ಶಂಕರ್ನಾಗ್‌ ಅಂದ್ರೆ ಸಿಂಪ್ಲಿಸಿಟೀ ಅನ್ನೋಕೆ ಉದಾಹರಣೆ ಇದು !!!

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 68

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)
ನನಗೆ ಶಂಕರ್ ಬಗ್ಗೆ ದೊಡ್ಡ ಗೌರವ ಏನಂದ್ರೆ? ನನ್ನ ಕಲ್ಲು ಕೆತ್ತನೆ ಒಂದಿತ್ತು, ಈಗ ಅದು ಕಲಾಕ್ಷೇತ್ರದ ಮುಂದೆ ಇದೆ. ನನ್ನ ಸ್ಟುಡಿಯೋದಲ್ಲಿ ಇತ್ತು. ಅಲ್ಲೇ ಶೂಟ್ ಮಾಡ್ತಾ ಇದ್ವಿ. ಅಲ್ಲಿ ಶಂಕರ್ ಹೇಳಿದ್ದು “ಜಾನ್ ನಿನ್ನ ಸ್ಕಲ್ಪಚರ್ ದು ಶೂಟಿಂಗ್ ತಗೊಬಿಡೋಣ”ಅಂತ. ನಾನು ಕಲ್ಲು ನೋಡ್ದೆ, ಯಾವುದೋ ಒಂದು ಮಗು ಕಕ್ಕಸು ಮಾಡ್ಬಿಟ್ಟಿದೆ ಅದ್ರ ಮೇಲೆ. ನಾನು ನೋಡಿ ಹೇಳ್ದೆ “ನೋಡು ಶಂಕರ್, ನಮ್ಮ ಸ್ಕಲ್ಪಚರ್ ಗೆ, ಆರ್ಟ್ ಗೆ, ಯಾರು ಮರ್ಯಾದಿನೇ ಕೊಡೋದಿಲ್ಲ.” ಶಂಕರ್ ನೆಕ್ಸ್ಟ್ ಮೂವ್ಮೆಂಟ್ ನನಗೆ ಸರ್ಪ್ರಯಿಸ್ ಆಗ್ಹೋಯ್ತು. ಒಂದು ಎಲೆ ಮತ್ತೆ ಕಡ್ಡಿ ತಗೊಂಡು ಅದನ್ನ ಹಾಗೇ ಕ್ಲೀನ್ ಮಾಡಿ ಆ ಕಡೆ ಎಸ್ದು ಬಿಟ್ಟು, ಸ್ವಲ್ಪ ನೀರು ತರ್ಸಿ ಬಿಟ್ಟು, ಅದನ್ನ ತೊಳ್ದು ಬಿಟ್ಟು “ಈಗ ಶೂಟ್ ಮಾಡೋಣ್ವಾ?” ಅಂದ್ರು ಶಂಕರ್. ಕ್ಯಾನ್ ಯು ಇಮಾಜಿನ್? ಬೇರೆ ಯಾರಾದ್ರು ಆಗಿದ್ರೆ ಹುಡುಗ್ರಿಗೆ “ತೊಳಿರೋ, ಕ್ಲೀನ್ ಮಾಡ್ರೋ ಇದನ್ನ” ಅಂತಿದ್ರು. ಹೀ ಡಿಡಂಟ್ ಎಕ್ಸಪೆಕ್ಟ್ ದಟ್. ಹಿ ವಾಸ್ ಪರ್ಸನಲ್ಲಿ ಆಂಡ್ ಫಿಸಿಕಲ್ಲೀ ಪಾರ್ಟಿಸಿಪೇಟಿಂಗ್ ಇನ್ ಎವ್ರಿ ವರ್ಕ್.


ಶಂಕರ್ ಹಾಗು ನಾನು, ಸೇರಿ ಎಷ್ಟೋ ಟ್ರಾಲಿ ಕಂಬಿಗಳನ್ನ ಶಿಫ್ಟ್ ಮಾಡಿದೀವಿ, ಕ್ಯಾಮರಾಗಳನ್ನ ಮೇಲೆ ಹೊತ್ಕೊಂಡು ಹೋಗಿದೀವಿ. ಮಿಚ್ಚಲ್ ಕ್ಯಾಮರಾ 35 ಕೆ.ಜಿ. ಅದು ಅದನ್ನ ಬೆಟ್ಟದ ಮೇಲೆ ಹೊತ್ಕೊಂಡು ಹೋಗ್ತಿದ್ರು. ಎಲ್ಲಾರೂ “ಬೇಡ ಅಣ್ಣ, ನೀವು ತಗೊಂಡು ಹೋಗ್ಬೇಡಿ” ಅಂದ್ರೂ, ಅವ್ರು ಹೊತ್ಕೊಂಡು ಹೋಗ್ತಿದ್ರು.
ಮುಂದುವರೆಯುವುದು…

10 views