ಶಂಕರ್‌ನಾಗ್‌ನ ನೋಡಿದ್ದು ನಾಟಕದ ಟ್ರೂಪ್ನಲ್ಲಿ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 75

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ಶಂಕರ್ ನಾಗ್ ಅವ್ರನ್ನ ನಾನು ‘ಒಂದಾನೊಂದು ಕಾಲದಲ್ಲಿ’ ಸಿನಿಮಾನೋಡಿದ್ಮೇಲೆಬಹಳ ಇಷ್ಟ ಪಟ್ಟಿದ್ದೆ. ಅನಂತ್ ನಾಗ್ ಬಗ್ಗೆ ನಮಿಗೆಲ್ಲಾ ಬಹಳ ಅಭಿಮಾನ, ಶಂಕರ್ ನಾಗ್ ಅವ್ರು ಸಡನ್ಲೀ ಬೆಕೇಮ್ ಬಿಗ್ ಸ್ಟಾರ್ ಅವಾಗ. ಶಂಕರ್ ನಾಗ್ ಅವ್ರು ‘ಸಂಕೇತ್’ ಅಂತನಾಟಕದ ಟ್ರೂಪ್ ಶುರು ಮಾಡಿದ್ರು. ನಾನು ಮತ್ತೆ ದೇವರಾಜ್ ನಮ್ಮ ಬಿ.ಜಯಶ್ರೀ ಅವ್ರ ಸ್ಪಂದನ ಗ್ರೂಪಲ್ಲಿ ಇದ್ವಿ. ಶಂಕರ್ ನಾಗ್ ಅವ್ರು ‘ಸ್ಪಂದನʼದಲ್ಲಿ ‘ಬ್ಯಾರಿಸ್ಟರ್ʼ ಅಂತಒಂದು ನಾಟಕ ಮಾಡೋದಕ್ಕೆ ಬಂದ್ರು. ಮರಾಠೀ ನಾಟಕನ ಕನ್ನಡಕ್ಕೆ ಅನುವಾದ ಮಾಡಿ ಮಾಡ್ಬೇಕಾಗಿತ್ತು. ಸ್ಪಂದನ ದಿಂದ ಪ್ರೊಡ್ಯೂಸ್ ಮಾಡಿದ್ರು. ಅದ್ರಲ್ಲಿ ಅನಂತ್ ನಾಗ್ ಅವ್ರು, ರಮೇಶ್ ಭಟ್ ಅವ್ರು, ಆರುಂಧತಿ ಅವ್ರು ಎಲ್ಲಾ ಇದ್ರು. ಅವಾಗ ನಾನು ಸ್ಪಂದನ ದಲ್ಲಿದ್ದೆ ಶಂಕರ್ ನಾಗ್ ಅವ್ರು ಡೈರೆಕ್ಟ್ ಮಾಡ್ತಿದ್ರು ಅನಂತ್ ನಾಗ್ ಮೇನ್ ರೋಲ್ ಮಾಡಿದ್ದಾಗ ಅಲ್ಲಿ ಬಂದಿದ್ರು ಅವ್ರು.ಮುಂದುವರೆಯುವುದು…

11 views