ಶಂಕರ್‌ ಕನಸು ʼಲೋ ಕಾಸ್ಟ್‌ ಹೌಸಿಂಗ್‌ʼ ಮತ್ತು ʼರೋಪ್‌ ವೇʼ

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 113

(ಮಾಲ್ಗುಡಿ ಡೇಸ್‌ ಆಡಿಟರ್‌ ವೆಂಕಟೇಶ್ ನೆನಪುಗಳು)ಅವ್ರ ಥಿಂಕಿಂಗ್ ಹೇಗಂದ್ರೆ, ಈ ಲೋಕಾಸ್ಟ್ ಹೌಸಿಂಗ್ ಮಾಡ್ಬೇಕೂಂತ ಆಸ್ಟ್ರೇಲಿಯಾಕ್ಕೆ ಹೋದ್ರು. ಒಂದು ಮನೆ ಕಟ್ಟಿ ಡೆಮೋ ತೊರ್ಸಿದ್ರು ಗವರ್ಮೆಂಟಿಗೆ. ವಿತಿನ್ ಫ್ಯೂ ಡೇಸ್, ಲೋ ಕಾಸ್ಟಲ್ಲಿ ಮನೆ ಕಟ್ಬಹುದು, ಅದು ಸಸ್ಟೇನ್ ಆಗುತ್ತೆ, ಬಡವರಿಗೆಲ್ಲಾ ಬಹಳ ಹೆಲ್ಪ್ ಆಗ್ಬೇಕೂಂತ.


“ಕರ್ನಾಟಕದಲ್ಲಿಒಂದು ರೋಪ್ ವೇ ಇದ್ರೆ ಹೆಂಗಿರುತ್ತೆ?” ಅಂದ್ರು. ಸೋ ನಂದಿ ಹಿಲ್ಸಲ್ಲಿ ಒಂದು ರೋಪ್ ವೇ ಮಾಡ್ಬೇಕು ಅಂತ ಅವ್ರಿಗೆ ಆಸೆ ಇತ್ತು. ಕೆಳಗಡೆ ಐದು ಎಕರೆ ಜಮೀನು ತಗೊಂಡ್ಬಿಟ್ರು. “ಪರ್ಮಿಶನ್ ತಗೊಂಡು ಬರ್ತೀನಿ ಕೇಬಲ್ ಕಾರು ಮಾಡೋಣ”ಅಂತಹೇಳ್ತಿದ್ರು. ಕೆಳಗಡೆ ಡಿಸ್ನಿ ವಲ್ಡ್ ತರ ಅಮ್ಯೂಸ್ಮೆಂಟ್ ಪಾರ್ಕ್ ಮಾಡುವ ಪ್ಲಾನ್ ಇತ್ತು. ಸೋ ಒಂದಲ್ಲ ಎರಡಲ್ಲ ಅವ್ರ ತಲೆಯಲ್ಲಿ ಸೋ ಮೆನಿ ಥಿಂಗ್ಸ್ ಓಡ್ತಾ ಇತ್ತು.ಮುಂದುವರೆಯುವುದು…

8 views