ಶಂಕರ್ನಾಗ್‌ ತಮ್ಮ ಸುತ್ತ ಇರುವ ಜನಗಳನ್ನ ಹೇಗೆ ಬಳಸಿಕೊಳ್ಳುತ್ತಿದ್ರು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 45

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಪರಮ್: ಶಂಕರ್ ಅವ್ರ ಟೀಮ್ ಹ್ಯಾಂಡ್ಲಿಂಗ್ ಹೇಗೆ?


ರಮೇಶ್ ಭಟ್: ಏನೋ ಒಂದು ಮಾತಲ್ಲಿ ಹೇಳಕ್ಕಾಗಲ್ಲ ಸರ್. ನಾವು ದಿನ ಎಲ್ಲ ಮಾತಾಡಿದ್ರೂ ಮುಗಿಯಲ್ಲ. ಸಾಫ್ಟ್ ಮನುಷ್ಯ, ಸಿಂಪಲ್ ಮನುಷ್ಯ, ಡೌನ್ ಟು ಅರ್ಥ್ ಮನುಷ್ಯ. ಆಂಡ್ ಗ್ರೇಟ್ ಹ್ಯೂಮನ್ ಬೀಯಿಂಗ್. ನಿಮ್ಹತ್ರ ಒಂದು ಕ್ವಾಲಿಟಿ ಚೆನ್ನಾಗಿದೆಂತಂದ್ರೆ ಅದನ್ನ ಇಂಪ್ರೂ ಮಾಡಕ್ಕೆ ಏನು ಮಾಡ್ಬೇಕೋ ಅವ್ರೇ ಹೇಳ್ತಾರೆ. ಅವ್ನಿಗೆ ಏನೂ ಲಾಭ ಬೇಕಾಗಿಲ್ಲ ಅದ್ರಲ್ಲಿ. “ಯು ಡು ದಿಸ್, ಯು ಆರ್ ವೆರಿ ಗುಡ್ ಇನ್ ಸೌಂಡ್. ಬಾ ಇಲ್ಲಿ ನೀನೇ ಸೌಂಡ್ ಇಂಜಿನಿಯರ್”. ಅವರು ಸಂಕೇತ್ ಸ್ಟುಡಿಯೋ ಮಾಡಿದ್ರಲ್ಲ, ಅಣ್ಣಾದೊರೈ ಅಂತ ನಮ್ಮ ಗುಂಪಲ್ಲೊಬ್ರು ಇದ್ರು. ಶೂಟಿಂಗ್ ಮಾಡುವಾಗ ಟೇಪ್ರೆಕಾರ್ಡರಲ್ಲಿ ಅವ್ರೂ ಸೌಂಡ್ ರೆಕಾರ್ಡ್ ಮಾಡ್ಕೊಳ್ಳುವವ್ರು. ನಾಗರ ಇದ್ರೂ ಕೂಡ, ಅವನ್ನ ನೋಟ್ಸ್ ಮಾಡಿಡುವವ್ನು, ಇವ್ರು ಇಂತಿಂತದ್ದು ಮಾತಾಡಿದ್ದಾರೆ ಅಂತ. ಆಮೇಲೆ ಔಟ್ ಡೋರ್ ಶೂಟಿಂಗ್ ಹೋದ್ರೆ, ಆ ಅಟ್ಮಾಸ್ಫಿಯರಲ್ಲಿ ನಾಯ್ಸ್ ಏನೇನು ಸಿಗುತ್ತೆ, ಬರ್ಡ್ ಸಿಗುತ್ತೆ, ನಾಯಿ ಸಿಗುತ್ತೆ, ಇನ್ನೇನೋ ವಿಂಡ್ ಸೌಂಡ್ ಬರುತ್ತೆ. ಎಲ್ಲಾನೂ ರೆಕಾರ್ಡ್ ಮಾಡ್ಕೊಂಡಿರೋನು ಅವ್ನು.


