ಶಂಕರ್‌ನಾಗ್‌ ಅನಂತನಾಗ್‌ ಜಗಳ ಆಡ್ತಿದ್ದದ್ದು ಯಾಕೆ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 77

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)


ಶಂಕರ್‌ನಾಗ್‌ ಅನಂತನಾಗ್‌ ಇಬ್ರದ್ದು ಎಷ್ಟು

ಪ್ರೊಫೇಷನಲ್, ಎಷ್ಟು ಡೆಡಿಕೇಷನ್ ಅಂದ್ರೆ ರಾತ್ರಿ ಹತ್ತು ಹನ್ನೊಂದು ಗಂಟೆಯವರೆಗೂ ರಿಹರ್ಸಲ್ ಮಾಡ್ತಿದ್ರು, ಒಂದು ದಿನನೂ ಮಿಸ್ ಮಾಡ್ತಿರ್ಲಿಲ್ಲ. ಅನಂತ್ ನಾಗ್ ಅವ್ರ ಜೊತೆ ಅವ್ರ ಭಾಷೆಯಲ್ಲೇ ಜಗಳ ಬೇರೆ ಆಗ್ತಿತ್ತು, ಯಾಕಂದ್ರೆ ಅನಂತ್ ನಾಗ್ ಅವ್ರು, ಸ್ವತ ಆ ನಾಟಕದಡೈರೆಕ್ಟರ್‌ ಆಗಿದ್ದ ಶಂಕರ್‌ನಾಗ್ ಅವ್ರ ಮಾತನ್ನೂಕೇಳ್ತಿರ್ಲಿಲ್ಲ. ಬಟ್ ‘ಬ್ಯಾರಿಸ್ಟರ್’ನಾಟಕ ವಾಸ್ ಹ್ಯೂಜ್ ಸಕ್ಸಸ್. ಜಾಸ್ತಿ ಶೋ ಮಾಡಕ್ಕೆ ಆಗ್ಲಿಲ್ಲ. ನಾನು ಆಕ್ಚುಲಿ ಟಿಕೇಟ್ ಕೌಂಟರಲ್ಲಿ ಕೂರ್ತಿದ್ದೆ. ಒಂದು ಸಲ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಬ್ಯಾರಿಸ್ಟರ್ ಶೋ, ಅನಂತ್ ನಾಗ್ ಮತ್ತೆ ಶಂಕರ್ ನಾಗ್ ಇಬ್ರೂ ಬಾಂಬೆನಲ್ಲಿದ್ರು. ಲಾಸ್ಟ್ ಮೂವ್ಮೆಂಟಲ್ಲಿ ಅಲ್ಲಿ ಫೈಟ್ ಏನೋ ಆಗಿ ದೇ ಕುಡ್ ನಾಟ್ ಕಮ್. ಇಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗ್ಬಿಟ್ಟಿತ್ತು. ಜನ ಆಚೆ ನಿತ್ಕೊಂಡಿದ್ರು ನಾಟಕ ನೋಡೋದಿಕ್ಕೆ. ಬಟ್ ಶೊ ಕ್ಯಾನ್ಸಲ್ ಆಗ್ಬಿಟ್ಟಿದೆ! ಹೆಂಗೆ ಹೇಳೊದು ಅಂತ ಎಷ್ಟು ಟೆನ್ಶನ್ ಆಗ್ಬಿಟ್ಟಿತ್ತು ಅಂದ್ರೆ ನಮ್ಗೆಲ್ಲಾ, ಅಷ್ಟು ಜನಗಳಿಗೆ ಹೆಂಗೆ ಹೇಳೊದು ನಾಟಕ ಕ್ಯಾನ್ಸಲ್ ಆಗಿದೆ ಅಂತ? ಬಟ್ ಶಂಕರ್ ನಾಗ್ ಫೋನ್ ಮೂಲಕ ಎಲ್ರಿಗೂ ಸಮಾಧಾನ ಮಾಡಿ, ಇನ್ನೊಂದು ಶೋ ಹಾಕಿ ಕೊಟ್ರು. ಗೇಣಿ ಪ್ರಸಾದ್ ಅಲ್ಲಿ.ಮುಂದುವರೆಯುವುದು…

16 views