ಶಂಕರ್‌ನಾಗ್‌ ಕಂಟ್ರಿಕ್ಲಬ್ ಪಾರ್ಟಿಗೆ ಯಾರೆಲ್ಲ ಬರ್ತಿದ್ರು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 87

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ಸಾಹಿತ್ಯದ ಬಗ್ಗೆ ಆಗ್ಲೀ, ಯಾವುದೋ ಪುಸ್ತಕದ ಬಗ್ಗೆ ಆಗ್ಲೀ, ಜೊತೆಗೆ ಅವ್ರ ಫ್ರೆಂಡ್ಸ್ ಸರ್ಕಲ್ ಹಾಗೇ ಇತ್ತು, ಗಿರೀಶ್ ಕಾರ್ನಾಡ್ ಬರ್ತಿದ್ರು. ಮ್ಯೂಸಿಕ್ ವಿಷಯ ಬಂದಾಗ ಅವ್ರ ಮನೆಗೆ ಭೀಮ್‌ ಸೇನ್‌ ಜ್ಯೋಷಿಅವ್ರನ್ನಕರೆಸಿ ರಾತ್ರಿಯೆಲ್ಲ ಹಾಡ್ಸಿದ್ರು, ನಾನೇ ನೋಡಿದ್ದೀನಿ. ಭೀಮ್ ಸೇನ್ ಜ್ಯೋಷಿ ಅವ್ರಿಗೆ ಅನಂತ್ ನಾಗ್ ಹಾಗೂ ಶಂಕರ್ ನಾಗ್ ಅಂದ್ರೆ ಬಹಳ ಪ್ರೀತಿ. ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ನಲ್ಲಿಒಂದು ಸಾಂಗ್ ಹಾಡಿದ್ದಾರಲ್ಲ. ‘ಭಾಗ್ಯದ ಲಕ್ಷ್ಮಿ ಬಾರಮ್ಮ’ನಾವೆಲ್ಲಾಕೂತ್ಕೊಂಡಿದ್ವಿಭೀಮ್ ಸೇನ್ಜ್ಯೋಷಿ ಅವ್ರು ರಾತ್ರಿಯೆಲ್ಲಾ ಅಧ್ಭುತವಾಗಿ ಹಾಡಿದ್ರು. ನಮ್ಮ ಗ್ಯಾದರಿಂಗ್ ಇದ್ದಾಗ ಬಿ.ಜಯಶ್ರೀ ಬರ್ತಿದ್ರು, ಸಿ.ಅಶ್ವತ್ ಬರ್ತಿದ್ರು ನಾಟಕದವ್ರನ್ನ ಎಲ್ಲಾರನ್ನೂ ಕರ್ಸಿ ಕಂಟ್ರೀ ಕ್ಲಬ್ಬಲ್ಲಿ ಪಾರ್ಟಿಗಳು ಮಾಡ್ತಿದ್ರು. ಪಾರ್ಟಿಗಳಲ್ಲಿ ಈ ತರದೇ ಕ್ರೌಡ್ ಬರ್ತಿತ್ತು.ಮುಂದುವರೆಯುವುದು…

16 views