ಶಂಕರ್ನಾಗ್‌ ಜ್ಯೂನಿಯರ್‌ ಆರ್ಟಿಸ್ಟ್‌ ಆದ್ರೆ!!!

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 116

(ಮಾಲ್ಗುಡಿ ಡೇಸ್‌ ಕ್ಯಾಮರಾ ಅಸಿಸ್ಟೆಂಟ್‌ ನಾಗರಾಜ ಆದವಾನಿ ಅವರ ನೆನಪುಗಳು


ಪರಮ್: ಈ ಶಂಕರ್ ನಾಗ್ ಜೊತೆ ಕೆಲ್ಸ ಮಾಡೋದು ಕಷ್ಟ ಅಂತ ಹೇಳ್ತಾರೆ, ನಿಜನಾ?


ನಾಗರಾಜ್: ತುಂಬಾ ಈಸಿ. ನಾನು ಮಾಲ್ಗುಡಿ ಡೇಸಿಂದ ಕೆಲ್ಸ ಮಾಡಿರೋದ್ರಿಂದ ನನಿಗೆ ತುಂಬಾ ಅನುಭವ ಆಗಿದೆ. ನಾನು ಮಾಡಿದ ಕೆಲಸಗಳಲ್ಲಿ ತುಂಬಾ ಸಿನಿಮಾಗಳು ಆವರಿಸಿಕೊಂಡಿದೆ. ಅವ್ರು ಯಾರ ಮೇಲೂ ರೇಗ್ತಾ ಇರ್ಲಿಲ್ಲ, ತುಂಬಾ ಕೂಲ್ ಆಗೇ ಇರ್ತಿದ್ರು. ಆದ್ರೆ ತುಂಬಾ ಫಾಸ್ಟ್. ಸ್ಪಿರಿಟ್ ಅಂದ್ರೆ ಏನು ಬೇಕಾದ್ರೂ ಮಾಡಕ್ಕೆ ರೆಡಿ ಅವ್ರು. ರಾತ್ರಿ ಮೂರು ಗಂಟೆಯವರೆಗೆ ಶೂಟ್ ಮಾಡಿದ್ರೂ, ಬೆಳಗ್ಗೆ ಎದ್ದು , ವಾಕಿಂಗ್ ಮಾಡಿ ರೆಡಿಯಾಗ್ತಾ ಇದ್ರು. ಜೊತೆಗೆ ಹುಡುಗ್ರನ್ನ ಕೂಡ ಅವ್ರೇ ಹೋಗಿ ಎಬ್ಸಿ ರೆಡಿ ಮಾಡಿಸ್ತಾ ಇದ್ರು. ಅಕಸ್ಮಾತ್ ನಾಲ್ಕು ಗಂಟೆಗೆ ಶೂಟಿಂಗ್ ಮುಗಿತು ಅಂದ್ರೆ, ಎಲ್ಲರೂ ಸೇರಿ ಕ್ರಿಕೆಟ್ ಆಡ್ತಿದ್ರು. ಈವನ್ ಶಂಕರ್ ನಾಗ್ ಕೂಡ. ಆತರ ಎಂಜಾಯ್ ಕೂಡ ಮಾಡ್ತಾ ಇದ್ರು. ಅವ್ರು ಸ್ಟಾರ್ ಅಂತನೇ ಯಾರಿಗೂ ಗೊತ್ತಾಗ್ತನೇ ಇರ್ತಿರ್ಲಿಲ್ಲ. ಸೆಟ್ ಅಲ್ಲಿ 60-70 ಜನ ಜ್ಯೂನಿಯರ್ ಆರ್ಟಿಸ್ಟ್ ಗಳು ಇರ್ತಿದ್ರು ಸಡನ್ನಾಗಿ ಯಾವುದೋ ಶಾಟ್ ಗೆ ಜ್ಯೂನಿಯರ್ಸ್ ಪಕ್ಕದಲ್ಲಿ ಇರ್ಲಿಲ್ಲ ಅಂದ್ರೆ, ಒಂದು ಗೋಣಿ ಚೀಲ ಹಾಕೊಂಡು ಶಂಕರ್ ನಾಗ್ ಅವ್ರೇ ಹೋಗ್ತಿದ್ರು. ಅವ್ರು ಎಷ್ಟೋ ಸಲ ಹಾಗೆ ಮಾಡಿದಾರೆ. ಆಮೇಲೆ ಸೋಮು, ಸಾವಂತ್, ರಮೇಶ್ ಭಟ್ ಅವ್ರೆಲ್ಲಾ ಒಂದೇ ಸಲ ಮೂರು ನಾಲ್ಕು ಸಲ, ಬಟ್ಟೆ ಚೇಂಜ್ ಮಾಡ್ಕೊಂಡು ಅಥವಾ ಗೋಣಿ ಚೀಲ ಹಾಕೊಂಡು ಬಂದು ಬಿಡ್ತಿದ್ರು. ಈತರ ವರ್ಕೋಹಾಲಿಕ್ ಆಗಿ ಎಲ್ರೂ ಕೆಲ್ಸ ಮಾಡಿದಾರೆ.


