ಶಂಕರ್ ನಾಗ್ ಓದುತ್ತಿದ್ದ ಪುಸ್ತಕಗಳು ಎಂಥವು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 86

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ಪರಮ್: ಲಿಟ್ರೇಚರ್ ವಿತ್ ಶಂಕರ್ ನಾಗ್ ಗೆ ಬರೋಣ ಸರ್, ಸೆಟ್ ನಲ್ಲಿ ಓದೋದು, ಈಗಿನ ಕಾಲದ ಆಕ್ಟರ್ಗಳು ಓದೊದು ತುಂಬಾ ಕಡಿಮೆ ಆಗಿದೆ. ನೀವು ಬಹಳ ಓದ್ತೀರಿ, ನಿಮಿಗೆ ಹೇಗೆ ಇನಫ್ಲೂಯನ್ಸ್?


ಅವಿನಾಶ್: ಈಗಿನ ಆಕ್ಟರ್ ಗಳು ಓದೋದೇ ಇಲ್ಲ. ನಾನು ಮೈಸೂರು ಯೂನಿವರ್ಸಿಟಿಯಿಂದ ಎಮ್.ಎ. ಸಾಹಿತ್ಯ ಮಾಡ್ಕೊಂಡು ಬಂದವ್ನು. ಸೋ ನಾನು ಯಾವಾಗ್ಲೂ ಓದ್ತನೇ ಇರುವೆ, ಅವಾಗ ಹೆಚ್ಚು ಮಾತಾಡ್ತಾನೇ ಇರ್ಲಿಲ್ಲ, ಅವಾಗ್ತಾನೇ ಕಾಲೇಜು ಪಾಸ್ ಮಾಡ್ಕೊಂಡು ಬಂದಿದ್ದೆ, ಟೀಚ್ ಮಾಡ್ತಾ ಇದ್ದೆ, ಸೋ ನನಿಗೆ ಸ್ಪೇರ್ ಟೈಮೆಲ್ಲ ಪುಸ್ತಕನೇ. ಆದ್ರೆ ಶಂಕರ್ ನಾಗ್ ಯಾವಾಗ್ಲೂ ಓದ್ತಾ ಇರುವವ್ರು. ಅಂದ್ರೆ ಸುಮ್ಮನೆ ಕೂತ್ಕೊಳೊದೇ ಇಲ್ಲ. ಶಂಕರ್ ಗೆ ಹತ್ತು ನಿಮಿಷ ಕೂತ್ಕೊಳಕ್ಕೇ ಆಗ್ತರ್ಲಿಲ್ಲ. ಈದರ್ ಹೀ ಈಸ್ ವೆರಿ ಆಕ್ಟಿವ್. ಓಡಾಡ್ತನೇ ಇರ್ತಿದ್ರು. ಆಮೇಲೆ ಯಾವಾಗ್ಲೂ ಕ್ರಾಸ್ ವರ್ಡ್ ಪಸಲ್, ಸ್ಕ್ರಿಪ್ಟಿಕ್ ಇಲ್ಲಾಂದ್ರೆ ಒಂದಿಷ್ಟು ನ್ಯೂಸ್ ಪೇಪರ್ ಇಟ್ಕೊಂಡಿರ್ತಿದ್ರು. ಶಾಟ್ ಮುಗಿದ ತಕ್ಷಣ ಬ್ರೇಕಲ್ಲಿ ಮೊದಲನೇ ಅಕ್ಷರದಿಂದ ಕೊನೇ ಅಕ್ಷರದವರೆಗೆ ಓದಿ ಮುಗಿಸ್ತಾ ಇದ್ರು ಶಂಕರ್.


