ಶಂಕರ್ನಾಗ್‌ ಶೂಟಿಂಗ್‌ ಸ್ಪಾಟ್ ಬರ್ತಿದ್ದ ಹಾಗೆ‌ ರೋಡಲ್ಲೇ ಬಟ್ಟೆಬಿಚ್ತಾ ಇದ್ರು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 27

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಇವಾಗ ಅಶೋಕ ಹೋಟ್ಲಲ್ಲಿ ಯಾವುದೋ ಸಿನಿಮಾ ಶೂಟಿಂಗ್ ನಡಿತಾ ಇತ್ತು, ಹೀರೋಯಿನ್ ಬರ್ತಾಳೆ. ಮೇಕಪ್ ರೂಮ್ ಹಾಕ್ತಾರೆ 12000 ಏನೋ... ಒಂದು ರೂಮ್ ಹಾಕ್ತಾರೆ. “ಶಂಕರ್ ನಾಗ್ ಬಂದಿಲ್ಲ, ಬಂದಿಲ್ಲ.” ಅಂತ ಇರ್ತಾರೆ. ಅಷ್ಟರಲ್ಲೇ ಶಂಕರ್ ನಾಗ್ ಬರ್ತಾರೆ. ಬಂದು, ವ್ಯಾನ್ ಇಳಿತನೇ ಟೀ ಶರ್ಟ್ ಬಿಸಾಕ್ಬಿಟ್ಟು, ಎಲ್ಲಿ ಕ್ಯಾಮರಾ ರಡಿ ಮಾಡಿ ಇರ್ತಾರಲ್ಲ? ಅಲ್ಲಿಗೇ ಹೋಗ್ಬಿಡ್ತಾರೆ. ಟೀ ಶರ್ಟನ್ನ ಆ ಮೇಲೆ ಯಾರಾದ್ರೂ ಎತ್ಕೊಂಡು, ಅವರು ಹೋಗುವಾಗ ಕೊಡ್ಬೇಕು.


“ಏ ಬಟ್ಟೆ, ಬಟ್ಟೆ, ಕಾಸ್ಟ್ಯೂಮ್ ಅಂತಾರೆ ಅಲ್ಲಿಂದನೇ, ಕಾಸ್ಟ್ಯೂಮ್ ಅವ್ನು, ಧಿಡೀರ್ ಅಂತ ಬಟ್ಟೆ ತಗೊಂಡು ಓಡ್ಹೋಗ್ತಾನೆ. ಮೇಕಪ್ ಅವ್ನು ಓಡಿ ಬರ್ತಾನೆ. “ಮೇಕಪ್ ಏನು ಬೇಡ. ಪೌಡರ್, ಪೌಡರ್ ಕೊಡು” ಅಂತ ಪೌಡರ್ ಹಾಕ್ಕೊಂಡು, “ಶಾಟ್ ಏನು? ಅಂತಾನೆ. ಈ ಸೀನ್ ತಗಿ ಅಂತಾನೆ. “ಇಲ್ಲ ಸಾರ್ ಆ ಯಮ್ಮ ಬರ್ಬೇಕು” ಅಂತಾರೆ, “ನನ್ದು ಕ್ಲೋಸ್ ತಗಿ ಅಷ್ಟೊತ್ತಿಗೆ” ಅಂತಾನೆ. ಕ್ಲೋಸ್ ತಗಿಸ್ಕೋ ಬಿಟ್ತಾನೆ. ಅವ್ರಿಗೆ ಕೆಲ್ಸ ಕಮ್ಮಿ, ಅವ್ಳು ಬರುವಷ್ಟು ಹೊತ್ತು ಕಾದು ಶುರು ಮಾಡೊದು ಯಾಕೆ? “ಅವಳ ಡೈಲಾಗ್ ಆದ ತಕ್ಷಣ, ನನ್ನ ರಿಯಾಕ್ಷನ್ ಬೇಕಲ್ವ, ತಗೊಳಿ ರಿಯಾಕ್ಷನ್, ಡೈಲಾಗ್ ಇದ್ಯಲ್ಲ ಅದೆಲ್ಲ ನಾಲ್ಕು ಕ್ಲೋಸ್ ತಗೊಬಿಡೋಣ. ಅವ್ಳು ಬಂದ್ಮೇಲೆ ಒಂದು ಲಾಂಗ್, ಒಂದು ಮಿಡ್, ಮತ್ತೆ ಅವ್ಳದ್ದು ನಾಲ್ಕು ಕ್ಲೋಸ್. ಮುಗ್ದೋಯಿತಲ್ಲ ಸೀನ್. ರಡಿ, ರಡಿ” ಇದು ಅವ್ರ ನೇಚರ್, ಹೀಗೆ ಕೆಲ್ಸ ಮಾಡೋರು.ಮುಂದುವರೆಯುವುದು…

10 views