ಆಮೇಲೆ “ಎಡಿಟಿಂಗ್ ರೂಮಲ್ಲಿ ಇದಕ್ಕೆ ಪ್ಯಾರ್ಲರ್ ಆಗಿ ಸೌಂಡ್ ಹಾಕಮ್ಮ” ಅಂತ ಎಡಿಟರ್ ಗೆ ಹೇಳಿ ಹಾಕ್ಸಿಬಿಟ್ಟು, ನಾವು ಡಬ್ಬಿಂಗ್ ಹೋದ್ರೆ ಸೌಂಡು ಕೊಟ್ಬಿಡೋನು ಅವ್ನು. ಅವ್ನನ್ನ ಸಂಕೇತ್ ಸ್ಟುಡಿಯೋದಲ್ಲಿ ಇಂಜಿನಿಯರ್ ಮಾಡಿದ್ರು. ಅಣ್ಣಾದೊರೈ ಕ್ವಾಲಿಫೈಡ್ ಇಂಜಿನಿಯರ್ ಅಲ್ಲ. ಅವ್ನಿಗೆ ಪರ್ಸ್ಫೆಕ್ಟಿವ್ ಅಂತಾರಲ್ಲ, ಒಳಗಡೆಯಿಂದ ಕೂಗಿದ್ರೆ ಹೆಂಗಿರ್ಬೇಕು ಸೌಂಡ್? ಅದನ್ನ ಹಂಗೇ ರೆಕಾರ್ಡ್ ಮಾಡುವವ್ನು ಅವ್ನು. ಅವ್ನಿಗೊಂದು ಟೇಪ್ ರೆಕಾರ್ಡರ್ ಕೊಡ್ಬೇಕಷ್ಟೆ. ಅದರಲ್ಲೇ ಅವ್ನು ಅಷ್ಟು ಮಾಡುವವ್ನು. ಇನ್ನು ಸ್ಟುಡಿಯೋದಲ್ಲಿ ಆಟ ಆಡ್ಕೊಂಡು ಮಾಡ್ತಿದ್ದ. ಅಂದ್ರೆ ಶಂಕರ್ ಯಾರಲ್ಲಿ ಯಾವ ಟ್ಯಾಲೆಂಟ್ ಇದೆ ಅಂತ ಗುರುತಿಸಿ, ಅದನ್ನ ಇಂಪ್ರೂವ್ ಮಾಡಿಸ್ತಿದ್ರು.


ಸೋ ಆತರ ವ್ಯಕ್ತಿ ಜೊತೆಯಲ್ಲಿ ಕೆಲಸ ಮಾಡಿದ್ವಿ. ಇವತ್ತು 34 ವರ್ಷ ಆಯ್ತೇನೋ, ಮಾಲ್ಗುಡಿ ಮಾಡಿ. ಇವತ್ತೂ ಜನ ನೋಡ್ತಿದ್ದಾರೆ. ಖುಷಿ ಪಡ್ತಿದ್ದಾರೆ. ಮತ್ತೆ ಅದನ್ನ ಹಾಕ್ಬೇಕು ಅನ್ಸಿದೆಯಲ್ಲಾ? ಅವತ್ತು ಇಷ್ಟು ಚಾನೆಲ್ಸ್ ಇರ್ಲಿಲ್ಲ. ದೂರದರ್ಶನ ಒಂದೇ. ಅಂತದ್ರಲ್ಲಿ ನ್ಯಾಶನಲ್ ಲೆವೆಲಲ್ಲಿ ಮೆಚ್ಚುಗೆ ಗಳ್ಸಿದೆ, ಅಂದ್ರೆ ಗ್ರೇಟ್ ಥಿಂಗ್ ಅದು. ನಾವೂ, ಆ ಪ್ರಾಜೆಕ್ಟಲ್ಲಿ ಇದ್ವಲ್ಲಾ ಅದೇ ಹ್ಯಾಪಿ.ಮುಂದುವರೆಯುವುದು…

12 views