ಶಂಕರ್‌ನಾಗ್‌ ಸಾವಿನ ಮುಂಚೆ ಮಾಡಿದ್ದು ಸಾಯುವ ದೃಶ್ಯವನ್ನೇ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 90

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ನಾವು ‘ಸುಂದರ ಕಾಂಡ’ ಅಂತಒಂದು ಸಿನಿಮಾ ಮಾಡ್ತಿದ್ವಿ ಅದ್ರಲ್ಲಿ ಶಂಕರ್ ನಾಗ್ ಮತ್ತೆ ದೇವರಾಜ್ ಅವ್ರು ಹೀರೋಗಳು. ಶಂಕರ್ ನಾಗ್ ದು ಡೆತ್ ಸೀನ್ ಅವತ್ತೇ, ಕೆ.ವಿ. ರಾಜು ಅವ್ರ ನಿರ್ದೇಶನದಲ್ಲಿ ಶೂಟ್ ಆಯ್ತು. ಅದನ್ನ ಮುಗಿಸಿಕೊಂಡು ಅವತ್ತೇ ರಾತ್ರಿ, ಜೋಕುಮಾರಸ್ವಾಮಿ ಗಿರೀಶ್ ಕಾರ್ನಾಡ್ ಅವ್ರ ನಾಟಕದ ಮುಹೂರ್ಥಕ್ಕೆ ಅವ್ರು ಹೊರಡಬೇಕಾಗಿತ್ತು. ಐ ಥಿಂಕ್ ಶಂಕರ್ ನಾಗ್ ರಾತ್ರಿ ಹನ್ನೆರಡು ಗಂಟೆಗೆ ಏನೋ ಹೊರ್ಟಿದಾರೆ, ಐ ಥಿಂಕ್ ರಮೇಶ್ ಭಟ್ ಮತ್ತೆ ಕಾಶಿಯವರಿದ್ರು ಆ ಶೂಟಿಂಗ್ ಜಾಗದಲ್ಲಿ. ಅವ್ರಿಗೆ ಸುದ್ದಿ ಬಂದಿದೆ ಕ್ಯಾಮರಾ ಬರ್ಲಿಲ್ಲ ಇವತ್ತು ಬರೋದು ಬೇಡ, ಇನ್ನೊಂದು ದಿವ್ಸ ಬರ್ಬೋದು ಅಂತ. ಆ ಸುದ್ದಿ ತಲುಪಿಸಕ್ಕೆ ಆಗ್ಲಿಲ್ಲ ಅವ್ರಿಗೆ ಯಾಕಂದ್ರೆ ಫೋನ್ ಸಿಕ್ಲಿಲ್ಲ. ಸೋ ಅವತ್ತು ರಾತ್ರಿ ಶಂಕರ್ ನಾಗ್ ಹೊರಟ್ರು,


ಬೆಳಗ್ಗೆ ಐದು ಗಂಟೆ ಅಷ್ಟೊತ್ತಿಗೆ ನನಿಗೆ ಫೋನ್ ಬಂತು, ಶಂಕರ್ ನಾಗ್ ಹೋಗ್ಬಿಟ್ರು ಅಂತ. ಅಫ್ಕೋರ್ಸ್ ಅನ್ಬಿಲೀವೆಬಲ್ ನಮಿಗೆ. ಯಾಕಂದ್ರೆ ಪ್ರೀವಿಯಸ್ ಡೇ ಶೂಟಿಂಗ್ ಮಾಡ್ಕೊಂಡು ಜೊತೆಯಲ್ಲೇ ಇದ್ವಿ ನಾವು, ದೇವರಾಜ್. ಎಲ್ಲಾರ್ಗೂ ಇಟ್ ವಾಸ್ ವೆರಿ ಶಾಕಿಂಗ್. ಬಾಡಿ ಬಂದಾಗ ನನಿಗೆ ನೋಡ್ಲಿಕ್ಕೂ ಆಗ್ಲಿಲ್ಲ. ಐ ಕುಡ್ ನಾಟ್ ಸೀನ್ ಹಿಮ್. ಕಂಟ್ರೀ ಕ್ಲಬ್ ನಲ್ಲೇ ಇಟ್ಟಿದ್ರು ತುಂಬ ಹೊತ್ತು ಆಮೇಲೆ ವಿಲ್ಸನ್ ಗಾರ್ಡನ್ ಗೆ ತಂದಿದ್ರು. ಅವಾಗ್ಲೇ ಗೊತ್ತಾಗಿದ್ದು ಜನಗಳಿಗೆ, ಶಂಕರ್ ನಾಗ್ ಗೆ ಎಂಥಾ ಫಾಲೋಯಿಂಗ್ ಇದೆ ಅಂತ. ಹೆಂಗೆ ಬಂದ್ರು ಜನ ಅಂದ್ರೆ ನಂಬಕ್ಕೇ ಆಗ್ಲಿಲ್ಲ ಆ ತರ ಬಂದ್ಬಿಟ್ರು. ಎವ್ರಿಬಡಿ ವಾಸ್ ಶಾಕ್ಡ್. ಶಂಕರ್ ನಾಗ್ ಅವ್ರು ಅದ್ಯಾವುದನ್ನೂ ತೋರ್ಸಿಕೊಂಡಿರ್ಲಿಲ್ಲ, ಬಟ್ ಎಷ್ಟು ಜನ ಗೊತ್ತಾ, ಅನ್ಬಿಲೀವೆಬಲ್ ಪಾಪ್ಯುಲಾರಿಟಿ ಹೀ ಹ್ಯಾಡ್. ನನ್ ಆಫ್ ಅಸ್ ರಿಯಲ್ಲೀ ನಿವ್, ಅಂದ್ರೆ ಶಂಕರ್ ನಾಗ್ ಪಾಪ್ಯುಲರ್ ಅಂತ ಗೊತ್ತು. ಆದ್ರೆ ಆ ರೇಂಜಿಗೆ ಕ್ರಿಮೇಶನ್ ಗ್ರೌಂಡ್ ವರೆಗೂ ಪ್ರೊಸೇಶನ್ ಹೋಗಿದ್ರು ಜನ. ಯಾವಾಗ್ಲೂ ಡ್ರೈವಿಂಗಲ್ಲಿ ಬಹಳ ರಾಶ್, ಲೈಟ್ ಗೀಟ್ ಏನೂ ನೋಡ್ತಿರ್ಲಿಲ್ಲ, ಲೆಫ್ಟಿಂದ ಎಲ್ಲಾ ಹೋಗ್ಬಿಡ್ತಿದ್ರು, ಒಂದೊಂದ್ಸಲ ಎದೆ ಬಾಯಿಗೆ ಬಂದ್ಬಿಡೋದು.(ಶಂಕರ್‌ ನಾಗ್ಕುರಿತಂತೆ “ಶಂಕರ್ ನಾಗ್ ಒಡನಾಡಿ ಅವಿನಾಶ್ ಅವರ ನೆನಪುಗಳು ಇಲ್ಲಿಗೆ ಮುಕ್ತಾಯವಾಯಿತು. ಮಾಲ್ಗುಡಿ ಡೇಸ್‌ನ ನಿರ್ಮಾಪಕರಾದ ಬದ್ರಿನಾಥ ಅವರ ನೆನಪುಗಳು ಮುಂದಿನ ಸಂಚಿಕೆಯಲ್ಲಿ.)

17 views