ಶಂಕರ್‌ನಾಗ್‌ ಹೋಗಿ ನ್ಯೂಸ್‌ ಪೇಪರ್‌ ತಂದ್ಬಿಟ್ಟಿದ್ರು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 84

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)
ನಾವು ಸಿ.ಬಿ.ಐ. ಶಂಕರ್ ಶೂಟ್ ಮಾಡ್ಬೇಕಾದ್ರೆ, ಕಾರಲ್ಲಿ ಹೋಗ್ತಿದ್ವಿ. ನನ್ನ ಒರಿಜಿನಲ್ ಹೆಸರು ರವಿ ಅಂತ. ಆಗ “ಏಯ್ ರವಿ ಪೇಪರ್ ಬೇಕೇನೋ ನಿನ್ಗೆ”ಅಂದ್ರು. “ಹೂನನಿಗೆ ಬೇಕು”ಅಂತ ಹೇಳಿ “ತರ್ತೀನಿ”ಅನ್ನೋದಕ್ಕೆಮುಂಚೆ ಅವ್ರು ಕಾರಿಂದ ಇಳ್ದು, ಸಂತೆ ಮಧ್ಯದಲ್ಲಿ ಹೋಗಿ ಪೇಪರ್ ತಂದ್ಬಿಟ್ರು. ಅದ್ಹೆಂಗೆ ಹೋದ್ರೋ ಗೊತ್ತಾಗ್ಲಿಲ್ಲ ನನಿಗೆ. ಗೊತ್ತಾಗುವಷ್ಟೊತ್ತಿಗೆ ಕಾರು ಹತ್ಕೊಂಡು ಹೋಗ್ತಿದ್ವಿ.


ಸಾಂಗ್ಲೀಯಾನ ಮತ್ತೆ ಸಿ.ಬಿ.ಐ. ಶಂಕರ್ ಎಕ್ಸಟೀರಿಯರ್ ಶೂಟಿಂಗ್ ಮಾಡುವಾಗ ಅವ್ರೇ ಹ್ಯಾಂಡಲ್. ಮಾಡ್ತಿದ್ರು. ನಾನು ಶಶಿಕುಮಾರ್ ಮೆಜೆಸ್ಟಿಕ್ ಅಲ್ಲಿ ಓಡುವ ಸೀನ್ ಶೂಟ್ ಮಾಡ್ಬೀಕಾಗಿತ್ತು, ಅದ್ಹೇಗೆ ತೆಗಿತಿದ್ರು? ಜನಗಳಿಗೆ ಯಾರಿಗೂ ಗೊತ್ತಾಗ್ತಾ ಇರ್ಲಿಲ್ಲ. ಆಂಡ್ ಎಷ್ಟು ಬೇಗ ಮಾಡ್ತಿದ್ರು ಅಂದ್ರೆ, ನಿಧಾನವಾಗಿ ಸೆಟ್ ಅಪ್ ಮಾಡಿ, ಊರಿಲ್ಲೆಲ್ಲಾ ಸುದ್ದಿ ಮಾಡಿ ಏನೂ ಮಾಡ್ತಿರ್ಲಿಲ್ಲ. ಹತ್ತು ನಿಮಿಷದಲ್ಲಿ ಮುಗ್ಸಿ ಹೊರ್ಟೋಗ್ತಿದ್ರು. ಹೀ ವಾಸ್ ವೆರಿ ಫಾಸ್ಟ್ ಇನ್ ಶೂಟಿಂಗ್. ಅಯ್ಯಪ್ಪಾ! ಅಮೇಜಿಂಗ್ ನಾನು ನೋಡ್ಲೇ ಇಲ್ಲ.ಮುಂದುವರೆಯುವುದು…

11 views