ಶಂಕರ್‌ ಜೊತೆಗಿನ ನಾಟಕದ ಎಕ್ಸಪೀರಿಯನ್ಸ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 79

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ಆಂಡ್ ಆ ನಾಟಕ ಆದ್ಮೇಲೆ ನಾನು ‘ಸಂಕೇತ್’ಅಲ್ಲಿವರ್ಕ್ ಮಾಡಕ್ಕೆ ಶುರು ಮಾಡ್ದೆ. ಅವ್ರ ಜೊತೆ ಕೆಲವು ನಾಟಕಗಳಲ್ಲೂ ಕೆಲ್ಸಮಾಡ್ದೆ, ಒಂದು ಇಂಗ್ಲೀಷ್ ನಾಟಕ ಕನ್ನಡಕ್ಕೆ ಅನುವಾದ ಮಾಡಿ ರಿಹರ್ಸಲ್ ಎಲ್ಲಾ ಮಾಡಿದ್ವಿ, ಬಟ್ ನಾಟಕ ಆಗ್ಲಿಲ್ಲ ಅದು. ಬಟ್ ಶಂಕರ್ ನಾಗ್ ನಮಿಗೆ ಬಹಳ ಕ್ಲೋಸ್ ಆಗಿದ್ದು ಅಂದ್ರೆ ‘ ನೋಡಿ ಸ್ವಾಮಿ ನಾವಿರೋದೆ ಹೀಗೆ’ನಾಟಕಮಾಡ್ದಾಗ. ರಮೇಶ್ ಭಟ್, ಆರುಂಧತಿ ನಾಗ್, ಶಂಕರ್ ನಾಗ್ ನರೇಟರ್. ಮೂರೇ ಜನ ಆರ್ಟಿಸ್ಟ್ಗಳು. ಒಂಥರಾ ಪ್ರಾಪರ್ಟೀಸ್ ಎಲ್ಲಾ ಎಷ್ಟು ಅಹೆಡ್ ಆಗಿತ್ತು ಅಂದ್ರೆ, ಒಂದು ಬಾಕ್ಸಲ್ಲಿ ಮನೆ ಆಗೋದು, ಬಸ್ ಸ್ಟಾಂಡ್ ಆಗೋದು, ಬಸ್ ಆಗೋದು, ಬೆಡ್ ಆಗೋದು ಎಲ್ಲಾದ್ರನ್ನೂ ನಾಲ್ಕು ಬಾಕ್ಸಲ್ಲಿ ರಡಿ ಮಾಡಿಟ್ಟಿದ್ರು. ನಮ್ಮ ಕೆಲ್ಸ ಏನಂದ್ರೆ ಆ ಬ್ಲಾಕ್ ಗೆ ಸರಿಯಾಗಿ ಪ್ರಾಪರ್ಟೀಸ್ ನ ಬದಲಾವಣೆ ಮಾಡೋದು, ಯಾವ ಸೀನಲ್ಲಿ ಬಸ್ ಆಗುತ್ತೆ? ಯಾವ ಸಿನಲ್ಲಿ ಅದು ಅಡುಗೆ ಮನೆ ಆಗುತ್ತೆ?, ಯಾವ ಸೀನಲ್ಲಿ ಅದು ಬೆಡ್ ರೂಮ್ ಆಗುತ್ತೆ? ಅವೆಲ್ಲಾ ನಮ್ಮ ಕೆಲ್ಸ ಆಗಿತ್ತು. ಅಂದ್ರೆ ಇಟ್ ಬಿಕೇಮ್ ಅ ಕ್ರೇಜ್ ಅವಾಗ. ‌ಮುಂದುವರೆಯುವುದು…

12 views