ಶಂಕರ್ನಾಗ್ ನಟನಾಗಿ ಮತ್ತು ನಿರ್ದೇಶಕನಾಗಿ ಹೇಗಿರ್ತಿದ್ರು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 83

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ಶಂಕರ್ ನಾಗ್ ಹೆಂಗಂದ್ರೆ ತುಂಬಾ ಮಿಂಗಲ್ ಆಗವ್ರು, ಬೇಕಾದಷ್ಟು ಸಲ ಅವ್ರೇ ಕಾಫಿ ಮಾಡಿಟ್ಕೊಂಡು ಎಲ್ಲರಿಗೂ ಕೊಡ್ತಿದ್ರು. ಸಜೆಷನ್ ಕೊಡ್ತಿದ್ರೋ ಏನೊ ಆದ್ರೆ ಯಾವತ್ತೂ ಓವರ್ ಟೇಕ್ ಮಾಡ್ದವ್ರಲ್ಲ. ಅಫ್ಕೋರ್ಸ್ ವೆರಿ ಸೆನ್ಸಿಬಲ್, ಹೀಗೆ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಹೇಳ್ತಿದ್ರು. ಆದ್ರೆ ಯಾವತ್ತೂ ತೀರ ಡಾಮಿನೇಟ್ ಮಾಡ್ಕೊಂಡು ಇರ್ತಿರ್ಲಿಲ್ಲ. ಬಿಕಾಸ್ ನಾನು ಡೈರೆಕ್ಟರ್ ಆಂತ ಯಾವತ್ತೂ ತೂರಿಸ್ಕೊತಾ ಇರ್ಲಿಲ್ಲ, ಹೀ ವಾಸ್ ರಿಮೇನ್ ಅನ್ ಆಕ್ಟರ್ ಅಷ್ಟೇ ಯಾವಾಗ್ಲೂ. ಆದ್ರೆ ಶೂಟಿಂಗ್ ಸೆಟ್ ಅಲ್ಲಿ ಬಹಳ ಕಮ್ಫರ್ಟೆಬಲ್ ಆಗಿರ್ತಿದ್ರು. ಅವಾಗ ಕ್ಯಾರಾವನ್ ಏನೂ ಇರ್ತಿರ್ಲಿಲ್ಲ. ಬರ್ತಿದ್ದ ಹಾಗೆ, ಎಲ್ಲಿ ಬೇಕೋ ಅಲ್ಲೇ ಬಟ್ಟೆ ಚೇಂಜ್ ಮಾಡ್ತಿದ್ರು. ರಸ್ತೆಯಲ್ಲಾದ್ರೂ ಓಕೆ. ಒಂದು ಪಂಚೆ ಬಿಟ್ಕೊಂಡ್ರೆ ಸಾಕು ಅವ್ರಿಗೆ. ಬಟ್ ಆನ್ ಟೈಮ್ ಶೂಟಿಂಗ್ ಯಾವಾಗ್ಲೂ. ಆಂಡ್ ಯಾವ ಈಗೋ ನೂ ಇರ್ತಿರ್ಲಿಲ್ಲ.ಮುಂದುವರೆಯುವುದು…

12 views