ಶಂಕರ್‌ನಾಗ್‌ ಕನಸು ʼಬೆಂಗಳೂರು ಮೆಟ್ರೋ ರೈಲ್‌ ಕಂಪೆನಿʼ

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 112

(ಮಾಲ್ಗುಡಿ ಡೇಸ್‌ ಆಡಿಟರ್‌ ವೆಂಕಟೇಶ್ ನೆನಪುಗಳು)1990 ಹೀ ಪಾಸ್ಡ್ ಅವೇ. ಬಿಫೋರ್ ಎನಿಥಿಂಗ್ ಕುಡ್ ಹಾಪನ್. ಬಟ್ ಹೀ ವಾಂಟಡ್ ಟು ಸ್ಟಾರ್ಟ್ ಮೆಟ್ರೋ ಬೆಂಗಳೂರಲ್ಲಿ, ಇದು 35 ವರ್ಷದ ಹಿಂದೆ. ಸೋ ನಾನು ಹೇಳ್ದೆ ಏನು ಮಾತಾಡ್ತಾ ಇದ್ದೀರ, ಅದೇನು ಗೊತ್ತಾಂತ. “ಅದೇನು ಅಂದ್ರೆ ಎಲ್ಲಾ ಕಡೆ ಅಂಡರ್ ಗ್ರೌಂಡ್ ಮಾಡಕ್ಕಾಗಲ್ಲ, ಕೆಲವು ಕಡೆ ಮೇಲೆ ಇರ್ಬೇಕು”ಇವಾಗಇರೋದನ್ನೇಹೇಳ್ತಿದ್ರು. ಅದಕ್ಕೆ ಹೋಗಿ ಯಾವ ರೀತಿ ಮಾಡ್ಬಹುದು, ಯಾವ ರೀತಿ ಕೆನಲ್ ತಗಿಬಹುದು ಅಂತ, ಕೆಲವೊಂದು ಮಾಹಿತಿ ತಗೊಂಡು ಬಂದ್ರು. ಇನ್ಫರ್ಮೇಶನ್ ಕೊಟ್ಬಿಟ್ಟು ಹೀ ಸೆಡ್ ವರ್ಕೌಟ್.


ಸೋ ವರ್ಕೌಟ್ ಮಾಡಕ್ಕೆ ಇಟ್ ಶುಡ್ ಬಿ ಅ ಕಂಪೆನಿ, ಕಂಪೆನಿ ರಿಜಿಸ್ಟರ್ ಮಾಡಕ್ಕೆ ಹೋದ್ರೆ, ಫಸ್ಟ್ ಹೆಸರು ರಿಜಿಸ್ಟರ್ ಮಾಡ್ಬೇಕು.ನಾನು ರಿಜಿಸ್ಟಾರ್ ಆಫ್ ಕಂಪೆನೀಸಲ್ಲಿ ಹೋಗ್ಬಿಟ್ಟು, ‘ಬೆಂಗ್ಳೂರು ಮೆಟ್ರೋ ರೈಲ್ ಕಂಪೆನಿ’ಅಂದ್ರೆರಿಜಿಸ್ಟಾರ್ನಕ್ಬಿಟ್ರು. “ಡು ಯು ನೋ ವಾಟ್ ಯು ಆರ್ ಟಾಕಿಂಗ್, ಡು ಯು ನೋ ವಾಟ್ ಈಸ್ ಫೈನಾನ್ಶಿಯಲ್ ಔಟ್ಲೇ? ಅಂದ್ರು. ನಾನು ಹೇಳ್ದೆ, ಶಂಕರ್ ನಾಗ್ ಅವ್ರು ಕೇಳಿದಾರೆ, “ಯಾರೇ ಆಗಿರ್ಲಿ ಸಾಧ್ಯನೇ ಇಲ್ಲ’ಅಂದ್ಬಿಟ್ರು.


ಶಂಕರ್ ನಾಗ್ ಏನು ಮಾಡಿದ್ರು ಗೊತ್ತಾ? ಅವಾಗಿನ ಚೀಫ್ ಮಿನಿಸ್ಟರ್ ಹತ್ರ ಹೋಗಿ ಒಂದು ಲೆಟರ್ ತಗೊಂಡು ಬಂದ್ರು “ ಇನ್ಪ್ರಿನ್ಸಿಪಲ್ ಐ ಆಮ್ ಗಿವಿಂಗ್ ಯು ಪರ್ಮಿಷನ್ ಟು ಸ್ಟಾರ್ಟ್ ‘ಬೆಂಗಳೂರು ಮೆಟ್ರೋ ರೈಲ್’ಅಂತ. ಬಹಳ ದಿನ ಇತ್ತು ಆ ಲೆಟರ್. ಆ ಲೆಟರ್ ಬೇಸಿಸಲ್ಲಿ ನಮಿಗೆ ನೇಮ್ ಅಪ್ರೂವಲ್ ಕೊಟ್ರು. ಕಂಪೆನಿ ಆಮೇಲೆ ಮಾಡಿಲ್ಲ.ಮುಂದುವರೆಯುವುದು…

15 views