ಶೂಟಿಂಗ್‌ ಇಲ್ಲದ ವೇಳೆ ಅಣ್ಣಾವ್ರು ಮಾಡ್ತಿದ್ದ ಕೆಲಸ ಇದು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 108


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ರಾಜ್‌ಕುಮಾರ್‌ ಅವರಿಗೆ ಶೂಟಿಂಗ್‌ ಇಲ್ಲದ ವೇಳೆ ಮನೆಯಲ್ಲಿ ಕೂತು, ಕೂತು ಬೇಜಾರಾಗುತ್ತಿತ್ತು. ಊರು ಸುತ್ತೋಣ ಭಗವಾನ್‌ ಎನ್ನುತ್ತಿದ್ದರು. ಅವರನ್ನು ಕಾರಿನಲ್ಲಿ ಕೂರಿಸಿಕೊಂಡು, ಬೀಚ್‌ ಸೇರಿದಂತೆ ಹಲವು ಸ್ಥಳಗಳನ್ನು ಸುತ್ತಿಕೊಂಡು ಬರುತ್ತಿದ್ದೆ.


ಆಗಿನ ಕಾಲದಲ್ಲಿ ಬರ್ಮಾ ಕಡೆಯಿಂದ ಹಡಗಿನಲ್ಲಿ ನಿರಾಶ್ರಿತರು ಮದ್ರಾಸ್‌ಗೆ ಬಂದಿದ್ದರು. ಬೀಚ್‌ ಸಮೀಪ ಹೆಚ್ಚುಕಮ್ಮಿ 200 ಮೀ. ಫುಟ್‌ಪಾತ್‌ ಜಾಗದಲ್ಲಿ ಅಂಗಡಿಗಳನ್ನು ಇರಿಸಿಕೊಳ್ಳಲು ಮದ್ರಾಸ್‌ನಲ್ಲಿ ಅವರಿಗೆ ಸರ್ಕಾರ ಅವಕಾಶ ನೀಡಿತ್ತು. ಅದಕ್ಕೆ ಬರ್ಮಾ ಬಜಾರ್‌ ಎಂದೇ ಹೆಸರಿತ್ತು. ಅದು ಈಗಲೂ ಇದೆ. ಅಲ್ಲಿಗೆ ಹೋದರೆ ಫಾರಿನ್‌ ಸಾಮಗ್ರಿಗಳೆಲ್ಲ ಸಿಗುತ್ತಿತ್ತು. ಅಲ್ಲಿ ಸಾಕಷ್ಟು ಸಾಮಾನುಗಳನ್ನೆಲ್ಲ ತೆಗೆದುಕೊಂಡಿದ್ದೇವೆ. ಆ ಕಾಲದಲ್ಲಿ ಅಲ್ಲೆಲ್ಲ ಕನ್ನಡ ಸಿನಿಮಾ ಓಡುತ್ತಿರಲಿಲ್ಲ. ಹಾಗಾಗಿ ರಾಜ್‌ಕುಮಾರ್ ಅವರು ಅಲ್ಲಿಯವರೆಗೆ ಅಷ್ಟಾಗಿ ಗೊತ್ತಿರಲಿಲ್ಲ.ಮುಂದುವರೆಯುವುದು...

28 views