ಶಂಕರ್‌ನಾಗ್ ಕೈಲಿದ್ದ ಕಾಫಿ ಕಪ್ ನ ಆ ವ್ಯಕ್ತಿ ಕಿತ್ಕೊಂಡಿದ್ದು ಯಾಕೆ?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 67

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)ಮುಖ್ಯವಾಗಿ ಮಾಲ್ಗುಡಿ ಮೇಕಿಂಗಲ್ಲಿ ನಾನು ಕಲ್ತಿದ್ದು ಅಂದ್ರೆ ಒಬ್ಬ ಡೈರೆಕ್ಟರ್ ಆಗ್ಲಿ, ಆರ್ಟಿಸ್ಟ್ ಆಗ್ಲೀ, ಕ್ಯಾಮೆರಾಮ್ಯಾನ್ ಆಗ್ಲಿ ಎಲ್ರಿಗೂ ದೊಡ್ಡ ಈಗೊ ಇರುತ್ತೆ. ಮಾಲ್ಗುಡಿಯಲ್ಲಿ ವರ್ಕ್ ಮಾಡುವಾಗ ನಮ್ಮ ಈಗೋ ನ ಕೆಳಗಿಳಿಸ್ಕೊ ಬೇಕಾಗುತ್ತೆ. “ನಾನೇ ಗ್ರೇಟ್” ಅಂದ್ರೆ, “ನೀನೇ ಗ್ರೇಟ್ ಆಗಿರು” ಅಂತ ನಾವು ಅನ್ಕೊತೀವಿ. ಬಟ್ ಇದು ನಾನು ಶಂಕರ್ ನಾಗ್ ಹತ್ರ ಕಲ್ತಿದ್ದು. ನಾನೇ ಗ್ರೇಟ್ ಅಂತ ಆ ಮನುಷ್ಯಾ ಯಾವಾಗ್ಲೂ ಅನ್ಕೊಳ್ಳೇ ಇಲ್ಲ. ಬಟ್ ಹಿ ವಾಸ್ ವೆರಿ ಗ್ರೇಟ್. ಅಷ್ಟು ಪಾಪ್ಯುಲರ್ ಮನುಷ್ಯ, ನಾನು ಮತ್ತೆ ಶಂಕರ್, ಎಪಿಸೋಡ್ ಸೆಟ್ ಅಲ್ಲಿ, ಒಂದು ದಿವ್ಸ ಕಾಫಿ ಕುಡಿತಾ ಇದ್ವಿ, ಯಾರೋ ಒಬ್ಬ ಬಂದ್ಬಿಟ್ಟು ಶಂಕರ್ ಕೈಯಿಂದ ಕಾಫಿ ಕಿತ್ಕೊಂಡು ಕುಡ್ದು ಬಿಟ್ಟ. ಶಂಕರ್ “ಏನೋ ಮಗ ಕಪ್ ಕಿತ್ಕೊಬಿಟ್ಟೆ?” ಅಂದಾಗ ಅವ್ನು ಹೇಳಿದ್ದು ಪಾಪ, “ಅಣ್ಣಾ ನಿಮ್ಮ ಎಂಜಿಲು ಕುಡಿಬೇಕಿತ್ತಣ್ಣಾ ನಾನು” ಕ್ಯಾನ್ ಯು ಇಮಾಜಿನ್? ಹೌ ಟಚ್ಚಿಂಗ್ ಸ್ಟೇಟ್ಮೆಂಟ್ ಹಿ ಮೇಡ್? ಆ ಮೇಲೆ ಹಿ ವಾಸ್ ಪಿಸ್ಸಿಂಗ್ ಎನಿವೇರ್. ಆಗ ಅಣ್ಣ ಅಣ್ಣ ಅಣ್ಣ ಅಂತ ಕೂಗ್ತಿದ್ರು ಅವರ ಅಭಿಮಾನಿಗಳು ಆಗ ಶಂಕರ್ “ಉಚ್ಚೆ ಉಯ್ಯಕ್ಕೆ ಬಿಡ್ರಪ್ಪಾ”ಅಂತಿದ್ರು.
ಮುಂದುವರೆಯುವುದು…

13 views