ಶಂಕರ್‌ನಾಗ್‌ ಈ ಕಾರಣಕ್ಕೆ ಒಮ್ಮೆ ನನಗೆ ಬೈದಿದ್ರು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 88

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ಯಾವತ್ತೂ ಕೂಡ ಸಮಯ ವೇಸ್ಟ್ ಮಾಡ್ತಿರ್ಲಿಲ್ಲ. ವೆರಿ ಇಂಟೆನ್ಸ್ ಆಂಡ್ ವೆರಿ ಫಾಸ್ಟ್ ಇನ್ ಹಿಸ್ ಲೈಫ್. ಅವ್ರಿಗೆ ಸುಮ್ಮನೆ ಇದ್ರೆ ಆಗ್ತಿರ್ಲಿಲ್ಲ, ಸೋಮಾರಿತನ ಅಂದ್ರೆ ಸಿಟ್ಟು ಬರ್ತಿತ್ತು ಶಂಕರ್ ಗೆ. ಸುಮ್ಮನೆ ಕೂತ್ಕೊಂಡಿದ್ರೆ ಕುಣ್ದಾಡ್ತಾರೆ ಅವ್ರು ಹೆಂಗೆ ಎಬ್ಸೋದು ಇವನ್ನ ಅಂತ.


ಪರಮ್: ಆತರ ಏನಾದ್ರೂ ನೀವು ಅವ್ರ ಆಕ್ರೋಷಕ್ಕೆ ತುತ್ತಾಗಿದ್ದು ಏನಾದ್ರೂ?


ಅವಿನಾಶ್: ಆಕ್ರೋಷಕ್ಕೆ ಯಾವತ್ತೂ ತುತ್ತಾಗ್ಲಿಲ್ಲ ನಾನು. ನಾಗಮಂಡಲ ನಾಟಕದ ರಿಹರ್ಸಲ್ ನಾವು ಏಳು ದಿನ ಮಾತ್ರ ಮಾಡ್ತಾ ಇದ್ವಿ, ಎಂಟನೇ ದಿನ ಶೋ ಮಾಡಿ ಬಿಟ್ವಿ. ಅನಂತ್ ನಾಗ್ ಅವ್ರು ಬಂದು ಕೇಳಿದ್ರು, ನಿನಗೇನು ತಲೆ ಕೆಟ್ಟಿದ್ಯಾ? ಏಳುದಿನದಲ್ಲಿ ಈ ನಾಟಕನ ಮಾಡಕ್ಕಾಗುತ್ತಾ? ಇಷ್ಟು ಜನನ ಕಟ್ಕೊಂಡು, ಅದೂ ಚಿತ್ರಕಲಾ ಪರಿಷತ್ ಅಲ್ಲಿ. ಇವ್ರು ಮಾಡ್ತೀನಿ ಅಂತ್ಹೇಳಿ ಮಾಡಿ ಮುಗ್ಸಿದ್ರಲ್ಲಾ. ಶೋ ಅದ್ಭುತವಾಗಿ ಬಂದ್ಬಿಡ್ತು. ರಿಯಲಿಸ್ಟಿಕ್ ಆಗಿ ಸೆಟ್ ಹಾಕ್ಕೊಂಡು, ಗೋಪಾಲ್ ವಾಜಪೇಯಿ ಅವ್ರು ಅಷ್ಟು ಹಾಡ್ಗಳನ್ನ ಹಾಡಿದ್ರು. ಸಿ ಅಶ್ವತ್ ಅವ್ರು ಒಂದೇ ದಿನದಲ್ಲಿ ಕಂಪೋಸ್ ಮಾಡಿದ್ರು. ಮೂರು ದಿನಕ್ಕೆ ಹಾಡು ರೆಡಿಯಾಯ್ತು, ನಮ್ಮ ಬಿ. ಸುರೇಶ್ ಅವ್ರು ಲೈಟಿಂಗ್ ಮಾಡಿದ್ರು, ಡಬಡಬಡಬ ಅಂತಾಗಿ ಎಂಟನೇ ದಿನಕ್ಕೆ ಶೋ ಕೊಟ್ಟೇ ಬಿಟ್ರು. ಒಂದು ದಿನ ರಾತ್ರಿ ಏಳು ಗಂಟೆಗೆ ಒಂದು ಶೋ ಆಯ್ತು. “ಏಯ್ ಇನ್ನೊಂದು ಶೋ ಮಾಡೋಣ ರವಿ, ಆರ್.ಕೆ. ಬರ್ತಿದ್ದಾರೆ ಕಣೋ, ಆ ಮೇಲೆ ಮನೆಗೆ ಹೋಗಿ ಪಾರ್ಟಿ ಮಾಡೋಣ”ಅಂದ್ರುಶಂಕರ್ ನಾಗ್. ನಾನು ಆರ್.ಕೆ ನಾರಾಯಣಾ? ಅಂತ ಕೇಳ್ದೆ, ಅವ್ರು “ರಾಮಕೃಷ್ಣ ಹೆಗಡೆ” ಅಂದ್ರು. ಅವಾಗ ನನಿಗೆ ರಾಜಕೀಯದಲ್ಲಿ ಅಷ್ಟೊಂದು ಇಂಟ್ರಸ್ಟ್ ಇರ್ಲಿಲ್ಲ, ಅವ್ರಾ? ಅಂತ ಕೇಳ್ದೆ. ಸಿಟ್ಟು ಬಂದ್ಬಿಟ್ಟಿತ್ತು ಶಂಕರ್ ಗೆ. “ಆರ್. ಕೆ ಅಂದ್ರೆ ತಮಾಷೆ ಮಾಡ್ತೀಯಾ ನೀನು?” ಅಂದ್ರು. “ಇನ್ನೊಂದು ಶೋ ಮಾಡ್ಬೇಕಾ?” ಅಂತ ಕೇಳ್ದೆ. ಅದಕ್ಕೂ ಸಿಟ್ಟು ಬಂದ್ಬಿಡ್ತು, “ಏನು ಸೋಮಾರಿ ನೀನು, ಏನಾಗಿದೆ ನಿನಗೆ, ನೀನೇನು ಆಕ್ಟಿಂಗ್ ಮಾಡ್ತೀಯ? ಸುಮ್ನೆ ಕೂತ್ಕೊಂಡಿರ್ತೀಯ ಕೋರಸ್‌ನಲ್ಲಿ”ಅಂತಬೈದಿದ್ರುನನಿಗೆ. ಹಿ ವಾಸ್ ಅ ವಂಡರ್ಫುಲ್ ಹ್ಯೂಮನ್ ಬೀಯಿಂಗ್.ಮುಂದುವರೆಯುವುದು…

14 views