಳಿಗೆ ಆಗ ಐದು ವರ್ಷ, ಸ್ಕೂಲಿಗೆ ಹೋಗ್ತಿದ್ಳು. ಅದಕ್ಕೆ ನನಗೆ ನಾಟಕದಲ್ಲಿ ವರ್ಕ್ ಮಾಡಕ್ಕೆ ಆಗ್ಲಿಲ್ಲ. ಒಡನಾಟ ಏನೂ ಕಟ್ ಆಗ್ಲಿಲ್ಲ.


ಪರಮ್: ಈಗ 35 ವರ್ಷ ಆದ್ಮೇಲೆ ತಿರುಗಿ ನೋಡಿದ್ರೆ, ಆ ಒಡನಾಟಗಳ ನೆನಪುಗಳು ಹೇಗನ್ನಿಸುತ್ತೆ?

ಸುಂದರಶ್ರೀ: ಶಂಕರ್ ಇರ್ಬೇಕಾಗಿತ್ತು ಅನ್ಸುತ್ತೆ. ಇದ್ದಿದ್ರೆ ನಮ್ಮ ಕರ್ನಾಟಕದ ಸಿನಿಮಾ ಇಂಡಸ್ಟ್ರೀ ಏನೋ ಆಗ್ಬಿಡೋದು. ಯಾಕಂದ್ರೆ ಆ ವ್ಯಕ್ತಿ ಹೇಗೆಂತಂದ್ರೆ, ಇಪ್ಪತ್ತು ವರ್ಷ ಮುಂದಿನದ್ದು ಈಗ ಯೋಚನೆ ಮಾಡ್ತಿದ್ರು. ಅವರು ನಿದ್ದೆ ಮಾಡಿದ್ದು ನಾವು ನೋಡ್ಲೇ ಇಲ್ಲ. ಅವ್ರು ಟ್ರಾವಲ್ ಮಾಡುವಾಗ ನಿದ್ರೆ ಮಾಡೊರು. ಟ್ರಾವಲ್ ಮಾಡುವಾಗ್ಲೂ ಏನೋ ಸ್ಕ್ರಿಪ್ಟ್ ವರ್ಕ್ ಎಲ್ಲಾ ಮಾಡ್ತಿದ್ರು. ಕಂಟ್ರೀ ಕ್ಲಬ್ ಅವಾಗ ಶುರುವಾಗ್ತಾ ಇತ್ತು, ಅದರ ವರ್ಕ್ ಕೂಡ ಮಾಡೋರು. ಆ ವ್ಯಕ್ತಿ ನಿಜವಾಗ್ಲೂ ಯಾವಾಗ ನಿದ್ರೆ ಮಾಡ್ತಿದ್ರು, ಯಾವಾಗ ರೆಸ್ಟ್ ತಗೊತಿದ್ರು ನಮಗೆ ಗೊತ್ತಿಲ್ಲ. ವೆರಿ ಎಂಗೇಜ್ಟ್. ಅವರು ಹಂಗೆ ಹೋಗ್ಬಾರ್ದಿತ್ತು. ಬಟ್ ಏನು ಮಾಡೋದು? ಸಾವು ಯಾರನ್ನೂ ಕಾಯಲ್ಲ ಅಲ್ವಾ?
ಸಂದರ್ಶನ-ಕೆ.ಎಸ್ ಪರಮೇಶ್ವರ


(ಮಾಲ್ಗುಡಿ ಡೇಸಲ್ಲಿ ಕಾಸ್ಟ್ಯೂಮ್ ಮುಖ್ಯಸ್ಥೆ ಆಗಿದ್ದ ಸುಂದರಶ್ರೀ ಅವರ ನೆನಪುಗಳು ಇಲ್ಲಿಗೆ ಮುಕ್ತಾಯವಾಯಿತು. ಮಾಲ್ಗುಡಿ ಡೇಸ್ ಸೆಟ್ ಕ್ರಿಯೇಟರ್ ಆಗಿರುವ ಆರ್ಟ್ ಡೈರಕ್ಟರ್ ಜಾನ್ ದೇವರಾಜ್ ಅವರ ನೆನಪುಗಳು. ಮುಂದಿನ ಸಂಚಿಕೆಯಲ್ಲಿ.)

22 views