ಶಂಕರ್ನಾಗ್‌ ಜೊತೆ ಕೆಲಸ ಮಾಡಲು ಇರ್ಬೇಕಾಗಿದ್ದ ಅರ್ಹತೆ ಏನು?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 44

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಪರಮ್: ಅಲ್ಲಿ ಪ್ರಸನ್ಸ್ ಆಫ್ ಮೈಂಡ್ ಇರ್ಬೇಕು…?


ರಮೇಶ್ ಭಟ್: ನಮ್ಮ ಟೀಮಲ್ಲಿ ಎಲ್ರೂ ಕೆಲ್ಸ ಮಾಡುವವ್ರು ಇದ್ರು. ಕಾಶಿ ಇರ್ಬೋದು, ಜಗ್ಗ ಇರ್ಬೋದು, ವೆಂಕಿ ಅಂತ ಒಬ್ರು ಇದ್ರು. ಹೀ ಯೂಸ್ ಟು ಟೇಕ್ ಕೇರ್ ಆಫ್ ಅಕೌಂಟ್ಸ್, ಬಟ್ ಎಲ್ಲ ಕೆಲ್ಸನೂ ಮಾಡ್ತಿದ್ರು. ಅಂದ್ರೆ ಯಾರಿಗೂ ಸುಮ್ನೆ ಇರೋದಕ್ಕೆ ಮನಸ್ಸೇ ಬರ್ತಿರ್ಲಿಲ್ಲ.


ಪರಮ್: ಯಾರಿಗೂ ನನ್ದು ಇದೇ ಡಿಪಾರ್ಟ್ಮೆಂಟ್ ಅಂತೇನೂ ಇಲ್ಲ?


ರಮೇಶ್ ಭಟ್: ಯಾರಿಗೂ ಇಷ್ಟೇ ಕೆಲಸ ಅಂತೇನೂ ಇರ್ಲಿಲ್ಲ. ಸೋಮು ಅಂತ ಒಬ್ರು ಇದ್ರು, ಅವ್ರು ಈಗ ಜೀ ಟಿವಿ ಯಲ್ಲೆಲ್ಲೋ ಇದ್ದಾರೆ. ಅವ್ರೂ ಹಾಗೆ. ಎಲ್ರುನೂ ಒಂದು ಐಡಿಯಾ ಬಂದ್ರೆ ಅದನ್ನ ಪುಷ್ಟೀಕರ್ಸೊದು ಹೇಗೆಂತನೇ ಯೋಚ್ನೆ ಮಾಡ್ತಿದ್ರು. “ಅದು ಯಾವನ್ದೋ ಕೆಲ್ಸ ರೆಡಿನಾ” ಅದ್ಯಾವುದೂ ಇಲ್ವೇ ಇಲ್ಲ. ಯಾಕಂದ್ರೆ ಶಂಕರ್ ನಾಗ್ ಪ್ರಭಾವ ಅಷ್ಟು ಇತ್ತು.ಮುಂದುವರೆಯುವುದು…

6 views