ಪರಮ್: ನನ್ದು ಅಷ್ಟೇ ಕೆಲ್ಸ, ನಿನ್ನ ಕೆಲ್ಸ ನಾನು ಯಾಕೆ ಮಾಡ್ಬೇಕು? ಆತರ ಏನೂ ಇರ್ತಿರ್ಲಿಲ್ವಾ? ಯೂನಿಟ್ ಹುಡುಗ್ರೂ ಎಲ್ಲಾ ಮಾಡ್ತಿದ್ರಾ?


ನಾಗರಾಜ್: ಶಂಕರ್ ನಾಗ್ ಮಾಡ್ತಿದ್ರು ಇನ್ನು ಯೂನಿಟ್ ಬಾಯ್ಸ್ ಮಾಡದೇ ಇರ್ತಾರಾ? ಲೈಟ್ ಬಾಯ್ಸ್ ಎಲ್ಲರೂ ಮಾಡ್ತಿದ್ರು. ಟ್ರಾಲಿ ತಳ್ಳಕ್ಕೆ ಅಂತನೇ ಒಬ್ಬ ಟ್ರಾಲಿ ನಾಗರಾಜ್ ಅಂತ ಒಬ್ಬ ಇದ್ದ. ಅವ್ನು ಟ್ರಾಲಿಯಲ್ಲಿ ಎಕ್ಸಪರ್ಟ್, ಎಷ್ಟಕ್ಕೆ ನಿಲ್ಸಬೇಕು ಅಷ್ಟಕ್ಕೆ ಕರಕ್ಟಾಗಿ ನಿಲ್ಲಿಸ್ತಾ ಇದ್ದ. ಇಡೀ ಸಿನಮಾದಲ್ಲಿ ಟ್ರಾಲಿ ಮೂವ್ಮೆಂಟೇ ಜಾಸ್ತಿ ಇರೋದು. ಆ ತರ ತುಂಬಾ ಅನುಕೂಲ ಆಯ್ತು. ಈಗಿನ ಎಕ್ಯುಪ್ಮೆಂಟೆಲ್ಲಾ ಶಂಕರ್ ಗೆ ಸಿಕ್ಕಿದ್ದಿದ್ರೆ ಇನ್ನಷ್ಟು ಅಧ್ಬುತವಾಗಿ ಮಾಡ್ತಿದ್ರೋ ಏನೋ? ಅವ್ರನ್ನ ಕಳ್ಕೊಂಡಿರೋದು, ನಮ್ಮ ಕನ್ನಡ ಇಂಡಸ್ಟ್ರೀಗೆ ತುಂಬಾ ದೊಡ್ಡ ಲಾಸ್ ಅಂತನೇ ಹೇಳ್ಬಹುದು.ಮುಂದುವರೆಯುವುದು…

32 views