ಶಂಕರ್‌ ನ ನಾನು ಕಡೇ ಸಲ ಕಂಡದ್ದು!!!

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 116

(ಮಾಲ್ಗುಡಿ ಡೇಸ್‌ ಆಡಿಟರ್‌ ವೆಂಕಟೇಶ್ ನೆನಪುಗಳು)ಶಂಕರ್ ನಾಗ್ ಅವ್ರನ್ನ ಕಡೇ ಸಲ ನಾನು ದರ್ಶನ ಮಾಡಿದ್ದು, ಸಪ್ಟೆಂಬರ್ 29 ಕ್ಕೆ, ಸಪ್ಟೆಂಬರ್ 30 ಕ್ಕೆ ಅವ್ರು ತೀರೋದ್ರು. ಕಂಟ್ರೀ ಕ್ಲಬ್ ನಲ್ಲಿ ಒಂದು ಪಾರ್ಟಿ ಇಟ್ಟಿದ್ರು. ಅಲ್ಲಿ ಕಾರ್ಪೊರೇಟಿವ್ ಕ್ಲೈಂಟ್ಸ್ ನೆಲ್ಲಾ ಕರೆದಿದ್ರು, ಮೆಂಬರ್ಷೀಪ್ ಡ್ರೈವ್ ಅಂತ. ಸೋ ಅದಕ್ಕೋಸ್ಕರ ಯಾರಾದ್ರು ಏನಾದ್ರೂ ಕೇಳಿದ್ರೆ, ಮಾತಾಡಕ್ಕೆ ಇಲ್ಲಿ ಬೇಕು ಅಂತ ಹೇಳಿ ನಾವೂ ಅಲ್ಲಿ ಇದ್ವಿ. ಅವ್ರ ಜೊತೆ ಊಟ ಮಾಡ್ದೆ.


ಅವ್ರು ಅವತ್ತು ರಾತ್ರಿ “ ‘ಜೋಕುಮಾರ ಸ್ವಾಮಿ’ಶೂಟಿಂಗ್ಇದೆ ಹೋಗ್ತೀನಿ”ಅಂತ ಹೇಳ್ತಿದ್ರು. ನಾನು ಅವತ್ತು ರಾತ್ರಿ ಚೆನ್ನೈಗೆ ಹೊರಟೆ. ಐ ವಾಸ್ ಆಡಿಟರ್ ಫಾರ್ ಕಮಲಹಾಸನ್ ಫಾರ್ ಫೋರ್ ಯಿಯರ್ಸ್ 1986 ಟು 1990. ಆ ಕೆಲ್ಸದ ಬಗ್ಗೆ ನಾನು ಚೆನ್ನೈಗೆ ಹೋಗಿದ್ದೆ. ಬೆಳಗ್ಗೆ ಹೋಗಿ ಅಲ್ಲಿ ಸ್ನಾನ ಮಾಡ್ತಾ ಇದ್ದಾಗ ನನಿಗೆ ಫೋನ್ ಬಂತು, ಶಂಕರ್ ನಾಗ್ ತೀರೋದ್ರು ಅಂತ. ನೆನ್ನೆ ರಾತ್ರಿ ತಾನೆ ಅವ್ರ ಜೊತೆ ಇದ್ದು, ಇವತ್ತು ಆ ಮನುಷ್ಯ ಇಲ್ಲ ಅಂದ್ರೆ ನಂಬ್ಲಿಕ್ಕೆ ಆಗ್ಲಿಲ್ಲ. ಸರಿ ಏನು ಮಾಡ್ಬೇಕು ಗೊತ್ತಾಗಿಲ್ಲ. ಬಸ್ ಸ್ಟಾಂಡಿಗೆ ಓಡಿ ಬಂದ್ರೆ, ಪೀಟರ್ ಅನ್ನೋರು ಸಿಕ್ಕಿದ್ರು. ಅವ್ರು ಸಂಕೇತ್ ಅಲ್ಲಿ ಸೌಂಡ್ ಇಂಜಿನಿಯರ್ ಆಗಿದ್ರು. ಸೋ ಪೀಟರ್ ಮತ್ತೆ ನಾನು ಹೇಗೋ ಮಾಡಿ ಬೆಂಗಳೂರಿಗೆ ತಲುಪಿದ್ವಿ. ಅಷ್ಟೊತ್ತಿಗೆ ಬಾಡಿ ಸಂಕೇತ್ ಗೆ ಬಂದಿತ್ತು. ಅಲ್ಲಿಗೆ ಹೋಗೋದಕ್ಕೆ ನಮಿಗೆ ವ್ಯವಸ್ಥೆ ಇಲ್ಲ, ಯಾಕಂದ್ರೆ ಸಿಕ್ಕಪಟ್ಟೆ ಜನ ಇದ್ರು. ಬೇರೆ ದಾರಿ ಇಲ್ದೇ ನಾವು ಪಬ್ಲಿಕ್ ಕ್ಯೂನಲ್ಲೇ ನಿಂತ್ಕೊಂಡು ಹೋದ್ವಿ. ಅವ್ರ ಬಾಡಿ ಹತ್ರ ಬಂದಾಗ ನಮ್ಮವ್ರು ಯಾರಾದ್ರೂ ಇರ್ತಾರಲ್ಲಿ ಅಂತ ಗೊತ್ತು, ಅಲ್ಲಿ ಯಾರೋ ಎಳ್ಕೊಂಡ್ರು ಒಳಗಡೆ. ಅದೊಂದು ದುರಂತ ಇವತ್ತಿಗೂ ನಂಬಕ್ಕಾಗಲ್ಲ, ಮರಿಯಕ್ಕೂ ಆಗೊದೇ ಇಲ್ಲ. ಎಷ್ಟು ಬೇಗ ಮುಗ್ದೋಯ್ತು ಅವ್ರ ಕತೆ ಅಂತ.ಮುಂದುವರೆಯುವುದು…

29 views