ಶಂಕರ್‌ ಟೀಂ ಅಂದ್ರೆ ಎಲ್ಲರೂ ಎಲ್ಲ ಕೆಲಸಕ್ಕೂ ಸೈ ಅದು ಹೇಗೆ?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 42

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ರಮೇಶ್ ಭಟ್: ನನ್ನನ್ನ ಕೇಳ್ತಾರೆ “ಏನು ಸಾರ್ ಅವ್ರ ಜೊತೆ ಇದ್ದು ನೀವೆಲ್ಲ ಏನೂ ಮಾಡಿಲ್ಲ” ಅಂತ.


ನಾವೇನು ಹೇಳ್ಬೇಕೂಂತ ಗೊತ್ತಾಗದೆ “ನಾವು ಮಿರರ್ ಇದ್ದ ಹಾಗೆ ಲೈಟ್ ಬಿಟ್ರೆ ಲೈಟ್ ಬರುತ್ತೆ ಅಷ್ಟೆ”.

ಪರಮ್: ಎಂತ ಮಾತು ಹೇಳ್ಬಿಟ್ರಿ ಸರ್?


ರಮೇಶ್ ಭಟ್: ಹೌದು ಸಾರ್. ಅವ್ರು ಲೈಟ್, ಲೈಟ್ ಹಾಕಿದ್ರೆ ಲೈಟ್ ರಿಫ್ಲೆಕ್ಟ್ ಆಗುತ್ತೆ ಅಷ್ಟೆ. ಬೇರೇನು ನಮ್ಹತ್ರ ಇಲ್ಲಾಂತ ಒಪ್ಕೋಬೇಕು. ಕಲ್ತದ್ದನ್ನ ಎಲ್ಲೂ ಹಾಕೋದಿಕ್ಕೆ ಅವಕಾಶ ಸಿಗ್ತಾ ಇಲ್ಲ, ಅಥವಾ ನಾವು ಅವಕಾಶ ಮಾಡ್ಕೊತಾ ಇಲ್ಲ. ಒಟ್ನಲ್ಲಿ ಎಡವಟ್ಟಾಗಿದೆ. ಕಲ್ತಿದ್ದು ತುಂಬಾ ಇದೆ. ಅದನ್ನ ಎಲ್ರಿಗೂ ಕಲ್ಸಿದ್ದು ತುಂಬಾ ಇದೆ.


ಪರಮ್: ಪೋಸ್ಟ್ ಮಾಲ್ಗುಡಿ ಡೇಸ್ ಬಹಳ ಕಡಿಮೆ ಸಮಯ ಇದ್ರು ಶಂಕರ್ ನಮ್ಮ ಜೊತೆ. ಸೋ ಯಾವುದೆಲ್ಲ ಪ್ರಾಜೆಕ್ಟ್ ಮಾಡಿದ್ರಿ?


ರಮೇಶ್ ಭಟ್: ಅದ್ರಲ್ಲಿ ಸೌಂಡ್ ಅಫೆಕ್ಟ್ ನಾವೇ ಕೊಡ್ತಾ ಇದ್ವಿ, ಮಿಕ್ಸಿಂಗ್ ನಾವೇ ಮಾಡ್ತಾ ಇದ್ವಿ. ಬಹಳ ಎಂಜಾಯ್ ಮಾಡ್ತಾ ಇದ್ವಿ. ನಾವು ಎಷ್ಟು ಆಟ ಆಡಿದ್ದೀವಿ ಅಂದ್ರೆ, ಈಗ ಬಟ್ಟೆ ಯಾರಿಗೋ ಹೊಲ್ದಿರ್ತೀವಿ ಅದನ್ನ ಓಲ್ಡ್ ಮಾಡ್ಬೇಕು. ಹೇಗೆ ಮಾಡೋದು? ಮುದರಿ, ಗಿದರಿ ರಿಂಕಲ್ಸ್ ಆಗ್ಬಿಡುತ್ತೆ. ಹರ್ದೋಗಿರ್ಬೇಕು. ಕತ್ರಿಯಲ್ಲಿ ಕತ್ತರಿಸಿದ್ರೆ ಹರ್ದೋದಂಗೆ ಅನ್ಸಲ್ಲ. ಸವ್ದು ಹರಿಬೇಕು. ಹೆಂಗೆ? ಸೋ ಒಂದು ಗ್ಯಾಸ್ ಬರ್ನರ್ ಇಟ್ಕೊಂಡಿದ್ವಿ. ಬಟ್ಟೆ ಮೇಲೆ ಸ್ವಲ್ಪ ಬೆಂಕಿ ಹಾಕೊದು, ಆಮೇಲೆ ಒಳಗಡೆ ಒಂದು ಕಲ್ಲು ಇಟ್ಕೊಂಡು ಕಲ್ಲಲ್ಲಿ ಗುದ್ದೊದು. ಹೊಸ ಬಟ್ಟೆಲೆಲ್ಲಾ ಗ್ಲಿಟರ್ ಇರುತ್ತೆ, ಸ್ಟ್ರಕ್ಚರ್ ಎಲ್ಲಾ ಕ್ಯಾಮರಾದಲ್ಲಿ ಹೆಂಗೆ ಕಾಣ್ಸುತ್ತೆ ಅಂದ್ರೆ? ಬ್ರಾಂಡ್ ನ್ಯೂ ತರ ಕಾಣ್ಸುತ್ತೆ. ಅದನ್ನ ಹಳೇದು ಮಾಡೋದೇ ಒಂದು ಟೆಕ್ನಿಕ್. ಅದೇ ಒಂದು ದೊಡ್ಡ ಕೆಲಸ ನಮಗೆ.


ಮುಂದುವರೆಯುವುದು…

5 views