ಶಂಕರ್‌ನಾಗ್‌ ಮೇಲೆ ಎಣ್ಣೆ ಕ್ಯಾನ್‌ ಬಿದ್ದ ಪ್ರಸಂಗ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 98

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ಬದರಿನಾಥ್: ಬೇರೆಯವ್ರು ಕೂಡ ಹೇಳಿರ್ತಾರೆ, ಶಂಕರ್ ನಾಳೆ ಆನೆ ಬೇಕು ಅಂದ್ರೆ ಬೇಕೇ ಬೇಕು. ಎಲ್ಲಿಂದ ತರೋದು? ಅಂದ್ರೆ, ಅದೆಲ್ಲಾ ಗೊತ್ತಿಲ್ಲ ಬೇಕು ಅಂದ್ರೆ ಬೇಕು. ಫಾರೆಸ್ಟ್ ಡಿಪಾರ್ಟ್ಮೆಂಟ್ನಿಂದ ಪರ್ಮಿಶನ್ ತಗೊಂಡು, ಏನಾದ್ರೂ ಮಾಡಿ ತರ್ಲೇ ಬೇಕು. ರಮೇಶ್ ಭಟ್ ಗೆ ಕತ್ತೆ ಬೇಕು ಅಂದ್ರು ಬೇಕು ಅಂದ್ರೆ, ಬೇಕೇಬೇಕು, ಎಲ್ಲಿ ಸಿಗುತ್ತೆ? ಅದೇನು ಹೇಳುವಹಾಗಿಲ್ಲ. ನನ್ನ ಮೇಯ್ನ್ ವರ್ಕಿಂಗ್ ಹೇಗಿತ್ತು ಅಂದ್ರೆ, ಅಪಾರ್ಟ್ ಫ್ರಮ್ ಪ್ರೊಡಕ್ಷನ್, ನಾವು ನೆಗೆಟಿವ್ ಅಲ್ಲಿ ಶೂಟ್ ಮಾಡಿದ್ವಿ. ಮಾನೀಟರ್ ಇರ್ಲಿಲ್ಲ, ಇವತ್ತು ಏನು ಶೂಟ್ ಮಾಡಿರೋದು ಗೊತ್ತಿಲ್ಗ, ಸೋ ನಾನು ವಾರಕ್ಕೆ ಎರಡು ಸತಿ, ಜಿಪ್ಸಿ ಕಾರಲ್ಲಿ ಏನು ಶೂಟ್ ಮಾಡಿರ್ತೀವಿ ಅದನ್ನ ತಗೊಂಡು, ಒಬ್ಬನೇ ಡ್ರೈವ್ ಮಾಡ್ಕೊಂಡು ಬೆಂಗಳೂರಿಗೆ ಬಂದು ಅದನ್ನ ಪೀಣ್ಯದಲ್ಲಿ ಪ್ರಸಾದ್ ಲ್ಯಾಬ್ ಗೆ ಕೊಟ್ಟು, ಮನೆಗೆ ಹೋಗಿ ನಿದ್ರೆ ಮಾಡಿ, ಮಾರನೇ ದಿನ ಮತ್ತೆ ಲ್ಯಾಬ್ ರಿಪೋರ್ಟ್, ಪ್ಲಸ್ ರೇಷನ್ ಎಲ್ಲಾ ತಗೊಂಡು ರಿಟರ್ನ್ ಹೋಗ್ತಿದ್ದೆ.


