ಶಂಕರ್‌ ನಾಗ್‌ ಅವರ ದಿನಚರಿ ಕೇಳಿದ್ರೆ ಸುಸ್ತಾಗುತ್ತೆ..

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 129

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)
ಅವಾಗ ಆರುಂಧತಿ ಯವರು ಮತ್ತು ಪಿಂಟಿಯವರು ಕಬ್ಬನ್ ಪಾರ್ಕಲ್ಲಿ ಒಂದು ಕ್ಯಾಂಟಿನ್ ನಡಸ್ತಾ ಇದ್ರು, ಅದಕ್ಕಾಗಿ ಒಂದು ಮೆಟಡೊರ್ ಇಟ್ಕೊಂಡಿದ್ರು. ಅದರ ರೂಫ್ ಹೈಟ್ ಜಾಸ್ತಿ ಮಾಡಿ ಕಬ್ಬನ್ ಪಾರ್ಕ್ ಬಾಲಭವನದ ಹತ್ತಿರ ಕ್ಯಾಂಟಿನ್ ನಡಸ್ತಾ ಇದ್ರು. ಜಗ್ಗ, ಜನರೇಟರ್ ಶಂಕ್ರ ಇನ್ನೊಬ್ಬ ಎಲೆಕ್ಟ್ರಿಕ್ ರಾಜು ಅವ್ರೆಲ್ಲಾ ಸೇರಿ ನನ್ನ ಬೈಕನ್ನ ಅನಾಮತ್ತಾಗಿ ತೆಗೆದು ಆ ವ್ಯಾನಲ್ಲಿ ಹಾಕ್ತಿದ್ರು. ಶಂಕರ್ ಸ್ವತಹ ಡ್ರೈವ್ ಮಾಡ್ತಿದ್ರು ಅವ್ರ ಜೊತೆ ಜಗ್ಗ ಅಥವಾ ಇನ್ಯಾರಾದ್ರೂ ಬರ್ತಿದ್ರು. ಶೇಶಾದ್ರಿಪುರದಲ್ಲಿದ್ದ ನನ್ನ ಮನೆಗೆ ಕರ್ಕೊಂಡು ಬರ್ತಿದ್ರು.


ನನ್ನ ತಾಯಿ ಪತ್ರಕರ್ತರಾಗಿದ್ದರಿಂದ ಅವ್ರಿಗೆ ನಿಕಟವಾದ ಸಂಪರ್ಕ ಇತ್ತು. ಹಾಗೆ ಬಂದವ್ರು ಅಮ್ಮನ ಎಬ್ಸೋ ಅಂತ ಹೇಳ್ತಿದ್ರು. ಅಮ್ಮ ಎದ್ದ ಮೇಲೆ ಅವ್ರ ಹರಟೆ ನಡಿತಾ ಇತ್ತು ನಾನು ಮಲಗಿ ಬಿಡ್ತಾ ಇದ್ದೆ. ಗ್ರೀನ್ ಟೀ ಕುಡಿತಾ ಮಾತಾಡ್ತಾ ಇದ್ರು. ಯಾಕಂದ್ರೆ ಅವ್ರಿಗೆ ಬೆಳಗ್ಗೆ ಆರು ಗಂಟೆಗೆ ಫ್ಲೈಟ್, ಚೆನ್ನೈಯಲ್ಲಿ ಅವ್ರ ಶೂಟಿಂಗ್ ಇರ್ತಿತ್ತು.


ಸೋ ನನ್ನನ್ನ ಮೂರು ಗಂಟೆ ರಾತ್ರಿ ಮನೆಗೆ ತಲುಪಿಸಿ, ಅಲ್ಲಿಂದ ನಾಲ್ಕೂವರೆಯ ವರೆಗೆ ನಮ್ಮ ಮನೆಯಲ್ಲಿ ಮಾತಾಡಿ, ಅಲ್ಲಿಂದ ಸೀದಾ ಏರ್ಪೋರ್ಟಿಗೆ ಹೋಗಿ, ಫ್ಲೈಟಲ್ಲಿ ಚೆನ್ನೈಗೆ ಹೋಗಿ, ಅಲ್ಲೀ ಶೂಟಿಂಗ್ ಮುಗಿಸಿಕೊಂಡು, ಸಾಯಂಕಾಲ ವಾಪಸ್ ಮನೆಗೆ ಬಂದು ‘ಆಕ್ಸಿಡೆಂಟ್’ಚಿತ್ರ ಕತೆಯ ಚರ್ಚೆ ಮಾಡ್ತಿದ್ರು.ಮುಂದುವರೆಯುವುದು…

31 views