
ಶಂಕರ್ ನ ಕೊನೆ ಗಳಿಗೆಯಲ್ಲಿ ನೋಡಲು ಸಾಧ್ಯವಾಗಲಿಲ್ಲ
ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 123
(ಮಾಲ್ಗುಡಿ ಡೇಸ್ ಕ್ಯಾಮರಾ ಅಸಿಸ್ಟೆಂಟ್ ನಾಗರಾಜ ಆದವಾನಿ ಅವರ ನೆನಪುಗಳು)

ಪರಮ್: ಶಂಕರ್ ಬಹಳ ಸಿಂಪಲ್ ಅಂತ ಕೇಳ್ಪಟ್ಟಿದ್ದೀನಿ, ಅದೇನಾದ್ರೂ ನೆನಪಿದ್ಯಾ? ಶಂಕರ್ ಸಿಂಪ್ಲಿಸಿಟಿ ಹೇಗಿತ್ತು?
ನಾಗರಾಜ್: ಆಗುಂಬೆಯಲ್ಲಿ ಶೂಟ್ ಮಾಡುವಾಗ ಅಲ್ಲಿಯ ಜನರೆಲ್ಲಾ ತುಂಬಾ ಸಪೋರ್ಟ್ ಮಾಡ್ತಿದ್ರು. ಶಂಕರ್ ಹಾಗೆ ಲೋಕಲ್ ಜನರ ಮಧ್ಯ ಬೆರಿತಾ ಇದ್ರು.
ಪರಮ್: ಮಾಲ್ಗುಡಿಯಿಂದ ಬೇರೆನಾದ್ರು ಕಲ್ತಿರೋದು ಅಥವಾ ಅಡಾಪ್ಟ್ ಮಾಡಿರೋದು ಯಾವುದು ಅಂತ ಹೇಳಕ್ಕೆ ಇಷ್ಟ ಪಡ್ತೀರ ಸರ್ ನೀವು?
ನಾಗರಾಜ್: ಮಾಲ್ಗುಡಿಯಿಂದ ಸಾಕಷ್ಟು ಫೊಟೊಗ್ರಫಿ ಮತ್ತೆ ಡೈರಕ್ಷನ್, ನಾನು ಮಾಡಿರೋದು ಸೀರಿಯಲ್ ಡೈರಕ್ಷನ್. ಅದನ್ನ ಕೂಡ ಸಾಕಷ್ಟು ಕಲ್ತಿದ್ದೀನಿ. ಅದು ನನಿಗೆ ಮಾರ್ಗದರ್ಶನ ಅಂತನೇ ಹೇಳ್ಬಹುದು.
ಪರಮ್: ಶಂಕರ್ ನಾಗ್ ಅವ್ರ ಕೊನೇ ದಿವ್ಸ, ಅದು ಏನಾದ್ರೂ ನೆನಪಿದ್ಯಾ ನಿಮ್ಗೆ?
ನಾಗರಾಜ್: ಶಂಕರ್ ನಾಗ್ ಅವ್ರ ಕೊನೆ ದಿವ್ಸ, ನಮ್ಮ ದುರಾದೃಷ್ಟ ಏನೋ. ನಾವು ಬೆಂಗ್ಳೂರಲ್ಲಿ ಇರ್ಲಿಲ್ಲ. ಇದೇ ನರಸಿಂಹನ್ ಅವ್ರದ್ದು ಸ್ಪೂನ್ ಬಾಯ್ ಅಂತ ಮಾರೊಷಿಯಸ್ ಅಲ್ಲಿ ಶೂಟಿಂಗ್ ನಡಿತಾ ಇತ್ತು. ನಾಗಾಭರಣ ಡೈರಕ್ಷನ್. ಸೋ ಅಲ್ಲಿದ್ದಾಗ ನಮಿಗೆ ಶಂಕರ್ ನಾಗ್ ಹೋದ್ರು ಅಂತ ಸುದ್ದಿ ಬಂತು. ಅಲ್ಲಿ ಅವತ್ತು ಯಾರಿಗೂ ಕೆಲ್ಸ ಮಾಡಕ್ಕೇ ಆಗ್ಲಿಲ್ಲ. ನಮ್ಮ ದುರಾದೃಷ್ಟ ಏನೋ ಅವ್ರ ಕೊನೆ ಗಳಿಗೆನ ನಮಿಗೆ ನೋಡಕ್ಕಾಗ್ಲಿಲ್ಲ.
ಮುಂದುವರೆಯುವುದು…