ಅನಂತ್ ನಾಗ್ ಅವ್ರೂ ಅಷ್ಟೇ, ಶಂಕರ್ ನಾಗ್ ಅವ್ರೂ ಅಷ್ಟೇ, ನನಿಗೆ ತುಂಬಾ ಪುಸ್ತಕಗಳು ಕೊಟ್ಟಿರೋದು ಶಂಕರ್ ನಾಗ್ ಅವ್ರೇ. “ ರವಿ ಈ ಪುಸ್ತಕ ಓದು ತುಂಬಾ ಚೆನ್ನಾಗಿದೆ, ನನಿಗೆ ನಾಳೆ ಬೆಳಗ್ಗೆಯಷ್ಟೊತ್ತಿಗೆ ವಾಪಸ್ ಕೊಡ್ಬೇಕು” ಅಂತಿದ್ರು. ನಾನು ರಾತ್ರಿಯೆಲ್ಲ ಕುತ್ಕೊಂಡು ಓದ್ತಾ ಇದ್ದೆ. ತುಂಬಾ ಫಿಕ್ಷನ್ ಗಳು, ಒಂದು ಪುಸ್ತಕ, ಒಬ್ಬ ಅಮೇರಿಕಾದಲ್ಲಿ ಎಫ್.ಬಿ.ಐ. ಏಜೆಂಟ್, ಹೂ ಗೆಟ್ಸ್ ಇಂಟು ಅಮೇರಿಕನ್ ಮಾಫಿಯಾ, ಹೀ ಡಿಸ್ಟ್ರಾಯ್ ದ ಮಾಫಿಯಾ, ಕಡೇನಲ್ಲಿ ಹೀ ವಿಟ್ನೆಸ್ ದ ಮಾಫಿಯಾ. ಅದೊಂದು ಪುಸ್ತಕ ಬರ್ದಿದ್ರು ರಿಯಲ್ ಸ್ಟೋರಿ ಅವ್ನೇ ಬರ್ದಿದ್ದು. ಅದು ಸಿನಿಮಾ ಕೂಡ ಆಯ್ತು. ಎಷ್ಟೋ ಮುಂಚೆ ಆ ಪುಸ್ತಕ ನನಿಗೆ ಕೊಟ್ಬಿಟ್ಟು ಶಂಕರ್ ನಾಗ್ “ ಈ ಪುಸ್ತಕ ಓದೋ ಸಿಕ್ಕಾಪಟ್ಟೆ ಬ್ರಿಲಿಯಂಟ್ ಆಗಿದೆ, ಸಿನಿಮಾ ಮಾಡ್ಬಹುದು ಅಂತ ಹೇಳಿದ್ರು. ನಾನೂ ಓದ್ದೆ ತುಂಬಾ ಬ್ರಿಲಿಯಂಟ್ ಆಗಿತ್ತು. ಅದಾಗಿ ಎಷ್ಟೋ ವರ್ಷ ಆದ್ಮೇಲೆ ‘ಜಾನಿ ಡೆಪ್’ಆರೋಲ್ ಮಾಡ್ಕೊಂಡು ಸಿನಿಮಾ ಮಾಡ್ದ ಅದನ್ನ.


ಯಾವುದೋ ರೆಫರೆನ್ಸ್ ಯಾವುದೋ ಪಸ್ತಕ ಓದ್ತನೇ ಇರ್ತಿದ್ರು, ಅನಂತ್ ನಾಗ್ ಅವ್ರೂ ಶಂಕರ್ ನಾಗ್ ಇಬ್ರೂ ಕೂಡ ಅಷ್ಟೇ. ಯಾವಾಗ ನೋಡಿದ್ರೂ ಕೈಯಲ್ಲಿ ಒಂದು ಪುಸ್ತಕ ಇದ್ದೇ ಇರ್ತಿತ್ತು. ಹೀ ನೆವರ್ ವೇಸ್ಟಡ್ ಹಿಸ್ ಟೈಮ್. ಇವಾಗಿನ ತರ ಲ್ಯಾಪ್ ಟಾಪ್, ಮುಬೈಲ್ ಎಲ್ಲ ಇದ್ದಿದ್ರೆ ಇನ್ನೇನೇನು ಮಾಡ್ತಿದ್ರೊ ಏನೋ. ತುಂಬಾ ತಿಳ್ಕೊಂಡಿದ್ರು, ಹೀ ವಾಸ್ ಅನ್ ಲೈಕ್ ಮೆನಿ ಆಕ್ಟರ್ಸ್. ರಗ್ಯುಲರ್ ಆಕ್ಟರ್ ತರ ಇರ್ಲೇ ಇಲ್ಲ ಅವ್ರು. ರಾಜಕೀಯದ ಬಗ್ಗೆ ಸಿಕ್ಕಾ ಪಟ್ಟೆ ಮಾತಾಡ್ತಿದ್ರು. ತುಂಬಾ ವಿಚಾರ ಇತ್ತು. ಕೂತ್ಕೊಂಡು ಸಿನಿಮಾ ಬಗ್ಗೆ ಮಾತಾಡಿದ್ದು ಬಹಳ ಕಡಿಮೆ. ಬೇರೆ ಎಲ್ಲಾ ವಿಷಯಗಳನ್ನ ಡಿಸ್ಕಸ್ ಮಾಡ್ತಿದ್ವಿ.ಮುಂದುವರೆಯುವುದು…

13 views