ಶಂಕರ್‌ ನಾಗ್‌ ಗೆ ಕೋಪ ಬರ್ತಿತ್ತಾ ಬಂದ್ರೆ ಆ ಕೋಪ ಹ್ಯಾಗಿರ್ತಿತ್ತು ಗೊತ್ತಾ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 18

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)
ಪರಮ್: ಕೂಗಾಡೋದು, ಕಿರ್ಚಾಡೋದು ಮಾಡ್ತಿದ್ರಾ?


ರಮೇಶ್ ಭಟ್: ಕಿರ್ಚೊದೇನು ಇರ್ಲಿಲ್ಲ. ಅವರಿಗೆ ಕೋಪ ಬಂದಿದ್ದು ನೋಡ್ಲೇ ಇಲ್ಲ ನಾನು. ಒಂದೇ ಒಂದು ಸಲ ನೋಡಿದೀನಿ. ಆಕ್ಸಿಡೆಂಟ್ ಸಿನಿಮಾ ಮಾಡುವಾಗ ನಾನು ಬೆಂಗ್ಳೂರಲ್ಲಿರ್ಲಿಲ್ಲ. ಒಂದು ಎಂಟು ವರ್ಷ ಕನಕಪುರದಲ್ಲಿದ್ದೆ. ಸರಿ ಹಿಂದಿನ ದಿವ್ಸ ನಾವು ನಾಳೆ ಏನೇನು ಶೂಟ್ ಮಾಡ್ತೀವೋ ಬೆಳಗ್ಗೆ ಯಾವ ಸೀನ್, ಮಧ್ಯಾನ ಯಾವ ಸೀನ್, ಬ್ರೇಕ್ ಗಿಂತ ಮುಂಚೆ ಯಾವ ಸೀನ್ ಮುಗಿಸ್ಬೇಕು ಅಂತೆಲ್ಲಾ, ನಮ್ದು ಏನೇನೋ ಪ್ರೋಗ್ರಾಮ್ ಇರೋದು. ಬೆಳಗ್ಗೆ ಒಂದು ಸೀನ್, ಎರಡು ಸೀನ್ ಆದ್ಮೇಲೆ, ಒಂದು ಐದು ನಿಮಿಷದ ಮೀಟಿಂಗ್ ಇರುತ್ತೆ. “ಏನಾಯ್ತು, ಸರಿಯಾಗಾಗ್ತಿದ್ಯೋ ಇಲ್ವೋ, ಪ್ರಿಪರೇಷನ್ ಸರಿಯಾಗಿದ್ಯೋ ಇಲ್ವೋ, ಶಿಫ್ಟ್ ಮಾಡ್ಬೊದಾ?” ಎಲ್ಲಾ ಕೇಳ್ಕೊಂಡು ಮುಂದಕ್ಕೆ ಹೋಗೋದು. ಶೂಟಿಂಗ್ ಮುಗಿದ ಮೇಲೆ “ಮಾರನೇ ದಿವ್ಸ ಎಲ್ಲಿ ಶೂಟ್ ಮಾಡೊದು?, ಟ್ರಾಲಿ ಎಲ್ಲಿ ಹಾಕ್ಬೇಕು?” ಎಲ್ಲ ಹೇಳಿ ಹೋಗ್ತಾರೆ. ಐ ಶುಡ್ ಟೇಕ್ ಕೇರ್ ಆಫ್ ಎವ್ರಿಥಿಂಗ್.


ಆಕ್ಸಿಡೆಂಟ್ ಸಿನಿಮಾದ ಶೂಟಿಂಗ್ ಆಗುವಾಗ ಧರ್ಮಾಧಿಕಾರಿಗಳು ಏರ್ಪೋರ್ಟಿಂದ ಬರುವ ಶಾಟ್ ಇದೆ. ಅವ್ರಿಗೆ ವೆಲ್ಕಮಿಂಗ್ ಬ್ಯಾನರ್ ಎಲ್ಲಾ ಹಾಕ್ಬೇಕಾಗಿತ್ತು. “ಆಯ್ತು ಸರಿ” ಅಂತಂದೆ. ಯಾವ ರೋಡಲ್ಲಿ ಶೂಟಿಂಗ್ ಮಾಡ್ಬೇಕು, ನೋಟ್ ಮಾಡ್ಕೊಂಡೆ, ಬ್ಯಾನರ್ಸ್ ಎಷ್ಟು ಬೇಕೂಂತ ಅವ್ರಿಗೆ ಹೇಳಿ, ಕಟ್ಟಕ್ಕೆ ಹೇಳ್ಬಿಟ್ಟು ಬಂದೆ. ಕಾರ್ ಬರುವ ಕಡೆಗೆ ತಾನೆ ಬ್ಯಾನರ್ ಕಟ್ಟಬೇಕು? ಇವ್ರು ಏನ್ಮಾಡಿದಾರೆ, ಎಲ್ಲಾ ಉಲ್ಟ ಕಟ್ಬಿಟ್ಟಿದಾರೆ. ನಾನು ಕನಕಪುರದಿಂದ ಬರ್ಬೇಕು, ಅವತ್ತು ನನಗೆ ಫಸ್ಟ್ ಬಸ್ ಮಿಸ್ ಆಗ್ಬಿಡ್ತು. ಒನ್ ಹವರ್ ಲೇಟ್ ಆಯ್ತು. ನಾನು ಎಂಟು ಕಾಲಿಗೆ ಬಂದು ನೋಡ್ತೀನಿ ಎಮ್. ಜಿ. ರೋಡಲ್ಲಿ ಎಲ್ಲಾ ಉಲ್ಟ ಕಟ್ಟಿದಾರೆ. ಅವಾಗ ಏಣಿ ಹುಡುಕಿ, ಆದಷ್ಟು ಚೇಂಜ್ ಮಾಡಿಸ್ದೆ. ಆದ್ರೆ ಎಷ್ಟು ಬ್ಯಾನರ್ ಕಾಣ್ಬೇಕಿತ್ತು ಅಷ್ಟು ಕಾಣ್ಲಿಲ್ಲ. ಅವತ್ತು ನನಗೆ ಬೈದ್ರು. ಬೈದಿದ್ದು ಅಂದ್ರೆ ಅಂತದ್ದೇನಿಲ್ಲ. “ಕೆಲ್ಸ ಮಾಡಕ್ಕಾಗ್ದೇ ಇದ್ರೆ ಒಪ್ಕೊಳ್ಬಾರ್ದು, ಐ ಟ್ರಸ್ಟಡ್ ಯು, ಸೀ ವಾಟ್ ಹ್ಯಾಪಂಡ್? ನಂಬಿಕೆ ಮುಖ್ಯ ಆಗುತ್ತೆ ಯಾವಾಗ್ಲೂನೂ” ಅಂತ ಒಂದು ಮಾತಂದ್ರು ಅಷ್ಟೇ. ಅದು ಕೂಡ ನನ್ನ ಕೈನಲ್ಲಿ ರೆಸಿಸ್ಟ್ ಮಾಡಕ್ಕಾಗ್ಲಿಲ್ಲ.ಮುಂದುವರೆಯುವುದು…

8 views