ಶಂಕರ್‌ ನಾಗ್‌ ಟೀಂ ಕ್ರಿಯೇಟ್‌ ಮಾಡ್ತಿದ್ದಿದ್ದು ಹೀಗೆ...

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 69

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)ಒಂದ್ಸಲಿ ಒಬ್ಬ ಮೀನು ಮಾರ್ಕೊಂಡು ಬಂದ, ಅವನ ಬುಟ್ಟಿಯಲ್ಲಿದ್ದ ಎಲ್ಲಾ ಮೀನುಗಳನ್ನ ತಗೊಂಡ್ರು. ಹುಡುಗ್ರಿಗೆಲ್ಲಾ ಫಿಷ್ ಫ್ರೈ ಅವತ್ತು. ಹೀಗೆಲ್ಲಾ ಮಾಡೊದ್ರಿಂದ ಒಂದು ಬ್ಯೂಟಿಫುಲ್ ಟೀಮ್ ಕ್ರಿಯೇಟ್ ಆಗಿ ಪಾರ್ಟಿಸಿಪೇಷನ್ ಆಗುತ್ತೆ. ನಾನು ಇದನ್ನೇ ಹೇಳಿದ್ದು, “ಡೆಮೋಕ್ರೆಟಿಕ್ ವ್ಯಾಲ್ಯೂನ ಹೇಗೆ ನಾವು ಮಾಡ್ಬಹುದು.” ಪ್ರತಿಯೊಬ್ಬ, ಒಬ್ಬ ಲೈಟ್ ಬಾಯ್ ಇಂದ ಹಿಡ್ದು ಎಲ್ಲರೂ ನಮ್ಮ ಟೀಮ್ನಲ್ಲಿ ಇಂಪಾರ್ಟೆಂಟ್ ಅಂತ. ಅದನ್ನ ನಾವು ಕಲೀಬೇಕೂಂತ ಅನ್ನಿಸುತ್ತೆ. ಸಿನಿಮಾ ಈಸ್ ನಾಟ್ ಅಬೌಟ್ ದ ಟೆಕ್ನಿಕಲ್ ಆಸ್ಪಕ್ಟ್ ಆಫ್ ಇಟ್. ಇಟ್ ಈಸ್ ಪ್ಯಾಶನೈಟ್ ಆಂಡ್ ಇಮೋಷನಲ್ ಆರ್ಟಿಸ್ಟಿಕ್ ಎಕ್ಸ್ಪೀರಿಯನ್ಸ್ ಅಲ್ವಾ? ಅದನ್ನ ನಾವು ಅರ್ಥ ಮಾಡ್ಕೊಬೇಕು ಅನ್ಸುತ್ತೆ. ಯಾಕೆ ಈಗ ಆ ತರ ಸಿನಿಮಾಗಳು ಬರ್ತಾ ಇಲ್ಲ? ಇವಾಗ ನೋಡಿ ಟೆಕ್ನಿಕಲ್ಲಿ ತುಂಬಾ ಮುಂದೆ ಹೋಗಿದೆ ಸಿನಿಮಾಗಳು. ಆದ್ರೆ ಥಾಟ್ ಪ್ರವರ್ಕಿಂಗ್ ಸಿನಿಮಾಗಳು ಇನ್ನೂ ಬರ್ಬೇಕಾಗಿದೆ. ಟೆಕ್ನಾಲಜಿ ಹೈ ಇದೆ, ಕಂಟೆಂಟ್ ಇನ್ನೂ ಬರ್ಬೇಕಾಗಿದೆ, ಬರುತ್ತೆ ಆಟಿಟ್ಯೂಡ್ ಎಲ್ಲಾ ಚೇಂಜ್ ಮಾಡಿ ಮಾಡಿದ್ರೆ?ಮುಂದುವರೆಯುವುದು…

16 views