ಶಂಕರ್‌ನಾಗ್ ಸ್ಪೀಡ್‌ ಅಂದ್ರೆ ಜೀವ ಬಾಯಿಗೆ ಬರ್ತಿತ್ತು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 80

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ಅವಾಗ ಶಂಕರ್ ನಾಗ್ ಶೂಟಿಂಗ್ ಮುಗ್ದು ಗ್ಯಾಪ್ ಸಿಕ್ತು ಅಂದ್ರೆ ನಾವು ನಾಟಕ ಶೋ ಮಾಡಕ್ಕೆ ಓಡಾಡ್ತಾ ಇದ್ವಿ. ಅಲ್ಲಿ ಯಾವ ಡಿಸ್ಕ್ರಿಮಿನೇಶನ್ ಇರ್ಲಿಲ್ಲ, ಎಲ್ಲರೂ ನೈಟ್ ಕೆಲ್ಸ ಮಾಡೋರು, ಆರ್ಟಿಸ್ಟ್, ಕ್ಯಾಸ್ಟಿಂಗ್ ಎಲ್ರೂ ಒಂದೇ ವ್ಯಾನಲ್ಲೇ ಹೋಗ್ಬಿಡ್ತಾ ಇದ್ವಿ. ಶಂಕರ್ ನಾಗ್ ಅವ್ರದ್ದೇ ಒಂದು ಟೆಂಪೋ ಇತ್ತು ಅದ್ರಲ್ಲೇ ಹೋಗ್ತಿದ್ವಿ, ಹೋ.. ಅಂತ ಓಡಿಸ್ತಾ ಇದ್ರು. ಭಯ ಆಗ್ತಿತ್ತು, ಎಲ್ಲಾ ಬಾಯಿಗೆ ಬಂದ ಹಾಗೆ ಆಗ್ತಿತ್ತು, ಅಷ್ಟು ಫಾಸ್ಟ್ ಓಡಿಸ್ತಿದ್ರು. ಆ ಮೇಲೆ ಅವ್ರು ಆಕ್ಸಿಡೆಂಟ್ ಸಿನಿಮಾ ಮಾಡ್ದಾಗ ನಾನು ಕೆಲ್ಸ ಮಾಡ್ಬೇಕು ಅಂತ ತುಂಬಾ ಬಲವಂತ ಮಾಡಿದ್ರು. “ನಿನ್ಗೆ ಸೂಟ್ ಆಗುತ್ತೆ ಕಣೋ, ನೀನು ಮಾಡ್ಬೇಕು ಆ ಪಾತ್ರ” ಅಂತಹೇಳ್ತಿದ್ರು. ನನಿಗೆ ಸಿನಿಮಾದಲ್ಲಿ ಆ ತರ ಆಸಕ್ತಿ ಇಲ್ಲ, ನಾನು ಕಾಲೇಜಲ್ಲಿ ಪಾಠ ಮಾಡ್ತಿದ್ದೆ, ಬಟ್ ನನಿಗೆ ಸಿನಿಮಾದಲ್ಲಿ ಆಸಕ್ತಿ ಇರ್ಲಿಲ್ಲ. ಎಷ್ಟು ಫೋರ್ಸ್ ಮಾಡಿದ್ರೂ ನಾನು ಮಾಡ್ಲಿಲ್ಲ ಆ ಪಾತ್ರನ. ಆ ಮೇಲೆ ಆ ರೋಲ್ ನ ಅಶೊಕ್ ಮಂದಣ್ಣ ಮಾಡಿದ್ರು.ಮುಂದುವರೆಯುವುದು…

22 views