ಸೋ ನಮ್ಮಲ್ಲಿ ಗಾಂಧಿ ನಗರದಲ್ಲಿ ಒಂದು ಹಳೇ ಅಂಗಡಿ ಇತ್ತು. ಅಲ್ಲಿಂದನೇ ನಾವು ರೇಷನ್ ಎಲ್ಲಾ ತಗೊಳ್ತಾ ಇದ್ವಿ. ಒಂದು ಇನ್ಸಿಡೆಂಟ್ ಏನಾಗಿತ್ತು ಅಂದ್ರೆ, ಶಂಕರ್ ಅವ್ರ ಕ್ಲೋಸ್ ಫ್ರೆಂಡ್ ಒಬ್ರು ಇದ್ರು, ಅವ್ರು ಮಾಲ್ಗುಡಿಯಲ್ಲಿ ಇನವಾಲ್ವ್ ಆಗಿಲ್ಲ. ಬಟ್ ದೇ ಆರ್ ವೆರಿ ಕ್ಲೋಸ್ ಫ್ರೆಂಡ್ಸ್. ಅವ್ರು ಒಂದ್ಸಲ ಹೇಳಿದ್ರು, “ಶಂಕರ್ ಇವತ್ತು ಡಬ್ಬಿಂಗ್ ಮುಗಿಸ್ಕೊಂಡು ಬರ್ತಾನೆ, ನೀನು ಹೋಗ್ತಿದ್ಯಾ? ನಾನು ಬರ್ತೀನಿ” ಅಂತ. ನನ್ನ ಜಿಪ್ಸಿ ಇತ್ತು ಹೋಗೋಣ ಅಂದೆ. ನಮ್ಮ ರಂಗಪ್ಪ ಹೇಳಿದ್ದ ರಿಫಾಯಿಂಡ್ ಆಯಿಲ್ ಮುಗಿದಿದೆ, ಬರ್ತಾ ತಗೊಂಡು ಬನ್ನಿ ಅಂತ. ನಾಲ್ಕು ಡಬ್ಬ ಹಿಂದೆ ಹಾಕ್ಕೊಂಡಿದ್ದೆ. ಸಂಕೇತ್ ಗೆ ಹೋಗಿ ಶಂಕರ್ ದು ಡಬ್ಬಿಂಗ್ ಮುಗಿಸ್ಕೊಂಡು ಹೊರಟ್ವಿ.


ಶಂಕರ್ ಹೇಳಿದ್ರು ಹಿಂದ್ಗಡೆ ಜಾಗ ಇದ್ಯಲ್ಲ ನಾನು ಮಲ್ಕೊಂಡ್ಬಿಡ್ತೀನಿ ಅಂತ ಹೇಳಿ ಮಲ್ಕೊಂಡ್ಬಿಟ್ರು. ನಾನು ಡ್ರೈವಿಂಗ್ ಮಾಡ್ತಿದ್ದೆ, ಜಿಪ್ಸಿ ಸ್ವಲ್ಪ ಕುಕ್ಕುತ್ತೆ, ಆಗ ಒಂದು ರಿಫಾಯಿಂಡ್‌ ಆಯಿಲ್‌ ಡಬ್ಬ ಓಪನ್ ಆಗಿತ್ತು, ಗಾಡಿಯಲ್ಲಿ ಮತ್ತೆ ಶಂಕರ್ ಅವ್ರ ಮೈಯೆಲ್ಲಾ ಫುಲ್ ಎಣ್ನೆ ಆಗಿತ್ತು. ಬೇರೆ ಯಾರಾದ್ರೂ ಆಗಿದ್ರೆ ಎಣ್ಣೆ ನೋಡಿ ಶಾಕ್ ಆಗ್ತಿದ್ರು. ಶಂಕರ್ ನೋಡಿ “ಬಹಳ ದಿನ ಆಗಿತ್ತು ಎಣ್ಣೆ ಸ್ನಾನ ಮಾಡಿ, ಒಳ್ಳೆದಾಯ್ತು” ಅಂದ್ರು. ಶಂಕರ್ ದು ಆಟಿಟ್ಯೂಡ್ ಹಾಗೆ. ಹೀ ಈಸ್ ಸಚ್ ಅ ವಂಡರ್ಫುಲ್ ಮ್ಯಾನ್, ರಿಯಲ್ಲಿ ಐ ಮಿಸ್ ಹಿಮ್ ಸೋ ಮಚ್.


ಹೀ ಈಸ್ ಅ ಇಂಟರ್ ನ್ಯಾಶನಲ್ ಲಾಸ್. ಅವ್ರ ಥಿಂಕಿಂಗ್ 25 ಯಿಯರ್ಸ್ ಎಹೆಡ್ ಇತ್ತು. ಯಾರು ಸಾರ್ ನಂದಿ ಹಿಲ್ಸಲ್ಲಿ ಟ್ಯೂರಿಸ್ಟ್ ಗೆ ರೋಡ್ ಶೋ ಮಾಡ್ತಾರೆ? ಬೆಂಗಳೂರಲ್ಲಿ ಮೆಟ್ರೋ, ಲೋ ಕಾಸ್ಟ್ ಹೌಸಿಂಗ್ ಹೀಗೆ.ಮುಂದುವರೆಯುವುದು…

17 views