ಶಂಕರ್‌ನಾಗ್ ಅವರ ಪ್ರತಿಮೆ ಈಗ ಎಲ್ಲೇಲ್ಲಿದೆ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 73

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)ನಾನು ಟೀ ಕುಡೀಲಿಲ್ಲ, ನಾಷ್ಟನೂ ಮಾಡ್ಲಿಲ್ಲ. ಇಮೀಡಿಯಟ್ ಆಗಿ ಅವತ್ತು ಶಂಕರ್‌ ಆಸೆಯಿಂದ ಹೇಳಿದ ಹಾಗೆ ಶಂಕರ್ ದು ಒಂದು ಸ್ಕಲ್ಪಚರ್ ಮಾಡಕ್ಕೆ ಶುರು ಮಾಡ್ದೆ. ಆ ಸ್ಕಲ್ಪಚರ್ ಈಗ ಸೆಂಟ್ರಲ್ ಲಲಿತ್ ಅಕಾಡೆಮಿ ಡೆಲ್ಲಿ ಯಲ್ಲಿದೆ. ಬಾರಿ ಕಷ್ಟ ಆಯ್ತು ನನಗೆ ಆಪ್ರೋಸಸ್ ನ ಮಾಡಕ್ಕೆ. ನಾನು ಏನೇ ಮಾಡಿದ್ರೂ ಬರ್ತನೇ ಇರ್ಲಿಲ್ಲ. ನನ್ನ ಕೈ ಕಾಲು ಏನೂ ಓಡ್ತಿರ್ಲಿಲ್ಲ. ನನಗೆ ಯಾವಾಗ್ಲೂ ಯೋಚ್ನೆ ಆಗೊದು, ಶಂಕರ್ ನಮ್ಮ ಮನೆಯಲ್ಲಿ ಅವತ್ತು ನಿಲ್ಸಿದ್ದಿದ್ರೆ ಐದು ನಿಮಿಷ ಟೀ ಎಲ್ಲ ಕುಡ್ಕೊಂಡು, ಟೈಮ್ ಪಾಸ್ ಆಗಿದ್ದಿದ್ರೆ, ಅವ್ನು ಉಳ್ಕೊತಿದ್ನೊ ಏನೋ? ಹಾಗಾಗಿದ್ರೆ ಶಂಕರ್ ಈಗ ನಮ್ಮ ಜೊತೆ ಇರ್ತಿದ್ನೋ ಏನೋ, ಅಂತ ಯಾವಾಗ್ಲೂ ಅನ್ಕೊಳ್ತಾ ಇದ್ದೆ. ನಮ್ಮ ಜೀವನದಲ್ಲಿ ಬಹಳಷ್ಟು ಪರಿಣಾಮ ಬೀರಿದಂತಹ ಗೆಳೆಯ.


ಈಗ ರೀಸೆಂಟಾಗಿ ನಾನು ಶಂಕರ್ ನಾಗ್ ಗೆ ಇನ್ನೊಂದು ಟ್ರಿಬ್ಯೂಟ್ ಮಾಡ್ದೆ. ಶಂಕರ್ ನಾಗ್ ನ ಕ್ಯಾರೆಕ್ಟರ್ ಅನ್ನ, ಆತ ಯಾವ ರೀತಿ ಒಬ್ಬ ಫ್ಲಾಮ್ ಬಾಯ್ ‘ದ ಫ್ರೀ ಸ್ಪಿರಿಟ್ ಆಫ್ ಶಂಕರ್ ನಾಗ್ʼ ಅಂತ ಒಂದು ಸ್ಕಲ್ಪಚರ್ ಮಾಡಿ ಇಟ್ಟಿದ್ದೀನಿ. ದಟ್ಸ್ ಫಾರ್ ಶಂಕರ್.\


ಪರಮ್: ಸೋ ಇಂತಹ ಒಬ್ಬ ಒಳ್ಳೆಯ ಗೆಳೆಯನ ಜೊತೆ ನೀವು ಕಲ್ತದ್ದು, ಅಡಾಪ್ಟ್ ಮಾಡ್ಕೊಂಡಿದ್ದು ಏನು ಅಂತ ಕೇಳ್ಬಹುದಾ?


ಜಾನ್ ದೇವರಾಜ್: ಹಾ, ಪ್ರತಿಯೊಬ್ಬರ ಕಲೆಗೂ ನಾವು ಗೌರವ ಕೊಡ್ಬೇಕು. ಪ್ರತಿಯೊಬ್ಬರ ಕ್ಯಾರೆಕ್ಟರ್ ಕೂಡ ಬಹಳ ಇಂಪಾರ್ಟೆಂಟ್. ನಗುನಗುತ್ತಾ, ಲವಲವಿಕೆಯಿಂದ ಎಲ್ಲರನ್ನೂ ಒಂದುಗೂಡ್ಸೊದು ಮುಖ್ಯವಾಗಿ ಇದನ್ನೆಲ್ಲಾ ಕಲ್ತಿದ್ದು ಮಾಲ್ಗುಡಿ ಡೇಸ್ ಇಂದ.ಸಂದರ್ಶನ-ಕೆ.ಎಸ್ ಪರಮೇಶ್ವರ

(ಮಾಲ್ಗುಡಿ ಡೇಸ್ ಸೆಟ್ ಕ್ರಿಯೇಟರ್ ಆಗಿರುವ, ಆರ್ಟ್ ಡೈರಕ್ಟರ್ ಜಾನ್ ದೇವರಾಜ್ ಅವರ ನೆನಪುಗಳು ಇಲ್ಲಿಗೆ ಮುಕ್ತಾಯವಾಯಿತು. ಮಾಲ್ಗುಡಿ ಡೇಸ್ ನಟಿ, ಪ್ರತಿಭಾ ಬಿಡದೀಕರ್ ಅವರ ಅನುಭವಗಳು ಮುಂದಿನ ಸಂಚಿಕೆಯಲ್ಲಿ.)

20 views